For Quick Alerts
ALLOW NOTIFICATIONS  
For Daily Alerts

ಅಮೆರಿಕಾದ ಆದ್ಯತಾ ವ್ಯಾಪಾರ ನೀತಿ ಭಾರತದ ರಪ್ತಿನ ಮೇಲೆ ಹೆಚ್ಚು ಪರಿಣಾಮ ಬೀರದು

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದ ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್‌ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಅಂತಹ ಪರಿಣಾಮ ಆಗುವುದಿಲ್ಲ.

|

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದ ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್‌ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಅಂತಹ ಪರಿಣಾಮ ಆಗುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಅಮೆರಿಕಾದ ಆದ್ಯತಾ ವ್ಯಾಪಾರ ನೀತಿ ಭಾರತದ ಮೇಲೆ ಹೆಚ್ಚು ಪರಿಣಾಮ ಬೀರದು

ಆದ್ಯತಾ ವ್ಯಾಪಾರ ನೀತಿ (ಜಿಎಸ್‌ಪಿ) ಅಡಿಯಲ್ಲಿ ಭಾರತ ಅಮೆರಿಕಕ್ಕೆ 560 ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಆದರೆ ವಾರ್ಷಿಕವಾಗಿ 19 ಕೋಟಿ ಡಾಲರ್‌ ಸರಕುಗಳಿಗೆ ಮಾತ್ರ ಸುಂಕ ವಿನಾಯಿತಿ ದೊರೆಯುತ್ತಿತ್ತು ಎಂದು ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ತಿಳಿಸಿದರು.
ಭಾರತವು ಕಚ್ಚಾ ವಸ್ತುಗಳು ಹಾಗೂ ತಕ್ಷಣ ಬಳಸಬಹುದಾದ ಸಾವಯವ ರಾಸಾಯನಿಕಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಭಾರತದ ಜತೆ ಆದ್ಯತಾ ಮೇರೆಗೆ ವಹಿವಾಟು ಸೌಲಭ್ಯಗಳನ್ನು ರದ್ದುಪಡಿಸುವುದಾಗಿ ಟ್ರಂಪ್ ಹೇಳಿದ್ದರು

ಅಮೆರಿಕಾದಿಂದ ಸಾಕಷ್ಟು ದೇಶಗಳು ಲಾಭ ಪಡೆದುಕೊಳ್ಳುತ್ತಿವೆ ಅದರೆ ಅದೇ ರೀತಿಯ ಮಾರುಕಟ್ಟೆ ಸ್ನೇಹಿ ವಾತಾವರಣವನ್ನು ಅಮೆರಿಕಾದ ಉದ್ಯಮಿಗಳಿಗೆ ನಿರ್ಮಾಣ ಮಾಡಿಕೊಡುತ್ತಿಲ್ಲ. ಈ ವಿಚಾರದಲ್ಲಿ ಭಾರತ ಮತ್ತು ಟರ್ಕಿ ದೇಶಗಳು ಪ್ರಮುಖವಾಗಿವೆ ಎಂದು ಡೊನಾಲ್ಡ ಟ್ರಂಪ್ ಹೇಳಿದ್ದರು.

ವೈದ್ಯಕೀಯ ಉಪಕರಣಗಳು, ಡೈರಿ ಉತ್ಪನ್ನಗಳು ಮತ್ತು ಕೃಷಿ ಸರಕುಗಳ ರಪ್ತಿಗೆ ಸುಂಕ ವಿನಾಯಿತಿ ನೀಡಬೇಕೆಂಬ ನಿಯಮ ದ್ವೀಪಕ್ಷಿಯ ವ್ಯಾಪಾರ ಒಳಗೊಂಡಿತ್ತು.
ಯುಎಸ್ ದಿಂದ ಪೂರಕ ವಹಿವಾಟು ಬಯಸುವ ರಾಷ್ಟ್ರಗಳು ಅಮೆರಿಕಾಗೆ ನೀಡಿದ್ದ ಭರವಸೆಯಂತೆ ತೆರಿಗೆ ರಹಿತ, ತೆರಿಗೆ ವಿನಾಯಿತಿ ಮತ್ತು ಹಲವು ಕ್ಷೇತ್ರಗಳಲ್ಲಿ ತೆರಿಗೆ ವಿನಾಯಿತಿ ಒದಗಿಸಬೇಕಿತ್ತು. ಆದರೆ ಭಾರತ, ಟರ್ಕಿಯಂತ ದೇಶಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ ಎಂದು ಟ್ರಂಪ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಪರೋಕ್ಷ ವ್ಯಾಪಾರ ನೀತಿ, ಭಾರತಕ್ಕೆ ಭಾರೀ ಅಘಾತ!

Read more about: donald trump usa india economy
English summary

GSP benefit withdrawal by US will not have much impact on India's exports

India Tuesday said the US government's move to withdraw duty concessions on certain products under the Generalized System of Preferences (GSP).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X