For Quick Alerts
ALLOW NOTIFICATIONS  
For Daily Alerts

ಚೀನಾ ಎಫೆಕ್ಟ್! ಸ್ಯಾಮ್ಸಂಗ್ ಭಾರತದಲ್ಲಿ 1000 ಉದ್ಯೋಗ ಕಡಿತಗೊಳಿಸಿದೆ

ಗ್ರಾಹಕರು ಚೀನಾದ ಸ್ಮಾರ್ಟ್ಫೋನ್, ಟೆಲಿವಿಷನ್ ಗಳತ್ತ ಆಕರ್ಷಿತರಾಗುತ್ತಿದ್ದು, ಸ್ಯಾಮ್ಸಂಗ್ ನಂತಹ ದೊಡ್ಡ ಕಂಪನಿಗಳ ಮೇಲೆ ಪರಿಣಾಮ ಬಿರುತ್ತಿದೆ.

|

ವಾಣಿಜ್ಯ ಸಮರದ ಪ್ರಭಾವವೇ ಅಂಥದ್ದು! ಚೀನಾ ಕಂಪನಿಗಳು ಸ್ಮಾರ್ಟ್ಫೋನ್ ಮತ್ತು ಟಿವಿಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರಮುಖ ಬ್ರಾಂಡ್ ಗಳಿಗಿಂತ ಅಗ್ಗವಾಗಿವೆ. ಗ್ರಾಹಕರು ಚೀನಾದ ಸ್ಮಾರ್ಟ್ಫೋನ್, ಟೆಲಿವಿಷನ್ ಗಳತ್ತ ಆಕರ್ಷಿತರಾಗುತ್ತಿದ್ದು, ಸ್ಯಾಮ್ಸಂಗ್ ನಂತಹ ದೊಡ್ಡ ಕಂಪನಿಗಳ ಮೇಲೆ ಪರಿಣಾಮ ಬಿರುತ್ತಿದೆ. ಚೀನಾ ಕಂಪನಿಗಳೊಂದಿಗಿನ ಸಮರದಿಂದಾಗಿ ಸ್ಯಾಮ್ಸಂಗ್ ಭಾರತದಲ್ಲಿ ಸುಮಾರು 1000 ಉದ್ಯೋಗ ಕಡಿತ ಮಾಡಲು ಯೋಜಿಸುತ್ತಿದೆ ಎಂದು ಉದ್ಯಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್ ತಯಾರಕ ಸಂಸ್ಥೆಯ ಉದ್ಯೋಗ ಕಡಿತವು ನಷ್ಟ ಸರಿದೂಗಿಸುವ ಒಂದು ಭಾಗವಾಗಿದೆ. ಸ್ಯಾಮ್ಸಂಗ್ ಈಗಾಗಲೇ ತನ್ನ ಟೆಲಿಕಾಂ ನೆಟ್ವರ್ಕ್ ವಿಭಾಗದ ೧೫೦ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಏಕೆ ನಡೆಯುತ್ತಿದೆ?

ಏಕೆ ನಡೆಯುತ್ತಿದೆ?

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ ಮತ್ತು ಟೆಲಿವಿಷನ್ ವಿಭಾಗದ ಆನ್‌ಲೈನ್ ಮಾರಾಟದಲ್ಲಿ ಕುಂಠಿತಗೊಂಡಿದೆ. 2016 ರಿಂದ ಶಿಯೋಮಿ ಮತ್ತು ಒನ್‌ಪ್ಲಸ್‌ನಂತಹ ಬ್ರಾಂಡ್‌ಗಳು ಆನ್‌ಲೈನ್ ಚಾನೆಲ್ ಮೂಲಕ ಶೀಘ್ರ ಬೆಳವಣಿಗೆಯನ್ನು ಕಂಡಿದೆ. ಭಾರತದಲ್ಲಿ ಆನ್‌ಲೈನ್ ಮೂಲಕ ಪ್ರಸ್ತುತ ಒಟ್ಟು ಸ್ಮಾರ್ಟ್‌ಫೋನ್ ಮಾರಾಟದ ಪ್ರಮಾಣ ಶೇ. 40 ಮತ್ತು ಒಟ್ಟು ಟೆಲಿವಿಷನ್ ಮಾರಾಟ ಶೇ. 30ರಷ್ಟಿದೆ.

ಬ್ರಾಂಡ್ ಪರಿಹಾರ

ಬ್ರಾಂಡ್ ಪರಿಹಾರ

ತನ್ನ ನಿವ್ವಳ ಲಾಭದಲ್ಲಿ ಕುಸಿತವನ್ನು ಮೊದಲು ವರದಿ ಮಾಡಿದಾಗಿನಿಂದ ಸ್ಯಾಮ್ಸಂಗ್ ಇಂಡಿಯಾದ ಸಮಸ್ಯೆಗಳು 2017-18ರಲ್ಲಿ ಪ್ರಾರಂಭವಾದವು. ಕಂಪೆನಿಗಳ ರಿಜಿಸ್ಟ್ರಾರ್ (RoC)ನ ಇತ್ತೀಚಿನ ವರದಿ ಪ್ರಕಾರ, ಹಣಕಾಸು ವರ್ಷ 18 ರಲ್ಲಿ ಕಂಪನಿಯ ನಿವ್ವಳ ಲಾಭವು 10.7% ನಷ್ಟು ಕುಸಿದು, ರೂ. 3,712 ಕೋಟಿಗಳಿಗೆ ತಲುಪಿದ್ದರೆ, ಒಟ್ಟು ಆದಾಯವು ರೂ. 61,065 ಕೋಟಿಯಷ್ಟಿತ್ತು.

ಸ್ಯಾಮ್ಸಂಗ್ ಇಂಡಿಯಾ 20 ಸಾವಿರ ಉದ್ಯೋಗಿಗಳನ್ನು ಹೊಂದಿದೆ

ಸ್ಯಾಮ್ಸಂಗ್ ಇಂಡಿಯಾ 20 ಸಾವಿರ ಉದ್ಯೋಗಿಗಳನ್ನು ಹೊಂದಿದೆ

ಕಂಪನಿಯ ಅಂದಾಜಿನ ಪ್ರಕಾರ, ಸ್ಯಾಮ್‌ಸಂಗ್ ಭಾರತದಲ್ಲಿ ಸುಮಾರು 20,000 ಉದ್ಯೋಗಿಗಳನ್ನು ಹೊಂದಿದೆ. ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡದವರ ಹೆಸರುಗಳು, ತಮ್ಮ ಟೀಮ್ ಗಳಲ್ಲಿ ಉದ್ದೇಶಿತ ಫಲಿತಾಂಶಗಳನ್ನು ನೀಡದವರು, ಅಭಿವೃದ್ದಿಗೆ ಪೂರಕವಾಗದವರುಈ ಪಟ್ಟಿಯಲ್ಲಿದ್ದಾರೆ. ಇದರಲ್ಲಿ ಒಟ್ಟು ಉದ್ಯೋಗಿಗಳ ಶೇಕಡಾ 10ರಷ್ಟು ಜನರಿದ್ದಾರೆ ಎನ್ನಲಾಗಿದೆ. ಆದರೆ ನರ್ದಿಷ್ಟ ಅಂಕಿಅಂಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್ ಸವಾಲು

ಆನ್‌ಲೈನ್ ಸವಾಲು

2016 ರಿಂದ ಶಿಯೋಮಿ ಮತ್ತು ಒನ್‌ಪ್ಲಸ್‌ನಂತಹ ಬ್ರಾಂಡ್‌ಗಳು ಆನ್ಲೈನ್ ಮೂಲಕ ತ್ವರಿತಗತಿಯ ಬೆಳವಣಿಗೆ ಸಾಧಿಸಿದ್ದರೆ, ಸ್ಯಾಮ್‌ಸಂಗ್ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ವಿಫಲವಾಗಿದೆ. ಭಾರತದಲ್ಲಿ ಆನ್‌ಲೈನ್ ಚಾನೆಲ್ ಪ್ರಸ್ತುತ ಒಟ್ಟು ಸ್ಮಾರ್ಟ್‌ಫೋನ್ ಮಾರಾಟ ಶೇ. 40, ಒಟ್ಟು ಟೆಲಿವಿಷನ್ ಮಾರಾಟ ಶೇ. 30ರಷ್ಟಿದೆ.

ಪೈಪೋಟಿಗಾಗಿ ಬೆಲೆ ಇಳಿಕೆ

ಪೈಪೋಟಿಗಾಗಿ ಬೆಲೆ ಇಳಿಕೆ

ಚೀನಾದ ಆನ್‌ಲೈನ್ ಕೇಂದ್ರೀಕೃತ ಬ್ರಾಂಡ್‌ಗಳಾದ ಶಿಯೋಮಿ, ಒನ್‌ಪ್ಲಸ್, ವಿವೊ, ಟಿಸಿಎಲ್ ಮತ್ತು ರಿಯಲ್ಮೆ ನೊಂದಿಗೆ ಪೈಪೋಟಿ ನೀಡಲು, 2017 ರ ಅಂತ್ಯದಿಂದ ಸ್ಯಾಮ್ಸಂಗ್ ಕಂಪನಿಯು ಸ್ಮಾರ್ಟ್‌ಫೋನ್‌ ಮತ್ತು ಟೆಲಿವಿಷನ್ ಬೆಲೆಯನ್ನು ಶೇಕಡಾ 25-40 ರಷ್ಟು ಇಳಿಸಿದೆ.

English summary

Chinese rivals, Samsung to sack 1,000 in India

Samsung will slash about 1,000 jobs in India as the war with Chinese companies forces it to cut prices of smartphones and televisions.
Story first published: Tuesday, July 2, 2019, 12:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X