For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್! ಇಲ್ಲಿದೆ ಹೊಸ ಪ್ರಿಪೇಡ್ ಪ್ಲಾನ್ ವಿವರ

ದೂರಸಂಪರ್ಕ ವಲಯದಲ್ಲಿ ದರ ಸಮರದ ಪೈಪೋಟಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಚಂದಾದಾರರಿಗಾಗಿ ಎರಡು ಹೊಸ ದೀರ್ಘಕಾಲೀನ ಪ್ರಿಪೇಡ್ ಯೋಜನೆಗಳನ್ನು ಪ್ರಾರಂಭಿಸಿದೆ.

|

ದೂರಸಂಪರ್ಕ ವಲಯದಲ್ಲಿ ದರ ಸಮರದ ಪೈಪೋಟಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಚಂದಾದಾರರಿಗಾಗಿ ಎರಡು ಹೊಸ ದೀರ್ಘಕಾಲೀನ ಪ್ರಿಪೇಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಬಿಎಸ್ಎನ್‌ಎಲ್ ಪರಿಚಯಿಸುತ್ತಿರುವ ಈ ಹೊಸ ಯೋಜನೆಯು ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ನ್ ದೀರ್ಘಾವಧಿಯ ಪ್ರಿಪೇಡ್ ಯೋಜನೆಗಳೊಂದಿಗೆ ಪೈಪೋಟಿ ನೀಡಲಿದೆ. ಬಿಎಸ್ಎನ್ಎಲ್ ಹೊಸ ಯೋಜನೆಯ ವಿವರ ನೋಡೋಣ ಬನ್ನಿ..

 

ಬಿಎಸ್‌ಎನ್‌ಎಲ್ ರೂ. 1,399 ದೀರ್ಘಾವಧಿ ಪ್ರಿಪೇಡ್ ಪ್ಲಾನ್

ಬಿಎಸ್‌ಎನ್‌ಎಲ್ ರೂ. 1,399 ದೀರ್ಘಾವಧಿ ಪ್ರಿಪೇಡ್ ಪ್ಲಾನ್

ಹೊಸ ಬಿಎಸ್ಎನ್ಎಲ್ ಯೋಜನೆಗಳು 270 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ, ಬಳಕೆದಾರರು ಯಾವುದೇ ಎಫ್‌ಯುಪಿ ಇಲ್ಲದೆ ಭಾರತದ ಯಾವುದೇ ಸಂಖ್ಯೆಗೆ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಕರೆ ಪ್ರಯೋಜನಗಳ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ರೋಮಿಂಗ್ ಸೌಲಭ್ಯ ಕೂಡ ಒಳಗೊಂಡಿದೆ. ಆದಾಗ್ಯೂ, ಎಂಟಿಎನ್ಎಲ್ ನೆಟ್‌ವರ್ಕ್ ಹೊಂದಿರುವ ಮುಂಬೈ ಮತ್ತು ದೆಹಲಿ ವಲಯಗಳಲ್ಲಿ ಇದು ಲಭ್ಯವಿರುವುದಿಲ್ಲ. ಬಳಕೆದಾರರು ಪ್ರತಿದಿನ 50 ಎಸ್‌ಎಂಎಸ್ ಮತ್ತು ಪ್ರತಿದಿನ 1.5 ಜಿಬಿ ಹೈಸ್ಪೀಡ್ 3ಜಿ ಡೇಟಾ ಪಡೆಯುತ್ತಾರೆ.ಯೋಜನೆಯ ಅವಧಿವರೆಗೆ 405GB ವರೆಗೆ ಡೇಟಾವನ್ನು ಡೌನ್‌ಲೋಡ್ ಮಾಡಬಹುದು.

ಬಿಎಸ್ಎನ್‌ಎಲ್ ರೂ. 1,001 ಯೋಜನೆ

ಬಿಎಸ್ಎನ್‌ಎಲ್ ರೂ. 1,001 ಯೋಜನೆ

ಬಿಎಸ್ಎನ್ಎಲ್ ನ ರೂ. 1,001 ಯೋಜನೆಯು ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಮೇಲಿನ ರೂ. 1,399 ಪ್ರಿಪೇಡ್ ಯೋಜನೆಯಂತೆಯೇ ಇರುತ್ತವೆ. ಆದರೆ, ಎಸ್ಎಂಎಸ್ ಮತ್ತು ಡೇಟಾ ಪ್ರಯೋಜನಗಳು ಬದಲಾಗುತ್ತವೆ. ಸಂಪೂರ್ಣ 270 ದಿನಗಳ ಅವಧಿಯಲ್ಲಿ ಯೋಜನೆಯು 9 ಜಿಬಿ ಡೇಟಾವನ್ನು ನೀಡುತ್ತದೆ. ಜೊತೆಗೆ, 750 ಸ್ಥಳೀಯ ಮತ್ತು ರಾಷ್ಟ್ರೀಯ SMS ಗಳನ್ನು ಸಹ ಪಡೆಯುತ್ತೀರಿ.

ಜುಲೈ 25 ರಿಂದ ಆರಂಭ
 

ಜುಲೈ 25 ರಿಂದ ಆರಂಭ

ಈ ಎರಡೂ ಯೋಜನೆಗಳು ಜುಲೈ 25 ರಿಂದ 90 ದಿನಗಳ ಪ್ರಮೋಷನ್ ಅವಧಿಯೊಂದಿಗೆ ಜಾರಿಯಲ್ಲಿವೆ. ಅಂದರೆ, ಅಕ್ಟೋಬರ್ 25 ರವರೆಗೆ ನೀವು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬಿಎಸ್ಎನ್ಎಲ್ ದೀರ್ಘಾವಧಿಯ ಪ್ರಿಪೇಡ್ ಯೋಜನೆಗಳು ಆಂಧ್ರಪ್ರದೇಶ ಮತ್ತು ತೆಲಂಗಾಣ ವಲಯಗಳಲ್ಲಿ ಮಾತ್ರ ಲಭ್ಯವಿದೆ.

ಬಿಎಸ್ಎನ್ಎಲ್ ಸ್ಟಾರ್ ಮೆಂಬರ್ಶಿಪ್

ಬಿಎಸ್ಎನ್ಎಲ್ ಸ್ಟಾರ್ ಮೆಂಬರ್ಶಿಪ್

ಬಿಎಸ್ಎನ್ಎಲ್ ಇತ್ತೀಚೆಗೆ ರೂ. 498ಕ್ಕೆ ಹೊಸ ಸ್ಟಾರ್ ಸದಸ್ಯತ್ವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆ ಸೌಲಭ್ಯ, 30 ಜಿಬಿ ಡೇಟಾ, ಪ್ರತಿದಿನ 100 ಎಸ್ಎಂಎಸ್ ಮತ್ತು 365 ದಿನಗಳ ಸಿಂಧುತ್ವವನ್ನು ಹೊಂದಿದೆ. ಕರೆ ಮತ್ತು ಡೇಟಾ ಪ್ರಯೋಜನ 30 ದಿನಗಳಿಗೆ ಅನ್ವಯವಾಗುತ್ತವೆ. ನಂತರ ನಿಯಮಿತವಾಗಿ ರೀಚಾರ್ಜ್ ಮಾಡಬೇಕಾಗುತ್ತದೆ. ನಂತರದ ರೀಚಾರ್ಜ್‌ಗಳ ಮೇಲೆ ಬಿಎಸ್‌ಎನ್‌ಎಲ್ ಸ್ವಲ್ಪ ರಿಯಾಯಿತಿ ನೀಡಲಿದೆ.

English summary

BSNL Rs 1,399, Rs 1,001 long-term prepaid plans launched

State-run telco, BSNL, has debuted two new long-term prepaid plans for its subscribers.
Story first published: Saturday, July 27, 2019, 12:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X