For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ ಇಂಟರೊಪರಬಿಲಿಟಿ - ಎಲ್ಲರಿಗೂ 'ಆರ್ಬಿಟ್ರೇಜ್' ಅವಕಾಶ

By ಕೆ.ಜಿ. ಕೃಪಾಲ್
|

ಭಾರತದ ಷೇರು ಮಾರುಕಟ್ಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ ಇ) ಅತಿ ಹೆಚ್ಚು ಕಂಪೆನಿಗಳು ಲಿಸ್ಟಿಂಗ್ ಆಗಿರುವ, ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ವಿನಿಮಯ ಕೇಂದ್ರ. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಅತಿ ಹೆಚ್ಚು ವಹಿವಾಟು ದಾಖಲಿಸುತ್ತಿರುವ ವಿನಿಮಯ ಕೇಂದ್ರವಾಗಿದೆ.

ಇತ್ತೀಚೆಗೆ ' ಒನ್ ನೇಷನ್ ಒನ್ ಎಲೆಕ್ಷನ್', ' ಒನ್ ರಾಂಕ್ ಒನ್ ಪೆನ್ಷನ್' (ಒಆರ್ ಒಪಿ) ಎಂಬುದು ಚರ್ಚೆಯಲ್ಲಿ ಇರುವಾಗಲೇ ತಾಂತ್ರಿಕತೆಯ ಪರಿಣಾಮವಾಗಿ ಈಗ ' ಒನ್ ನೇಷನ್ ಒನ್ ಸ್ಟಾಕ್ ಎಕ್ಸ್ ಚೇಂಜ್' ಎನ್ನುವತ್ತ ನಮ್ಮ ದೇಶ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಜುಲೈ ಹದಿನೈದರಿಂದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ಮಧ್ಯೆ ಇಂಟರೊಪರಬಿಲಿಟಿ (Interoperability) ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.

ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಗೊಂದಲ; ಇದ್ಯಾಕೆ ಹೀಗೆಲ್ಲ?ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಗೊಂದಲ; ಇದ್ಯಾಕೆ ಹೀಗೆಲ್ಲ?

ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಪ್ರತ್ಯೇಕವಾಗಿ ಟಿಕೆಟ್ ಪಡೆದು ಪ್ರಯಾಣಿಸುವ ಈಗಿನ ಪದ್ಧತಿಯ ಬದಲು ಬಸ್ ಪಾಸ್ ಪಡೆದು, ಯಾವ ಬಸ್ಸಿನಲ್ಲಾದರೂ ಪ್ರಯಾಣಿಸುವ ಅರ್ಹತೆ, ಮಾನ್ಯತೆ ಪಡೆಯುವಂತೆ, ಯಾವ ವಿನಿಮಯ ಕೇಂದ್ರದಲ್ಲಾದರೂ ಖರೀದಿಸಿ ಮತ್ತೊಂದರಲ್ಲಿ ಮಾರಾಟ ಮಾಡಬಹುದಾದ ಅವಕಾಶವನ್ನು ಕಲ್ಪಿಸುವ ಈ ವಿಧವು ಎಷ್ಟರ ಮಟ್ಟಿಗೆ ಸಾಮಾನ್ಯ ಹೂಡಿಕೆದಾರರಿಗೂ ಪ್ರಯೋಜನಕಾರಿ ಎಂಬುದನ್ನು ಕಾದುನೋಡಬೇಕಷ್ಟೆ.

ಷೇರು ಪೇಟೆಯಲ್ಲಿ ಇಂಟರೊಪರಬಿಲಿಟಿ - ಎಲ್ಲರಿಗೂ 'ಆರ್ಬಿಟ್ರೇಜ್' ಅವಕಾಶ

ಮುಖ್ಯವಾಗಿ ಎಷ್ಟೇ ಸೌಕರ್ಯಗಳನ್ನು ಒದಗಿಸಿದರೂ ನಿರ್ಧರಿಸುವ ಚೈತನ್ಯ, ಕೌಶಲಗಳು ನಮ್ಮ ಮನಸ್ಥಿತಿಯಲ್ಲಿ ಇರಬೇಕು. ಆಗಲೇ ಯಶಸ್ಸು ಕಾಣಲು ಸಾಧ್ಯ.

ಏನಿದು ಇಂಟರೊಪರಬಿಲಿಟಿ?:
ಸಂಸ್ಥೆಗಳ ನಡುವೆ ಅನಿಯಮಿತವಾದ ಮಟ್ಟದಲ್ಲಿ ಸಂಪನ್ಮೂಲವನ್ನು ಹಂಚಿಕೊಳ್ಳುವುದೇ ಈ ಇಂಟರೊಪರಬಿಲಿಟಿ. ಇದು ಮಾಹಿತಿಯಾಗಲಿ, ತಂತ್ರಜ್ಞಾನವಾಗಲಿ ಅಥವಾ ಅವಕಾಶಗಳಾಗಲಿ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇದಾಗಿದೆ. ಷೇರುಪೇಟೆಯ ದಿಗ್ಗಜ ಸಂಸ್ಥೆಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ನಡುವೆ ಇಂತಹದೊಂದು ಇಂಟರೊಪರಬಿಲಿಟಿ ವ್ಯವಸ್ಥೆ ಜಾರಿಯಾಗುತ್ತಿರುವುದು ತಾಂತ್ರಿಕತೆಯ ಪ್ರಭಾವ ಬಳಕೆಯಾಗುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಸೆನ್ಸೆಕ್ಸ್ ಸೂಚ್ಯಂಕ 407 ಅಂಕ ಕುಸಿತ ಸೆನ್ಸೆಕ್ಸ್ ಸೂಚ್ಯಂಕ 407 ಅಂಕ ಕುಸಿತ

ಷೇರು ವಿನಿಮಯ ಕೇಂದ್ರಗಳು, ಡಿಪಾಜಿಟರಿಸ್, ಚುಕ್ತಾ ಗೃಹಗಳು (Clearing Corporations) ಸೇರಿ ಪೇಟೆಯ ಮೂಲಸೌಕರ್ಯಗಳ ಸಂಸ್ಥೆಗಳಾಗಿವೆ. ಇದುವರೆಗೂ ವಿವಿಧ ವಿನಿಮಯ ಕೇಂದ್ರಗಳು ತಮ್ಮದೇ ಅದ ಚುಕ್ತಾ ಗೃಹಗಳ ಮೂಲಕ ವಹಿವಾಟನ್ನು ಚುಕ್ತಾ ಮಾಡುತ್ತಿವೆ. ಷೇರು ವಿನಿಮಯ ಕೇಂದ್ರಗಳ ವೈಯಕ್ತಿಕ ಗುರುತುಗಳನ್ನು ಗಮನಿಸಬಹುದಾದ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಿ, ಉಳಿಸಿಕೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಗಳ ನಡುವೆ ಯಾವುದೇ ಸಂಬಂಧವಿಲ್ಲದ ರೀತಿಯಲ್ಲಿ ಕಳೆದೆರಡು ದಶಕಗಳಿಗಿಂತ ಹೆಚ್ಚಿನ ಸಮಯದಿಂದ ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಲು ಆಯಾ ವಿನಿಮಯ ಕೇಂದ್ರದಿಂದ ಪ್ರತ್ಯೇಕ ಮಾನ್ಯತೆಯನ್ನು ಪಡೆಯಬೇಕಾಗಿದೆ.

ಪರ್ಸನಲ್ ಸರ್ವಿಸಸ್ ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆ ಪರ್ಸನಲ್ ಸರ್ವಿಸಸ್ ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆ

ಈ ಪದ್ಧತಿಯ ಕಾರಣ ಕೆಲವು ಬಾರಿ ಷೇರಿನ ಬೆಲೆಗಳು ಹೆಚ್ಚಿನ ವ್ಯತಾಸವನ್ನು ಹೊಂದಿರುತ್ತವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಒಂದು ಪ್ರತ್ಯೇಕವಾದ ಸಮೂಹವು ಇರುತ್ತದೆ. ಈ ವಿಧದ ಚಟುವಟಿಕೆಗೆ 'ಆರ್ಬಿಟ್ರೇಜ್' ಎನ್ನುವರು. ಬೇರೆ ಬೇರೆ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಲು ವಹಿವಾಟುದಾರರು, ಬ್ರೋಕರ್ ಗಳು ಹೆಚ್ಚಿನ ಬಂಡವಾಳ, ಮಾರ್ಜಿನ್ ಹಣ ಮುಂತಾದವುಗಳ ಕಡೆ ಹೆಚ್ಚು ಗಮನ ಹರಿಸಬೇಕಾಗುವುದು.

ಹಂತ ಹಂತವಾಗಿ ಜಾರಿಗೊಳಿಸಲು ಶಿಫಾರಸು:
2013ರಲ್ಲಿ ಕೆ.ವಿ. ಕಾಮತ್ ಅವರ ನೇತೃತ್ವದ ಸಮಿತಿಯ ಶಿಫಾರಸಿನಂತೆ ಇಂಟರೊಪರಬಿಲಿಟಿ ಪರಿಶೀಲಿಸಲು 2017 ರಲ್ಲಿ ಸೆಕಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿಯು ರಿಸ್ಕ್ ಮ್ಯಾನೇಜ್ ಮೆಂಟ್, ಟೆಕ್ನಾಲಜಿ, ಫೈನಾನ್ಸ್ ಮತ್ತು ಟ್ಯಾಕ್ಸೆಷನ್ ಗಳ ಪರಿಶೀಲಿಸಲು ಮೂರು ಪ್ರತ್ಯೇಕ ಸಬ್ ಗ್ರೂಪ್ ಗಳನ್ನು ರಚಿಸಲಾಯಿತು.

ಅವು ನೀಡಿದ ವರದಿಯನ್ನು 2018 ರ ಮಾರ್ಚ್ ನಲ್ಲಿ ಸೆಕಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿಯು ಹಂತ ಹಂತವಾಗಿ ಜಾರಿಗೊಳಿಸಲು ಶಿಫಾರಸು ಮಾಡಿತು. ಅಂತಿಮವಾಗಿ ಇಂಟರೊಪರಬಿಲಿಟಿ ಜಾರಿಗೊಳಿಸಲು ಮುಹೂರ್ತ ನಿಶ್ಚಯವಾಗಿದ್ದು, ಈ ಹೊಸ ಪದ್ಧತಿಯ ಪ್ರಕಾರ ಗ್ರಾಹಕರು, ವಹಿವಾಟುದಾರರು ಒಂದು ವಿನಿಮಯ ಕೇಂದ್ರದಲ್ಲಿ ಖರೀದಿ ಮಾಡಿದ್ದನ್ನು ಅದೇ ದಿನ ಮತ್ತೊಂದು ವಿನಿಮಯ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ.

ಇದು ಜುಲೈ ಒಂದರಿಂದ ಜಾರಿಯಾಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಜುಲೈ ಹದಿನೈದಕ್ಕೆ ಮುಂದೂಡಲಾಗಿದೆ. ಇಂಟರೊಪರಬಿಲಿಟಿ ವ್ಯವಸ್ಥೆಯನ್ನು ವಿಶ್ಲೇಷಿಸಬೇಕೆಂದರೆ ಒಂದು ವಿಧದಲ್ಲಿ 'ಆರ್ಬಿಟ್ರೇಜ್' ಚಟುವಟಿಕೆಯನ್ನು ಮೊಟಕುಗೊಳಿಸಿದೆ ಎಂದರೆ ಮತ್ತೊಂದೆಡೆ ಕೇವಲ ಕೆಲವೇ ಕೆಲವರಿಗೆ ಸೀಮಿತವಾಗಿದ್ದ 'ಆರ್ಬಿಟ್ರೇಜ್' ಅವಕಾಶ ಈಗ ಎಲ್ಲರಿಗೂ ಲಭ್ಯವಾಗುವಂತಿದೆ ಎಂದು ಮತ್ತೊಂದು ವಿಧದಲ್ಲಿ ವಿಶ್ಲೇಷಿಸಬಹುದು.

ಆದರೆ, ಪೇಟೆಯು ಒದಗಿಸುವ ವಿಭಿನ್ನ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ವಹಿವಾಟಿನ ಗುರಿಯಾಗಿರಬೇಕು.

English summary

Interoperability in Indian stock market from July 15th

Interoperability in Indian stock market from July 15th. Here is the detail of Interoperability by stock analyst and Oneindia columnist K.G.Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X