For Quick Alerts
ALLOW NOTIFICATIONS  
For Daily Alerts

ಮೋದಿ ಮತ್ತೊಮ್ಮೆ, ಸೆನ್ಸೆಕ್ಸ್ 248 ಅಂಕ ಜಂಪ್

|

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಹುಮತದಲ್ಲಿ ಗೆದ್ದಿರುವುದು ಷೇರುಪೇಟೆ ಮೇಲೆ ಸಕರಾತ್ಮಕ ಪ್ರಭಾವ ಬೀರಿದೆ. ಹೂಡಿಕೆದಾರರ ಉತ್ಸುಕತೆಯಿಂದಾಗಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳು ದಾಖಲೆಗಳಲ್ಲಿ ದಿನದ ವಹಿವಾಟನ್ನು ಮುಗಿಸಿವೆ.

ಸೋಮವಾರದ ವಹಿವಾಟಿನ ಅಂತ್ಯಕ್ಕೆ ಎನ್ಎಸ್ಇ ನಿಫ್ಟಿ ಸೂಚ್ಯಂಕವು 11,900 ಮಟ್ಟಕ್ಕಿಂತ ಹೆಚ್ಚು ಅಂಕಗಳಲ್ಲಿ ಕೊನೆಗೊಂಡಿತ್ತು. ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 248 ಅಂಕಗಳ ಏರಿಕೆಯೊಂದಿಗೆ 39,686ರ ಮಟ್ಟದಲ್ಲೂ ಹಾಗು ನಿಫ್ಟಿ ಸೂಚ್ಯಂಕವು 80.70 ಅಂಕಗಳೊಂದಿಗೆ 11924.80 ಅಂಶಗಳಲ್ಲಿ ದಿನದ ವಹಿವಾಟು ಮುಗಿಸಿದ್ದವು.

ಮೋದಿ ಮತ್ತೊಮ್ಮೆ, ಸೆನ್ಸೆಕ್ಸ್ 248 ಅಂಕ ಜಂಪ್

 

ಸುಮಾರು 1782 ಷೇರುಗಳು ಮುಂದುವರಿದವು, 797 ಷೇರುಗಳು ಕುಸಿದವು ಮತ್ತು 160 ಷೇರುಗಳು ಯಥಾಸ್ಥಿತಿಯಲ್ಲಿದ್ದವು. ನಿಫ್ಟಿಯಲ್ಲಿ ಟಾಟಾ ಸ್ಟೀಲ್, ಯೆಸ್ ಬ್ಯಾಂಕ್, ಎನ್ಟಿಪಿಸಿ, ಐಓಸಿ ಮತ್ತು ಎಲ್ ಮತ್ತು ಟಿ ಷೇರುಗಳು ಏರಿಕೆ ಕಂಡಿವೆ. ಝೀ ಎಂಟರ್ಟೈನ್ಮೆಂಟ್, ಇಂಡಸ್ ಲ್ಯಾಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ ಮತ್ತು ಭಾರ್ತಿ ಏರ್ಟೆಲ್ ಪ್ರಮುಖವಾಗಿ ನಷ್ಟ ಅನುಭವಿಸಿವೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಪಾಯಿಂಟ್ ಜಿಗಿತವನ್ನು ದಾಖಲಿಸಿತು. ಎನ್ಎಸ್ಇ ನಿಫ್ಟಿ ಸೂಚ್ಯಂಕ 11,900 ಅಂಕಗಳ ಸನಿಹಕ್ಕೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 19 ಪೈಸೆಗಳ ಜಿಗಿತ ದಾಖಲಿಸಿ ರೂ. 69.34 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ನರೇಂದ್ರ ಮೋದಿ ನೇತೃತ್ವದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿದೇಶೀ ಬಂಡವಾಳದ ಒಳಹರಿವು ನಿರಂತರವಾಗಿರುವುದು ಷೇರುಪೇಟೆಯ ಸತತ ಮುನ್ನಡೆಗೆ ಕಾರಣವೆಂದು ಹೇಳಲಾಗಿದೆ.

ಬೆಳಗ್ಗಿನ ವಹಿವಾಟಿನ ಸಂದರ್ಭದಲ್ಲಿ ಯೆಸ್‌ ಬ್ಯಾಂಕ್‌, ಎನ್‌ಟಿಪಿಸಿ, ಟಾಟಾ ಸ್ಟೀಲ್‌, ಸಿಪ್ಲಾ, ಲಾರ್ಸನ್‌; ಟಾಪ್‌ ಲಾಭ ಕಂಡರೆ, ಟೆಕ್‌ ಮಹೀಂದ್ರ, ಝೀ ಎಂಟರಟೇನ್‌ಮೆಂಟ್‌, ಭಾರ್ತಿ ಏರ್‌ಟೆಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಇಂಡಸ್ ಲ್ಯಾಂಡ್ ಬ್ಯಾಂಕ್‌ ನಷ್ಟ ಅನುಭವಿಸಿದವು.

Read more about: sensex bse stocks
English summary

Nifty ends above 11,900, Sensex up 248 points; Tata Steel surges 5%

It was a strong close for the benchmark indices on May 27 with Nifty finished above 11,900 level.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more