For Quick Alerts
ALLOW NOTIFICATIONS  
For Daily Alerts

ಲಂಡನ್ ಜೈಲಿನಲ್ಲಿ ನೀರವ್ ಮೋದಿ ಹೋಳಿ ಹಬ್ಬ!

|
ಲಂಡನ್ ಜೈಲಿನಲ್ಲಿ ನೀರವ್ ಮೋದಿ ಹೋಳಿ ಹಬ್ಬ!

ದರೋಡೆಕೋರ ವಜ್ರದ ವ್ಯಾಪಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ ವಂಚನೆ ನಡೆಸಿ ದೇಶಬಿಟ್ಟು ಓಡಿ ಹೋದ ನೀರವ್ ಮೋದಿ ಪಾಲಿಗೆ ಈ ಬಾರಿ ಲಂಡನ್‌ ಜೈಲಿನಲ್ಲೇ ಹೋಳಿ ಹಬ್ಬ!

 

ಲಂಡನ್‌ನ ವಾಂಡ್ಸ್‌ವರ್ತ್‌ ಜೈಲಿನಲ್ಲಿ ಕೈದಿಯಾಗಿರುವ ನಿರವ್ ಮೋದಿಯ ಜಾಮೀನು ಅರ್ಜಿಯನ್ನು ಲಂಡನ್ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಮಾರ್ಚ್ 29ರ ವರೆಗೆ ಪೊಲೀಸ್ ಕಸ್ಟಡಿಯಲ್ಲೇ ಇರಬೇಕು. ಲಂಡನ್‌ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯಲು ಪ್ರಯತ್ನಿಸುತ್ತಿರುವಾಗ ನೀರವ್ ಮೋದಿಯನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಅಕ್ರಮ ಲೇವಾದೇವಿ ಪ್ರಕರಣದಲ್ಲಿ ಈತನ ವಿರುದ್ಧ ಸಿಬಿಐ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಅದರನ್ವಯ ಲಂಡನ್ ಪೊಲೀಸರು ಈತನನ್ನು ಬಂಧಿಸಿದ್ದು, ಪ್ರಸ್ತುತ ನೀರವ್ ಮೋದಿಯಿರುವ ಜೈಲಿನಲ್ಲಿ ಸುಮಾರು 1,430 ಪುರುಷ ಕೈದಿಗಳಿದ್ದಾರೆ. ನೀರವ್ ಮೋದಿ ಪ್ರತ್ಯೇಕ ಸೆಲ್‌ ನೀಡುವಂತೆ ಕೋರಿದ್ದು, ಅದನ್ನು ಕೋರ್ಟ್ ಪುರಸ್ಕರಿಸಿಲ್ಲ. ಬಂಧನದ ನಂತರ ಒಂದು ರಾತ್ರಿ ಜೈಲಿನಲ್ಲಿ ಕಳೆದು ಬುಧವಾರ ಕೋರ್ಟಿಗೆ ಈತನನ್ನು ಹಾಜರುಪಡಿಸಲಾಗಿತ್ತು.

Read more about: nirav modi frauds money banking
English summary

Nirav Modi spends Holi in overcrowded U.K. jail

Fugitive diamond merchant Nirav Modi, arrested in London on Wednesday, spent Holi in England's one of the most overcrowded jail.
Story first published: Friday, March 22, 2019, 12:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X