For Quick Alerts
ALLOW NOTIFICATIONS  
For Daily Alerts

ಚೀನಾದ ಕೈಗಾರಿಕಾ ಉತ್ಪಾದನೆ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ

ಜುಲೈ ತಿಂಗಳಲ್ಲಿ ಚೀನಾ ಆರ್ಥಿಕತೆ ಒತ್ತಡಕ್ಕೆ ಒಳಗಾಗಿದ್ದು, ಕೈಗಾರಿಕಾ ಉತ್ಪಾದನೆಯು ಕಳೆದ 17 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ.

|

ಜುಲೈ ತಿಂಗಳಲ್ಲಿ ಚೀನಾ ಆರ್ಥಿಕತೆ ಒತ್ತಡಕ್ಕೆ ಒಳಗಾಗಿದ್ದು, ಕೈಗಾರಿಕಾ ಉತ್ಪಾದನೆಯು ಕಳೆದ 17 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ.

 

ಚೀನಾದ ಕೈಗಾರಿಕಾ ಉತ್ಪಾದನೆ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ

ಚೀನಾ-ಯುಎಸ್ ವಾಣಿಜ್ಯ ಸಮರ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತಿದೆ. ಜೊತೆಗೆ ಹೂಡಿಕೆ ಮತ್ತು ಚಿಲ್ಲರೆ ಮಾರಾಟ ಕೂಡ ನಿಧಾನವಾಗಿದೆ ಎಂದು ಅಧಿಕೃತ ಅಂಕಿ-ಅಂಶ ಬಹಿರಂಗಪಡಿಸಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯು ಯುಎಸ್ ನೊಂದಿಗೆ ಹೆಚ್ಚುತ್ತಿರುವ ವಾಣಿಜ್ಯ ಸಮರ ಮತ್ತು ಜಾಗತಿಕ ಬೇಡಿಕೆ ನಿಧಾನಗತಿಯಿಂದ ಹೇಗೆ ಜರ್ಜರಿತವಾಗಿದೆ ಎಂಬುದನ್ನು ಈ ಅಂಕಿಅಂಶಗಳು ಎತ್ತಿ ತೋರಿಸುತ್ತಿವೆ.
ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ವರ್ಷಕ್ಕೆ ಶೇ. 4.8 ರಷ್ಟಿದ್ದು, ಜೂನ್‌ ತಿಂಗಳಲ್ಲಿನ ಶೇಕಡಾ 6.3ರಿಂದ ಇಳಿದಿದ್ದು, 2002 ರಿಂದ ದುರ್ಬಲ ವೇಗವನ್ನು ಕಂಡಿದೆ.
ಬ್ಲೂಮ್‌ಬರ್ಗ್ ನ್ಯೂಸ್ ಸಮೀಕ್ಷೆ ಪ್ರಕಾರ, ಅರ್ಥಶಾಸ್ತ್ರಜ್ಞರ ಮುನ್ಸೂಚನೆಯ ಶೇಕಡಾ 6.0 ಕ್ಕಿಂತಲೂ ಕಡಿಮೆಯಾಗಿದೆ.
ಸಂಕೀರ್ಣತೆ ಮತ್ತು ಗಂಭೀರವಾದ ಬಾಹ್ಯ ವಾತಾವರಣ ಮತ್ತು ದೇಶೀ ಆರ್ಥಿಕತೆಯ ಮೇಲೆ ಹೆಚ್ಚುತ್ತಿರುವ ಕೆಳಮಟ್ಟದ ಒತ್ತಡವನ್ನು ಗಮನಿಸಿದರೆ ಆರ್ಥಿಕತೆಯ ಸುಸ್ಥಿರ ಮತ್ತು ಆರೋಗ್ಯಕರ ಬೆಳವಣಿಗೆಗೆ ಅಡಿಪಾಯ ಹಾಕಬೇಕಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ವಕ್ತಾರ ಲಿಯು ಐಹುವಾ ಹೇಳಿದ್ದಾರೆ.

Read more about: usa trade war economy
English summary

China's industrial output hits 17 year low

China's economy showed further signs of strain in July with output at its factories falling to its lowest level in 17 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X