For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ನಿರ್ಮಲಾ ಸೀತಾರಾಮನ್ ತೆರಿಗೆ ವಿನಾಯಿತಿ ಒಳಗೊಂಡಂತೆ ಈ 5 ಯೋಜನೆಗಳನ್ನು ಘೋಷಿಸಬಹುದು

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಕೇಂದ್ರ ಬಜೆಟ್ ಅನ್ನು ಇಂದು ಮಂಡಿಸಲಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆ ತೀವ್ರ ಮಂದಗತಿಯಲ್ಲಿರುವ ಸಮಯದಲ್ಲಿ ಹೊಸ ಬಜೆಟ್ ಹಲವು ಕಾರಣಗಳಿಗಾಗಿ ವಿಶೇಷವಾಗಿದೆ. ಬಜೆಟ್ ಸಣ್ಣ ಎಂಎಸ್‌ಎಂಇಗಳಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ಬಿಕ್ಕಟ್ಟನ್ನು ನಿಭಾಯಿಸಲು ಸಹಾಯಕವಾಗಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರವು ಎಂಎಸ್‌ಎಂಇಗಳಿಗೆ ಹೆಚ್ಚಿನ ಬೆಂಬಲವನ್ನು ಘೋಷಿಸುವ ಸಾಧ್ಯತೆಯಿದೆ.

ತೆರಿಗೆ ವಿನಾಯಿತಿ
 

ತೆರಿಗೆ ವಿನಾಯಿತಿ

ಮೂಲಗಳ ಪ್ರಕಾರ, ತೆರಿಗೆ ವಿನಾಯಿತಿ ಮಿತಿಯನ್ನು ರೂ. 2.5 ಲಕ್ಷದಿಂದ ರೂ. 3 ಲಕ್ಷಕ್ಕೆ ಹೆಚ್ಚಿಸಬಹುದು. ಅಲ್ಲದೆ, ರೂ. 5-8 ಲಕ್ಷಗಳ ಆದಾಯದ ಮೇಲೆ ಶೇ. 10 ರಷ್ಟು ಹೊಸ ತೆರಿಗೆ ಸ್ಲ್ಯಾಬ್ ಅನ್ವಯಿಸುವ ಸಾಧ್ಯತೆಯಿದೆ. ಹೂಡಿಕೆಯ ಮೇಲೆ, ತೆರಿಗೆ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ. 1.50 ಲಕ್ಷಗಳಿಂದ ರೂ. 2 ಲಕ್ಷಕ್ಕೆ ಏರಿಸಬಹುದು.

ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ರೂ. 2 ಲಕ್ಷಗಳಿಂದ ರೂ. 2.50 ಲಕ್ಷದವರೆಗೆ ಹೆಚ್ಚಿಸಬಹುದು.

ರೈತರಿಗೆ ಪರಿಹಾರ

ಸಣ್ಣ ಮತ್ತು ಅತಿಸಣ್ಣ ರೈತರಿಗೆ 60 ವರ್ಷ ದಾಟಿದ ನಂತರ ಅವರಿಗೆ ರೂ. 3000 ಪಿಂಚಣಿ ನೀಡಲು ವಿಶೇಷ ನಿಧಿಯನ್ನು ಘೋಷಿಸಲಾಗುವುದು. ರೈತರ ಆದಾಯವನ್ನು ಹೆಚ್ಚಿಸಲು ರಾಷ್ಟ್ರೀಯ ಜೇನು ಸಾಕಣೆಗಾಗಿ ವಿಶೇಷ ಪ್ರೋತ್ಸಾಹ ಘೋಷಿಸಬಹುದು. ಗ್ರಾಮೀಣ ಪ್ರದೇಶಗಳಿಗೆ ಮತ್ತು ರೈತರ ಅಭಿವೃದ್ಧಿಗೆ ವಿಶೇಷ ನಿಧಿ ಘೋಷಣೆ ಮಾಡಬಹುದು.

ಆಮದು ಸುಂಕ ರಿಯಾಯಿತಿ

ನೀರಿನ ಸಂರಕ್ಷಣೆ ಮತ್ತು ನೀರಾವರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಬಹುದು. ಆಮದು ಸುಂಕವನ್ನು ಸಡಿಲಿಸಬಹುದು. ಎಲೆಕ್ಟ್ರಾನಿಕ್ ಉದ್ಯಮದ ಅಡಿಯಲ್ಲಿ, 'ಮೇಕ್ ಇನ್ ಇಂಡಿಯಾ ಯೋಜನೆ' ಮತ್ತು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೆಲವು ಹಾರ್ಡ್‌ವೇರ್ ಮತ್ತು ಉತ್ಪಾದನಾ ಸರಕುಗಳ ಮೇಲೆ ಆಮದು ಸುಂಕವನ್ನು ಸಡಿಲಿಕೆ ಮಾಡಬಹುದು. ಜೊತೆಗೆ ಹೊಸ ವೈಜ್ಞಾನಿಕ ಕಾರ್ಯಾಚರಣೆಯನ್ನು ಸಹ ಕೈಗೊಳ್ಳಬಹುದು.

ಪ್ರಾಣಿಗಳ ಆರೋಗ್ಯ ಸೇವೆ, ಮೇವು
 

ಪ್ರಾಣಿಗಳ ಆರೋಗ್ಯ ಸೇವೆ, ಮೇವು

ಪ್ರಾಣಿಗಳಿಗೆ ಆರೋಗ್ಯ ಸೇವೆಗಾಗಿ ಆಸ್ಪತ್ರೆಗಳು ತೆರೆಯಬಹುದು. ಮೇವು ಕೊರತೆಯ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಮೇವು ಮತ್ತು ಪ್ರಾಣಿಗಳ ಆಹಾರ ಮಿಷನ್ ಪ್ರಾರಂಭಿಸಬಹುದು. ಗ್ರಾಮೀಣ ನಿವಾಸಿಗಳಿಗೆ ನೀರು, ಶಾಶ್ವತ ಮನೆಗಳು ಮತ್ತು ಇತರ ಯೋಜನೆಗಳಿಗಾಗಿ ಆದ್ಯತೆ ನೀಡಬಹುದು.

ಶಾಶ್ವತ ಮನೆ

2022 ರ ವೇಳೆಗೆ ಕಚ್ಚಾ ಮನೆಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಶಾಶ್ವತ ಮನೆ ಒದಗಿಸಲು ಪಿಎಂ ಅವಾಸ ಯೋಜನೆಗೆ ಉತ್ತೇಜನ ನೀಡಬಹುದು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟುಂಬಕ್ಕೂ 2024 ರ ವೇಳೆಗೆ ಕೊಳವೆ ನೀರು ಪೂರೈಕೆ, 2022 ರ ವೇಳೆಗೆ ಪ್ರತಿಯೊಂದು ಹಳ್ಳಿಯನ್ನು ಹೈಸ್ಪೀಡ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಮೂಲಕ ಸಂಪರ್ಕಿಸುವ ಯೋಜನೆ ಇದೆ.

ಬಜೆಟ್ 2019: ಈ 5 ಆದಾಯ ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸಬಹುದು

English summary

Union Budget 2019: Nirmala Sitharaman will announce these 5 plans including tax exemption

As per sources, tax exemption limit may be hiked from Rs 2.5 lakh to Rs 3 lakh.
Story first published: Friday, July 5, 2019, 10:25 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more