For Quick Alerts
ALLOW NOTIFICATIONS  
For Daily Alerts

ಐಟಿ ಕಂಪನಿಗಳ ನೇಮಕಾತಿ ಶೇ. 57 ಹೆಚ್ಚಳ

ಕಳೆದ ಏಳೆಂಟು ತ್ರೈಮಾಸಿಕಗಳಲ್ಲಿ ನಿಧಾನವಾಗಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ನೇಮಕಾತಿ ಮತ್ತೆ ವೇಗವನ್ನು ಪಡೆಯುತ್ತಿದೆ.

|

ಕಳೆದ ಏಳೆಂಟು ತ್ರೈಮಾಸಿಕಗಳಲ್ಲಿ ನಿಧಾನವಾಗಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ನೇಮಕಾತಿ ಮತ್ತೆ ವೇಗವನ್ನು ಪಡೆಯುತ್ತಿದೆ.

ಐಟಿ ವಲಯದ ನೇಮಕಾತಿ ಶೇ. 57 ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಅಗ್ರ ಐದು ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 57 ಹೆಚ್ಚು ನೇಮಕಾತಿ ಮಾಡಿವೆ.
ಈ ಐದು ಐಟಿ ಸೇವಾ ಸಂಸ್ಥೆಗಳು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 27,300 ಕ್ಕಿಂತ ಹೆಚ್ಚು ನೇಮಕಾತಿ ಮಾಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 17,383 ರಷ್ಟಿತ್ತು. ದೇಶದ ಆರ್ಥಿಕ ಕುಸಿತ, ಅನಿಶ್ಚಿತತೆಯ ನಡುವೆ ಮಾಹಿತಿ ತಂತ್ರಜ್ಞಾನ ವಲಯದಲ್ಲಿನ ನೇಮಕಾತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವ ಕಂಪನಿಗಳಲ್ಲಿ ಪಟ್ಟಿಯಲ್ಲಿ ಟಿಸಿಎಸ್ ಅಗ್ರ ಸ್ಥಾನದಲ್ಲಿದೆ. ಟಿಸಿಎಸ್ 12,356 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಇನ್ಫೋಸಿಸ್ 906 ಜನರನ್ನು ನೇಮಕ ಮಾಡಿಕೊಂಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕ್ಯಾಂಪಸ್‌ ಆಯ್ಕೆಗಳೂ ಹೆಚ್ಚು ನಡೆದಿವೆ.
ಆದಾಯದ ಹೆಚ್ಚಿನ ಪಾಲು ಹೊಂದಿರುವ ಅಗ್ರ ಐದು ಐಟಿ ಕಂಪನಿಗಳು ಕಳೆದ ಆರು-ಎಂಟು ತ್ರೈಮಾಸಿಕಗಳಲ್ಲಿ ಸಾಂಪ್ರದಾಯಿಕ ಸೇವೆಗಳಿಂದ ಡಿಜಿಟಲ್ ಸೇವೆಗಳಿಗೆ ತಮ್ಮ ಗಮನವನ್ನು ಬದಲಾಯಿಸಿದ್ದವು. ಗ್ರಾಹಕರಿಂದ ಬದಲಾಗುತ್ತಿರುವ ಬೇಡಿಕೆಯನ್ನು ಪೂರೈಸಲು ಆದ್ಯತೆ ನೀಡಿವೆ. ಆದಾಗ್ಯೂ, ವಾಣಿಜ್ಯ ಸಮಸ್ಯೆಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕೃತಗೊಂಡ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪರಿಹರಿಸುವ ಬಗ್ಗೆ ಹೆಚ್ಚು ಪ್ರಯತ್ನ ನಡೆದಿದೆ. ಇದು ಸಾಫ್ಟ್‌ವೇರ್ ಎಂಜಿನಿಯರ್‌ ಬೇಡಿಕೆಯನ್ನು ಕಡಿಮೆ ಮಾಡುತ್ತದೆ.

Read more about: jobs employment tcs infosys
English summary

TCS, Infosys other top IT companies hire 57% more in Q1

IT sector hiring which had slowed in the past six to eight quarters, is gaining momentum again.
Story first published: Tuesday, August 13, 2019, 17:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X