For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 769 ಪಾಯಿಂಟ್ ಕುಸಿತ, ರೂಪಾಯಿ ಮೌಲ್ಯ 2019ರಲ್ಲೇ ಕೆಳಮಟ್ಟಕ್ಕೆ

ಸೆನ್ಸೆಕ್ಸ್ ಸೂಚ್ಯಂಕ 769.88 ಪಾಯಿಂಟ್(ಶೇಕಡಾ 2.06 ರಷ್ಟು) ಇಳಿಕೆಯೊಂದಿಗೆ 36,562.91 ಮಟ್ಟದಲ್ಲಿ ಹಾಗು ನಿಫ್ಟಿ ಸೂಚ್ಯಂಕ 225.40 ಪಾಯಿಂಟ್ ಕುಸಿತದೊಂದಿಗೆ 10,797.90 ಮಟ್ಟದಲ್ಲಿ ದಿನದ ವಹಿವಾಟು ಮುಗಿಸಿತು.

|

ಸೆನ್ಸೆಕ್ಸ್ ಸೂಚ್ಯಂಕ 769.88 ಪಾಯಿಂಟ್(ಶೇಕಡಾ 2.06 ರಷ್ಟು) ಇಳಿಕೆಯೊಂದಿಗೆ 36,562.91 ಮಟ್ಟದಲ್ಲಿ ಹಾಗು ನಿಫ್ಟಿ ಸೂಚ್ಯಂಕ 225.40 ಪಾಯಿಂಟ್ ಕುಸಿತದೊಂದಿಗೆ 10,797.90 ಮಟ್ಟದಲ್ಲಿ ದಿನದ ವಹಿವಾಟು ಮುಗಿಸಿತು. ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್ ಕಂಪನಿ, ಐಸಿಐಸಿಐ ಬ್ಯಾಂಕ್, ಐಒಸಿ ಮತ್ತು ಟಾಟಾ ಸ್ಟೀಲ್ ನಿಫ್ಟಿಯಲ್ಲಿ ನಷ್ಟ ಅನುಭವಿಸಿದವು. ಟೆಕ್ ಮಹೀಂದ್ರಾ, ಬಿಪಿಸಿಎಲ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಲಾಭ ಗಳಿಸಿದವು.

ಸೆನ್ಸೆಕ್ಸ್ 769 ಅಂಕ ಕುಸಿತ, ರೂಪಾಯಿ ಮೌಲ್ಯ 2019ರಲ್ಲೇ ಕೆಳಮಟ್ಟಕ್ಕೆ

ದೇಶದ ಆರ್ಥಿಕ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಮಟ್ಟ ಶೇಕಡಾ 5ಕ್ಕೆ ಇಳಿದಿರುವುದುಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿದ್ದು, ಷೇರುಪೇಟೆ ಕುಸಿತಕ್ಕೆ ಒಳಗಾಯಿತು. ಯುಎಸ್-ಚೀನಾ ವಾಣಿಜ್ಯ ಸಮರದ ಷೇರುಪೇಟೆಯನ್ನು ದುರ್ಬಲಗೊಳಿಸಿದೆ.
ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಇಳಿಕೆ, ಉತ್ಪಾದನಾ ಕಡಿತ, ಆರ್ಥಿಕತೆಯ ಕುಸಿತ, ವಾಹನ ವಲಯದಲ್ಲಿ ಉದ್ಯೋಗ ಕಡಿತ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಭಾರತದ ರೂಪಾಯಿ ಇಂದು 2019 ರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದ್ದು, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ರೂ. 72.30 ಕ್ಕೆ ಇಳಿದಿದೆ. ಜಿಡಿಪಿ ಭಾರೀ ಕುಸಿರುವುದು ಹೂಡಿಕೆದಾರರು ನಕರಾತ್ಮಕ ಚಿಂತನೆಗೆ ಕಾರಣವಾಗಿದೆ. ಜಿಡಿಪಿ ಬೆಳವಣಿಗೆ ದರ 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದ್ದು, ರೂಪಾಯಿಗೆ ಅನುಗುಣವಾಗಿ ಷೇರುಗಳು ಸಹ ಕುಸಿದವು.

English summary

Sensex plunges 769 points, Rupee hits 2019 low

the Sensex was down 769.88 points or 2.06% at 36,562.91, while Nifty was down 225.40 points or 2.04% at 10,797.90.
Story first published: Tuesday, September 3, 2019, 16:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X