For Quick Alerts
ALLOW NOTIFICATIONS  
For Daily Alerts

ಡೊನಾಲ್ಡ್ ಟ್ರಂಪ್ ಪರೋಕ್ಷ ವ್ಯಾಪಾರ ನೀತಿ, ಭಾರತಕ್ಕೆ ಭಾರೀ ಅಘಾತ!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿದ್ದು, ಇನ್ನು ಮುಂದೆ ಆದ್ಯತೆಯ ಮೇರೆಗೆ ವ್ಯಾಪಾರ ವಹಿವಾಟು ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

|

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿದ್ದು, ಇನ್ನು ಮುಂದೆ ಆದ್ಯತೆಯ ಮೇರೆಗೆ ವ್ಯಾಪಾರ ವಹಿವಾಟು ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ವೈಟ್ ಹೌಸ್ ನಲ್ಲಿ ಅಮೆರಿಕಾ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖಾಂತರ ವಿಷಯ ತಿಳಿಸಿರುವ ಟ್ರಂಪ್ ಕಡಿಮೆ ತೆರಿಗೆ ಮತ್ತು ಯುಎಸ್ ಮಾರುಕಟ್ಟೆ ಸ್ನೇಹಪರ ಪರಿಸರ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಭಾರತ ಇದೀಗ ಮಾತು ತಪ್ಪುತ್ತಿದೆ ಎಂದಿದ್ದಾರೆ.

ಅಮೆರಿಕಾಗೆ ಅನ್ಯಾಯ

ಅಮೆರಿಕಾಗೆ ಅನ್ಯಾಯ

ಅಮೆರಿಕಾದಿಂದ ಸಾಕಷ್ಟು ದೇಶಗಳು ಲಾಭ ಪಡೆದುಕೊಳ್ಳುತ್ತಿವೆ ಅದರೆ ಅದೇ ರೀತಿಯ ಮಾರುಕಟ್ಟೆ ಸ್ನೇಹಿ ವಾತಾವರಣವನ್ನು ಅಮೆರಿಕಾದ ಉದ್ಯಮಿಗಳಿಗೆ ನಿರ್ಮಾಣ ಮಾಡಿಕೊಡುತ್ತಿಲ್ಲ. ಈ ವಿಚಾರದಲ್ಲಿ ಭಾರತ ಮತ್ತು ಟರ್ಕಿ ದೇಶಗಳು ಪ್ರಮುಖವಾಗಿವೆ ಎಂದು ಡೊನಾಲ್ಡ ಟ್ರಂಪ್ ಹೇಳಿದ್ದಾರೆ.

ಭಾರತ ವಿಫಲ

ಭಾರತ ವಿಫಲ

ಭಾರತವು ಅಮೆರಿಕಕ್ಕೆ ನೀಡಿರುವ ಭರವಸೆ ಈಡೇರಿಸಿಲ್ಲ. ಅಲ್ಲದೇ ಸಾಕಷ್ಟು ವಲಯಗಳಲ್ಲಿ ಅಮೆರಿಕನ್ ಉದ್ಯಮಿಗಳಿಗೆ ಮಾರುಕಟ್ಟೆ ಸ್ನೇಹಿ ಪರಿಸರ ನಿರ್ಮಾಣ ಮಾಡುವಲ್ಲಿ ಎಡವಿದೆ. ಯುಎಸ್ ದಿಂದ ಪೂರಕ ವಹಿವಾಟು ಬಯಸುವ ರಾಷ್ಟ್ರಗಳು ಅಮೆರಿಕಾಗೆ ನೀಡಿದ್ದ ಭರವಸೆಯಂತೆ ತೆರಿಗೆ ರಹಿತ, ತೆರಿಗೆ ವಿನಾಯಿತಿ ಮತ್ತು ಹಲವು ಕ್ಷೇತ್ರಗಳಲ್ಲಿ ತೆರಿಗೆ ವಿನಾಯಿತಿ ಒದಗಿಸಬೇಕಿತ್ತು. ಆದರೆ ಭಾರತ, ಟರ್ಕಿಯಂತ ದೇಶಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ.

ಆದ್ಯತೆ ಮೇರೆಗೆ ವಹಿವಾಟು

ಆದ್ಯತೆ ಮೇರೆಗೆ ವಹಿವಾಟು

ಟಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮೇಲಿನ ಕಾರಣಗಳಿಂದಾಗಿ ಆದ್ಯತೆ ಮೇರೆಗೆ ವಹಿವಾಟು ನಡೆಸಲು ನಿರ್ಧರಿಸುವುದಾಗಿ ಹೇಳಿದ್ದಾರೆ. ಆದ್ಯತೆಯ ಮೇರೆಗೆ ವಹಿವಾಟಿನ ಮೂಲಕ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕ ರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಸುಂಕ ರಹಿತ ಸೌಲಭ್ಯ ಇಲ್ಲ

ಸುಂಕ ರಹಿತ ಸೌಲಭ್ಯ ಇಲ್ಲ

ಟ್ರಂಪ್ ಹೇಳಿದಂತೆ ಇನ್ನುಮುಂದೆ ಭಾರತಕ್ಕೆ ಸುಂಕ ರಹಿತ ಸೌಲಭ್ಯವನ್ನು ನೀಡುವುದಿಲ್ಲ. ಈ ಕುರಿತು ಹಲವು ಬಾರಿ ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆದಿದೆ. ರಫ್ತಾಗುವ ವಸ್ತುಗಳಿಗೂ ಸಮಾನ ಸೌಲಭ್ಯ ನೀಡದಿರುವುದು ಮತ್ತು ಭಾರತದ ಮಾರುಕಟ್ಟೆಗೆ ಅಮೆರಿಕದಿಂದ ರಫ್ತಾಗುವ ವಸ್ತುಗಳು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದು ಪ್ರಮುಖ ಕಾರಣವಾಗಿರುವುದರಿಂದ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

English summary

Donald Trump Says He Plans To End India's Preferential Trade Treatment

Donald Trump said on Monday he intends to end India's preferential trade treatment under a program that allows $5.6 billion worth of Indian exports to enter the United States duty free.
Story first published: Tuesday, March 5, 2019, 10:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X