For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ನಿರ್ಮಲಾ ಸೀತಾರಾಮನ್ ಎದುರಿಸುತ್ತಿರುವ ದೊಡ್ಡ ಸವಾಲುಗಳೇನು?

ಸುಮಾರು ಐದು ದಶಕಗಳಲ್ಲಿ ಭಾರತದ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್ ನೇಮಕಗೊಂಡಿದ್ದು, ದುರ್ಬಲ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಜಾಗತಿಕ ಅಪಾಯಗಳ ಸಂದರ್ಭದಲ್ಲಿ ಆರ್ಥಿಕತೆ ಮುನ್ನಡೆಸಬೇಕಾದ ಮಹತ್ತರ ಜವಾಬ್ದಾರಿ ಇದೆ.

|

ಸುಮಾರು ಐದು ದಶಕಗಳಲ್ಲಿ ಭಾರತದ ಮೊದಲ ಮಹಿಳಾ ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್ ನೇಮಕಗೊಂಡಿದ್ದು, ದುರ್ಬಲ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಜಾಗತಿಕ ಅಪಾಯಗಳ ಸಂದರ್ಭದಲ್ಲಿ ಆರ್ಥಿಕತೆಯನ್ನು ಮುನ್ನಡೆಸಬೇಕಾದ ಮಹತ್ತರ ಜವಾಬ್ದಾರಿ ಅವರ ಹೆಗಲ ಮೇಲಿದೆ.
ಅರುಣ್ ಜೇಟ್ಲಿಯವರು ಆರೋಗ್ಯದ ಸಮಸ್ಯೆಯಿಂದಾಗಿ ಹೊಸ ಸರ್ಕಾರದಲ್ಲಿ ಸಕ್ರಿಯ ಪಾತ್ರ ವಹಿಸದಿರಲು ನಿರ್ಧರಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್ ರನ್ನು ಆಯ್ಕೆ ಮಾಡಿದ್ದಾರೆ. ಮಾಜಿ ರಕ್ಷಣಾ ಮತ್ತು ವ್ಯಾಪಾರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಇಂದಿರಾ ಗಾಂಧಿಯ ನಂತರ ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಪಾಯಗಳು ಹಲವಾರು

ಅಪಾಯಗಳು ಹಲವಾರು

ನೂತನ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್, ಹಲವಾರು ಅಪಾಯಗಳನ್ನು ಎದುರಿಸುತ್ತಿರುವ ಆರ್ಥಿಕತೆಯನ್ನು ಆನುವಂಶಿಕವಾಗಿ ಪಡೆದಿದ್ದಾರೆ. ದುರ್ಬಲ ದೇಶೀ ಅನುಬೋಗದ ಹಿನ್ನಲೆಯಲ್ಲಿ ಬೆಳವಣಿಗೆ ಕುಂಠಿತವಾಗುತ್ತಿದೆ. ಯುಎಸ್-ಚೀನಾ ವಾಣಿಜ್ಯ ಸಮರದ ಕಾರಣ ಜಾಗತಿಕ ಬೇಡಿಕೆ ಕ್ಷೀಣಿಸುತ್ತಿದೆ. ಒಟ್ಟು ದೇಶೀಯ ಉತ್ಪನ್ನ ಮತ್ತು ಬಜೆಟ್ ಕೊರತೆ ಸಂಬಾಳಿಸುವ ಗುರಿ ಇವರ ಮುಂದಿದೆ.
ಜಿಡಿಪಿ ಕುಂಠಿತ, ಉತ್ಪಾದನಾ ವಲಯದಲ್ಲಿನ ಕುಸಿತ, ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳನ್ನು ಎದುರಿಸಿ ಆರ್ಥಿಕತೆಯನ್ನು ಮುನ್ನಡಸಲು ಲಭಿಸಿರುವ ಮೊದಲ ಅವಕಾಶ ಇದಾಗಿದೆ.

ಮೊದಲ ಅನುಭವ

ಮೊದಲ ಅನುಭವ

59 ವರ್ಷದ ನಿರ್ಮಲಾ ಸೀತಾರಾಮನ್ ಅವರು 2014 ರಲ್ಲಿ ಮೋದಿಯವರ ಸಂಪುಟದಲ್ಲಿ ಸಚಿವರಾಗುವ ಮೊದಲು ಬಿಜೆಪಿಯ ಪ್ರಮುಖ ವಕ್ತಾರರಾಗಿ ಅನುಭವ ಹೊಂದಿದ್ದರು. ಅವರಿಗೆ ಜೇಟ್ಲಿಯ ನೇತೃತ್ವದಲ್ಲಿ ಹಣಕಾಸು ಸಚಿವಾಲಯದಲ್ಲಿ ಕಿರಿಯ ಸಚಿವರ ಜವಾಬ್ದಾರಿಯನ್ನು ನೀಡಲಾಯಿತು.
ಅರುಣ್ ಜೇಟ್ಲಿ ಮತ್ತು ಪಿ. ಚಿದಂಬರಂರಂತೆ ಇವರು ರಾಜಕೀಯ ಹಿಡಿತ ಹೊಂದಿಲ್ಲವಾದರೂ, ಮೋದಿ ತಂಡದ ಕಠಿಣ ಪರಿಶ್ರಮಿ ಸದಸ್ಯೆ ಎಂದು ಕರೆಯಲ್ಪಡುತ್ತಿದ್ದು, ಪ್ರಧಾನಿಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ.

ನಿರ್ಮಲಾ ಸೀತಾರಾಮನ್ ನೈಪುಣ್ಯತೆ

ನಿರ್ಮಲಾ ಸೀತಾರಾಮನ್ ನೈಪುಣ್ಯತೆ

ಇತ್ತೀಚಿಗೆ ನಿರ್ಮಲಾ ಸೀತಾರಾಮನ್ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಲಿಲ್ಲ. ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಶಾಸಕರಾಗಿದ್ದಾರೆ. ಆದರೆ ಚುನಾವಣೆಯ ಸಮಯದಲ್ಲಿ ಪ್ರಮುಖ ಪ್ರಚಾರಕರಾಗಿದ್ದರು. ಹಿಂದಿನ ಸಚಿವಾಲಯಗಳಲ್ಲಿ ಅವರ ನಿರ್ವಹಣೆ ಆಕರ್ಷಕವಾಗಿತ್ತು. ಅವರಿಗೆ ಸಾಕಷ್ಟು ತಾಂತ್ರಿಕ, ವೃತ್ತಿಪರ ಜ್ಞಾನವಿದ್ದು, ಅವರ ಬತ್ತಳಿಕೆಯಲ್ಲಿ ತುಂಬಾ ಸಕಾರಾತ್ಮಕ ಅಂಶಗಳಿವೆ ಎಂದು ಮುಂಬೈನ ಯೆಸ್ ಬ್ಯಾಂಕ್ ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಶುಭದ ರಾವ್ ಹೇಳಿದ್ದಾರೆ.

ಬಜೆಟ್ 2019: ಈ 5 ಆದಾಯ ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸಬಹುದುಬಜೆಟ್ 2019: ಈ 5 ಆದಾಯ ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸಬಹುದು

English summary

Budget 2019: Here are the biggest challenges facing Nirmala Sitharaman

Nirmala Sitharaman was appointed finance minister in almost five decades to steer the economy through a rocky patch of weak growth and mounting global risks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X