For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರು 3.86 ಲಕ್ಷ ಕೋಟಿ ಲಾಭ ಗಳಿಕೆ

ಮೋದಿ ನೇತೃತ್ವದ ಎನ್ಡಿಎ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿರುವುದು ದೇಶದ ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು, ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರು ರೂ. 3.86 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ.

|

ಮೋದಿ ನೇತೃತ್ವದ ಎನ್ಡಿಎ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿರುವುದು ದೇಶದ ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು, ಕಳೆದ ಎರಡು ದಿನಗಳಲ್ಲಿ ಹೂಡಿಕೆದಾರರು ರೂ. 3.86 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ.

ಹೂಡಿಕೆದಾರರು 3.86 ಲಕ್ಷ ಕೋಟಿ ಲಾಭ ಗಳಿಕೆ

ಮುಂಬೈ ಷೇರುಪೇಟೆಯಲ್ಲಿ (ಬಿಎಸ್ಇ) ನೋಂದಣಿಯಾದ ಕಂಪನಿಗಳ ಮಾರುಕಟ್ಟೆ ಬಂಡವಾಳವು ರೂ. 3.86 ಲಕ್ಷ ಕೋಟಿ ಏರಿಕೆಯಾಗಿದೆ. ಮೇ 23 ರಂದು ಲೋಕಸಭಾ ಫಲಿತಾಂಶ ಪ್ರಕಟವಾದ ದಿನ ವಹಿವಾಟಿನ ಸಮಯದಲ್ಲಿ ಸೆನ್ಸೆಕ್ಸ್ 40,124.96 ರ ಸಾರ್ವಕಾಲಿಕ ಹೆಚ್ಚಿನ ಮಟ್ಟವನ್ನು ತಲುಪಿತ್ತು.
ಮಂಗಳವಾರ ಸುಮಾರು 2.45ರ ಸುಮಾರಿಗೆ ಮುಂಬೈ ಷೇರುಪೇಟೆ ಸೂಚ್ಯಂಕವು 40 ಪಾಯಿಂಟ್ ಕುಸಿತ ಕಂಡು, 39,643 ಅಂಶಗಳ ಮಟ್ಟದಲ್ಲೂ ಹಾಗು ಎನ್ಎಸ್ಇ ನಿಫ್ಟಿ ಸೂಚ್ಯಂಕ 32 ಪಾಯಿಂಟ್ ಇಳಿಕೆಯೊಂದಿಗೆ 11892 ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು.
ಯೆಸ್ ಬ್ಯಾಂಕ್, ಕೋಲ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದರೆ, ಎಚ್ಡಿಎಫ್ಸಿ, ಹೀರೋ ಮೋಟೋಕಾರ್ಪ್ ಮತ್ತು ಭಾರ್ತಿ ಏರ್ಟೆಲ್ ಅತಿ ಹೆಚ್ಚು ನಷ್ಟ ಅನುಭವಿಸಿದವು.
ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 20 ಪೈಸೆ ಕುಸಿತ ಕಂಡು 69.70 ರೂಪಾಯಿಗಳಿಗೆ ತಲುಪಿದೆ.

English summary

Investor wealth sees Rs 3.86 lakh crore jump in 2 days

Investors' wealth has gone up by Rs 3.86 lakh crore in two days of market rise where the Sensex has gained 872 points after the decisive mandate for the BJP in the general election.
Story first published: Tuesday, May 28, 2019, 14:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X