For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ಹೊಸ ರೂಪದಲ್ಲಿ ರೂ. 100 ನೋಟು ಚಲಾವಣೆಗೆ

ಶೀಘ್ರದಲ್ಲೇ ರೂ. 100 ಮುಖಬೆಲೆಯ ನೋಟು ಪಳಪಳನೆ ಹೊಳೆಯುವ ರೂಪವನ್ನು ಪಡೆಯಬಹುದು. ಪ್ರಾಯೋಗಿಕ ಆಧಾರದ ಮೇಲೆ ವಾರ್ನಿಷ್ ಮಾಡಿದ 100 ರೂಪಾಯಿಯ ನೋಟುಗಳನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತಯಾರಿ ನಡೆಸಿದೆ.

|

ಶೀಘ್ರದಲ್ಲೇ ರೂ. 100 ಮುಖಬೆಲೆಯ ನೋಟು ಪಳಪಳನೆ ಹೊಳೆಯುವ ರೂಪವನ್ನು ಪಡೆಯಬಹುದು. ಪ್ರಾಯೋಗಿಕ ಆಧಾರದ ಮೇಲೆ ವಾರ್ನಿಷ್ ಮಾಡಿದ 100 ರೂಪಾಯಿಯ ನೋಟುಗಳನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತಯಾರಿ ನಡೆಸಿದೆ.

ವಾರ್ನಿಷ್ ಲೇಪಿತ ನೋಟು

ವಾರ್ನಿಷ್ ಲೇಪಿತ ನೋಟು

ಕರೆನ್ಸಿ ನೋಟುಗಳ ಜೀವಿತಾವಧಿ ಹೆಚ್ಚಿಸುವ ಸಲುವಾಗಿ ಆರ್ಬಿಐ ವಾರ್ನಿಷ್ ಮಾಡಿದ ನೋಟುಗಳನ್ನು ಬಿಡುಗಡೆ ಮಾಡುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ನಿಧಾನವಾಗಿ ಎಲ್ಲಾ ನೋಟುಗಳನ್ನು ಹೊಸ ವಾರ್ನಿಷ್ ಲೇಪಿತ ನೋಟುಗಳೊಂದಿಗೆ ಬದಲಾಯಿಸಲಿದೆ.
ಆರ್ಬಿಐನ 2018-19ರ ವಾರ್ಷಿಕ ವರದಿಯಲ್ಲಿ ವಾರ್ನಿಷ್ ಮಾಡಿದ ನೋಟುಗಳನ್ನು ಪರಿಚಯಿಸುವ ಯೋಜನೆಯನ್ನು ಉಲ್ಲೇಖಿಸಲಾಗಿದೆ. 2018-19 ಅವಧಿಯಲ್ಲಿ ಭದ್ರತಾ ಮುದ್ರಣಕ್ಕಾಗಿ ರೂ. 4,811 ಕೋಟಿ ವೆಚ್ಚ ಹಾಗು ಅದರ ಹಿಂದಿನ ವರ್ಷ ರೂ. 4,912 ಕೋಟಿ ವೆಚ್ಚ ಮಾಡಲಾಗಿದೆ. (File photo | Reuters)

ತಜ್ಞರ ಸಲಹೆ

ತಜ್ಞರ ಸಲಹೆ

ಕರೆನ್ಸಿ ನೋಟುಗಳ ಜೀವಿತಾವಧಿ ಹೆಚ್ಚಿಸುವ ಸಲುವಾಗಿ ಅನೇಕ ಕ್ರಮಗಳನ್ನು ಹುಡುಕಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಅನುಭವ ಮತ್ತು ಸಲಹೆಗಳಂತೆ ನೋಟುಗಳನ್ನು ವಾರ್ನಿಷ್ ಚಲವಾಣೆಗೆ ತರುವುದರಿಂದ ನೋಟುಗಳ ಜೀವಿತಾವಧಿ ಹೆಚ್ಚುತ್ತದೆ. ಅಲ್ಲದೇ ಬಾಳಿಕೆ ಕೂಡ ಹೆಚ್ಚುತ್ತದಲ್ಲದೇ ನೋಟುಗಳು ಬದಲಾಯಿಸುವ ಅವಶ್ಯಕತೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆಎ ಎಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಆರ್ಬಿಐ ಹೊಸ ಉಪಕ್ರಮಗಳು

ಆರ್ಬಿಐ ಹೊಸ ಉಪಕ್ರಮಗಳು

ಆರ್‌ಬಿಐ ಕರೆನ್ಸಿ ನೋಟುಗಳನ್ನು ಹೆಚ್ಚು ದೃಷ್ಟಿಹೀನ ಸ್ನೇಹಪರವಾಗಿಸಲು ನೋಡುತ್ತಿದೆ. ಭಾರತೀಯ ನೋಟುಗಳು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ದೃಷ್ಟಿಹೀನ (ಬಣ್ಣ ಕುರುಡು, ಭಾಗಶಃ ದೃಷ್ಟಿಹೀನ ಮತ್ತು ಕುರುಡು ಜನರು) ಅವರನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಅಂದರೆ, ಇಂಟಾಗ್ಲಿಯೊ ಮುದ್ರಣ ಮತ್ತು ಸ್ಪರ್ಶ ಗುರುತು, ವೇರಿಯಬಲ್ ಬ್ಯಾಂಕ್‌ನೋಟ್ ಗಾತ್ರ, ದೊಡ್ಡ ಸಂಖ್ಯೆಗಳು, ವೇರಿಯಬಲ್ ಬಣ್ಣ, ಏಕವರ್ಣದ ವರ್ಣಗಳು ಮತ್ತು ಪ್ಯಾಟರ್ನ್ ಗಳನ್ನು ಒಳಗೊಂಡಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಹೇಳಿದೆ.
ಕರೆನ್ಸಿ ನೋಟುಗಳನ್ನು ಅಪ್‌ಗ್ರೇಡ್ ಮಾಡುವ ಮತ್ತು ಪ್ರಮಾಣೀಕರಿಸುವ ಉದ್ದೇಶದಿಂದ ಆರ್‌ಬಿಐ ಮುಂಬೈನಲ್ಲಿ ಅತ್ಯಾಧುನಿಕ ಬ್ಯಾಂಕ್‌ನೋಟ್ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬೊರೇಟರಿಯನ್ನು ಸ್ಥಾಪಿಸಿದೆ.

ನೋಟುಗಳ ಮೌಲ್ಯ ಮತ್ತು ಪ್ರಮಾಣ

ನೋಟುಗಳ ಮೌಲ್ಯ ಮತ್ತು ಪ್ರಮಾಣ

2018-19ರ ಅವಧಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಮತ್ತು ಪ್ರಮಾಣವು 17% ಮತ್ತು 6.2% ರಷ್ಟು ಅಂದರೆ ರೂ. 21.1 ಲಕ್ಷ ಕೋಟಿ ಮತ್ತು ರೂ. 10,875.9 ಕೋಟಿ ಕ್ರಮವಾಗಿ ಏರಿದೆ ಎಂದು ಆರ್‌ಬಿಐ ಹೇಳಿದೆ. ಮೌಲ್ಯದ ಪ್ರಕಾರ, 2018 ರ ಮಾರ್ಚ್ ಅಂತ್ಯದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಒಟ್ಟು ಮೌಲ್ಯದ 80.2% ನಷ್ಟು ಪಾಲನ್ನು ಹೊಂದಿದ್ದ ರೂ. 500 ಮತ್ತು ರೂ. 2000 ಕರೆನ್ಸಿ ನೋಟುಗಳ ಪಾಲು 2019 ರ ಮಾರ್ಚ್ ಅಂತ್ಯದ ವೇಳೆಗೆ ಶೇಕಡಾ 82.2ಕ್ಕೆ ಏರಿತು.

 

 

English summary

Varnished Rs 100 currency notes to be introduced soon

The Reserve Bank of India is planning to introduce Rs 100 notes with a coat of varnish on a trial basis.
Story first published: Friday, August 30, 2019, 9:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X