For Quick Alerts
ALLOW NOTIFICATIONS  
For Daily Alerts

ಓದುತ್ತಿರುವಾಗಲೇ ಗೂಗಲ್ ನಲ್ಲಿ ಉದ್ಯೋಗ, ಇತನ ವೇತನ ಕೇಳಿದ್ರೆ ಶಾಕ್ ಆಗ್ತಿರಾ..!

ಇಪ್ಪತ್ತೊಂದರ ಹರೆಯದ ಅಬ್ದುಲ್ಲಾ ಖಾನ್ ಐಐಟಿಯಲ್ಲಿ ಪ್ರವೇಶ ಪಡೆಯುವಲ್ಲಿ ವಿಫಲಾರಿದ್ದರೂ ಕೂಡ, ಅನೇಕ ಐಐಟಿಯನ್ನರು ಅಸೂಯೆ ಪಡುವ ಮಟ್ಟದಲ್ಲಿ ಒಂದೊಳ್ಳೆ ಅವಕಾಶ ಪಡೆದಿದ್ದಾರೆ.

|

ಇಪ್ಪತ್ತೊಂದರ ಹರೆಯದ ಅಬ್ದುಲ್ಲಾ ಖಾನ್ ಐಐಟಿಯಲ್ಲಿ ಪ್ರವೇಶ ಪಡೆಯುವಲ್ಲಿ ವಿಫಲಾರಿದ್ದರೂ ಕೂಡ, ಅನೇಕ ಐಐಟಿಯನ್ನರು ಅಸೂಯೆ ಪಡುವ ಮಟ್ಟದಲ್ಲಿ ಒಂದೊಳ್ಳೆ ಅವಕಾಶ ಪಡೆದಿದ್ದಾರೆ.
ಕೆಲಸ ಗಿಟ್ಟಿಸಿಕೊಳ್ಳಬೇಕೆಂದರೆ ಪದವಿ ಪಡೆದು ಅಲೆದಾಡಬೇಕು. ಆದರೆ ಅಬ್ದುಲ್ಲಾ ಖಾನ್ ಎಂಬ ಯುವಕನಿಗೆ ಓದುತ್ತಿರುವಾಗಲೇ ಕೆಲಸ ಅರಸಿಕೊಂಡು ಬಂದಿದೆ. ಅದೂ ಸಾಮಾನ್ಯ ಕೆಲಸವಲ್ಲ. ಏಕೆಂದರೆ ಇತನಿಗೆ ಒಲಿದಿದ್ದು ಗೂಗಲ್ ಕಂಪನಿಯಲ್ಲಿನ ಉದ್ಯೋಗ.

ವಾರ್ಷಿಕ 1.2 ಕೋಟಿ ವೇತನ

ವಾರ್ಷಿಕ 1.2 ಕೋಟಿ ವೇತನ

ಮುಂಬೈನ ಶ್ರೀ ಎಲ್.ಆರ್. ತಿವಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ (ಕಂಪ್ಯೂಟರ್ ಸೈನ್ಸ್) ವ್ಯಾಸಂಗ ಮಾಡುತ್ತಿರುವ ಅಬ್ದುಲ್ಲಾ ಖಾನ್‍ ಗೆ ಗೂಗಲ್‍ ನ ಲಂಡನ್ ಕಚೇರಿಯಲ್ಲಿ ಉದ್ಯೋಗ ಸಿಕ್ಕಿದೆ. ಇದಕ್ಕಿಂತಲೂ ವಿಶೇಷ ಎಂದರೆ ಆತನ ವಾರ್ಷಿಕ ವೇತನ 1.2 ಕೋಟಿ ರೂಪಾಯಿ. ಸಾಮಾನ್ಯವಾಗಿ ಐಐಟಿ ಹೊಂದಿರದ ಪದವಿದರ ಇಂಜಿನಿಯರ್ ಗಳಿಗೆ ಸರಾಸರಿ ನಾಲ್ಕು ಲಕ್ಷ ವಾರ್ಷಿಕ ವೇತನ ನೀಡಲಾಗುತ್ತದೆ.

ಗೂಗಲ್ ಸಂಸ್ಥೆ ಪ್ರಭಾವಿತ

ಗೂಗಲ್ ಸಂಸ್ಥೆ ಪ್ರಭಾವಿತ

ಗೂಗಲ್ ಸಂಸ್ಥೆಯು ಪ್ರೋಗ್ರಾಮಿಂಗ್ ಸೈಟ್ ಒಂದರಲ್ಲಿ ಅಬ್ದುಲ್ಲಾ ಖಾನ್ ಪ್ರೊಫೈಲ್ ನೋಡಿ ಅದರಿಂದ ಪ್ರಭಾವಿತರಾಗಿ ಈ ಅವಕಾಶ ಒದಗಿಸಿದ್ದಾರೆ. ನಾನು ನನ್ನ ಖುಷಿಗೋಸ್ಕರ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಸವಾಲುಗಳನ್ನು ನಡೆಸುವ ಸೈಟ್ ನಲ್ಲಿ ಭಾಗವಹಿಸುತ್ತಿದ್ದೆ. ಕಂಪನಿಯವರು ಪ್ರೋಗ್ರಾಮರ್ಸ್ ಪ್ರೊಫೈಲ್ ನೋಡುತ್ತಿರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಕೆಲಸ ಸಿಕ್ಕ ಖುಷಿಯನ್ನು ಅಬ್ದುಲ್ಲಾ ಖಾನ್ ಹಂಚಿಕೊಂಡಿದ್ದಾರೆ.

ಸ್ಯಾಲರಿ ಪ್ಯಾಕೇಜ್/ ಸೇರ್ಪಡೆ

ಸ್ಯಾಲರಿ ಪ್ಯಾಕೇಜ್/ ಸೇರ್ಪಡೆ

ಹಲವು ಹಂತದ ಆನ್ಲೈನ್ ಸಂದರ್ಶನದ ನಂತರ, ಲಂಡನ್ ಕಚೇರಿಯಲ್ಲಿ ಕೆಲಸಕ್ಕೆ ಸೇರಲಿದ್ದಾರೆ.
ಆತನ ಆರು-ಅಂಕಿಗಳ ಪ್ಯಾಕೇಜ್ ವಾರ್ಷಿಕ ಬೇಸ್ ಸ್ಯಾಲರಿ ರೂ. 54.5 ಲಕ್ಷ (£ 60,000), ಶೇ. 15ರಷ್ಟು ಬೋನಸ್ ಮತ್ತು ನಾಲ್ಕು ವರ್ಷಗಳಿಗೆ 58.9 ಲಕ್ಷ (85,000 ಡಾಲರ್) ಮೌಲ್ಯದ ಸ್ಟಾಕ್ ಆಯ್ಕೆಗಳು ಒಳಗೊಂಡಿದೆ. ತನ್ನ ಕೊನೆ ವರ್ಷದ BE (ಕಂಪ್ಯೂಟರ್ ಸೈನ್ಸ್) ಮಾಡುತ್ತಿರುವ ಖಾನ್, ಸೆಪ್ಟೆಂಬರ್ ನಲ್ಲಿ ಗೂಗಲ್ ಎಂಜಿನಿಯರಿಂಗ್ ತಂಡವನ್ನು ಸೇರಲಿದ್ದಾನೆ.

English summary

Mumbai youth lands Rs 1.2 crore job at Google's London office

Abdullah Khan (21) may have failed to crack the entrance for IITs, but he has bagged an offer that many IITians would envy. Early this week, Khan landed a job at Google's London office.
Story first published: Friday, March 29, 2019, 15:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X