For Quick Alerts
ALLOW NOTIFICATIONS  
For Daily Alerts

ಆರ್ಥಿಕತೆಗೆ ಭಾರೀ ಹೊಡೆತ, 5 ಲಕ್ಷ ಉದ್ಯೋಗ ನಷ್ಟ

ಆಟೋಮೊಬೈಲ್ ಉದ್ಯಮ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದೇಶದ ಆರ್ಥಿಕತೆಗೆ ಭಾರೀ ಹೊಡೆತವನ್ನೇ ನೀಡಿದೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 3.7 ಕೋಟಿ ಉದ್ಯೋಗ ಒದಗಿಸುವ ವಾಹನ ಉದ್ಯಮವು ಕೆಳಮುಖವಾಗಿ ಚಲಿಸುತ್ತಿದೆ.

|

ಆಟೋಮೊಬೈಲ್ ಉದ್ಯಮ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದೇಶದ ಆರ್ಥಿಕತೆಗೆ ಭಾರೀ ಹೊಡೆತವನ್ನೇ ನೀಡಿದೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 3.7 ಕೋಟಿ ಉದ್ಯೋಗ ಒದಗಿಸುವ ವಾಹನ ಉದ್ಯಮವು ಕೆಳಮುಖವಾಗಿ ಚಲಿಸುತ್ತಿದೆ. ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡಿರುವ ಕಾರಣ ಜಿಎಸ್ಟಿ ತಗ್ಗಿಸುವ ಮೂಲಕ ಆಟೊಮೊಬೈಲ್ ಉದ್ಯಮಕ್ಕೆ ಪುನಶ್ಚೇತನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

5 ಲಕ್ಷ ಉದ್ಯೋ ನಷ್ಟ

5 ಲಕ್ಷ ಉದ್ಯೋ ನಷ್ಟ

ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಆಟೊಮೊಬೈಲ್ ಕಂಪನಿಗಳು ವಾಹನಗಳ ಉತ್ಪಾದನೆ ಕಡಿಮೆ ಮಾಡುತ್ತಿವೆ. ಇದರಿಂದ ವಾಹನ ಮಾರಾಟಗಾರ ರು ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ನುದ್ಯೋಗ ಕಳೆದುಕೊಂಡಿದ್ದು, ಮುಂದಿನ ಮೂರು ತಿಂಗಳಿನಲ್ಲಿ 5 ಲಕ್ಷ ಉದ್ಯೋಗಗಳು ಕಡಿತವಾಗುವ ಸಂಭವವಿದೆ ಎನ್ನಲಾಗಿದೆ.

ಕೆಟ್ಟ ಪರಿಣಾಮ ಬೀರಲಿದೆ

ಕೆಟ್ಟ ಪರಿಣಾಮ ಬೀರಲಿದೆ

ತಯಾರಕರು ಮತ್ತು ವಿತರಕ ನಡುವೆ ಉದ್ಯೋಗ ನಷ್ಟ 2.30 - 3.50 ಲಕ್ಷಗಳ ನಡುವೆ ಇರಬಹುದು. ಇದೇ ಮಂದಗತಿ ಮುಂದುವರಿದರೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಬಹುದು. ಈ ಕುಸಿತವು ವಿಶೇಷವಾಗಿ ಭಾರತದ 57 ಬಿಲಿಯನ್ ಆಟೊ ಕಾಂಪೊನೆಂಟ್ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.

ಯಾವ ವಿಭಾಗಕ್ಕೆ ಹೆಚ್ಚು ಹೊಡೆತ

ಯಾವ ವಿಭಾಗಕ್ಕೆ ಹೆಚ್ಚು ಹೊಡೆತ

ಪ್ರಮುಖವಾಗಿ ಫ್ರಂಟ್ ಎಂಡ್ ಜಾಬ್ಸ್, ಟೆಕ್ನಿಕಲ್, ಪೇಂಟಿಂಗ್, ವೆಲ್ಡಿಂಗ್, ಸರ್ವಿಸ್ ಪ್ರೊಡಕ್ಷನ್ ಟೆಕ್ನಾಲಜಿ ವಿಭಾಗಗಳಲ್ಲಿ ಹೆಚ್ಚು ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ ನಂತರ ಆಟೋಮೊಬೈಲ್ ಕ್ಷೇತ್ರದ ವಹಿವಾಟು ಮಂದಗತಿಯಲ್ಲಿ ಆರಂಭವಾಗಿದ್ದು, ಈಗ ಬಿಕ್ಕಟ್ಟು ಉಲ್ಬಣಿಸಿದೆ. ಹೆಚ್ಚಿನ ವಾಹನ ತಯಾರಕರು ಕೆಲಸದ ಸಮಯದಲ್ಲಿ ಕಡಿತ, ವಜಾ, ಕೆಲಸದ ದಿನಗಳನ್ನು ಕಡಿಮೆ ಮಾಡುವುದು ಇತ್ಯಾದಿ ಕ್ರಮಗಳನ್ನು ಅನುಸರಿಸುತ್ತಿವೆ.

ಜಿಡಿಪಿಗೆ ಹೆಚ್ಚು ಪಾಲು

ಜಿಡಿಪಿಗೆ ಹೆಚ್ಚು ಪಾಲು

ವಾಹನ ಉದ್ಯಮವೇ ದೇಶದ ಜಿಡಿಪಿಗೆ ಶೇ. 7 ಮತ್ತು ದೇಶದ ಉತ್ಪಾದನಾ ಜಿಪಿಡಿಗೆ ಸುಮಾರು 50 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ನೇರ ಮತ್ತು ಪರೋಕ್ಷವಾಗಿ ೩೭ ಬಿಲಿಯನ್ ಉದ್ಯೋಗ ಸೃಷ್ಟಿಸುತ್ತದೆ.

ಉತ್ಪಾದನೆ ಸ್ಥಗಿತ

ಉತ್ಪಾದನೆ ಸ್ಥಗಿತ

ಆಟೋ ಉದ್ಯಮದ ಪ್ರಮುಖ ಕಂಪನಿಗಳಾದ ಹೀರೋ ಮೊಟೊಕಾರ್ಪ್ ಮತ್ತು ಟಿವಿಎಸ್ ಗ್ರೂಪ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಅಶೋಕ್ ಲೇಲ್ಯಾಂಡ್ ಸಹ ಉತ್ಪಾದನಾ ಕಡಿತವನ್ನು ಘೋಷಿಸಿವೆ. ಟಾಟಾ ಮೋಟಾರ್ಸ್ ಕಂಪನಿಯ ಜೆಮ್ ಶೆಡ್ಪುರ ಘಟಕದಲ್ಲಿ ಆಗಸ್ಟ್ 16 ಮತ್ತು 17 ರಂದು ಎರಡು ದಿನಗಳವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

English summary

Auto industry job losses may exceed 5 lakh

The auto industry in India, which supports around 3.7 crore direct and indirect jobs is in an extended slow down mode.
Story first published: Monday, August 19, 2019, 11:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X