For Quick Alerts
ALLOW NOTIFICATIONS  
For Daily Alerts

ಕಾರ್ಪೊರೇಟ್ ಗಳಿಗಿಂತ ಆರ್ಥಿಕ ದುರ್ಬಲ ವರ್ಗಕ್ಕೆ ಬ್ಯಾಂಕ್ ಗಳಿಂದ ಹೆಚ್ಚಿನ ಸಾಲ

|

ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿದ ಸಾಲಕ್ಕಿಂತ ಶೇಕಡಾ 40ರಷ್ಟು ಹೆಚ್ಚು ಸಾಲವನ್ನು ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳು ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ನೀಡಿವೆ. ಆದರೂ ಒಟ್ಟಾರೆ ಸಾಲ ನೀಡಿಕೆ ಪ್ರಮಾಣದಲ್ಲಿ 1.1 ಲಕ್ಷ ಕೋಟಿ ರುಪಾಯಿ ಕಡಿಮೆ ಆಗಿದೆ.

ಆದರೆ, ಆರ್ಥಿಕ ದುರ್ಬಲರಿಗೆ, ದೊಡ್ಡ ಕಾರ್ಪೊರೇಟ್ ಗಳಿಗೆ, ಎನ್ ಬಿಎಫ್ ಸಿಗಳಿಗೆ ಮತ್ತು ರೀಟೇಲ್ ವ್ಯವಹಾರಗಳಿಗೆ ನೀಡಿದ ಸಾಲ ಪ್ರಮಾಣವು ಸಕಾರಾತ್ಮಕ ಬೆಳವಣಿಗೆ ತೋರಿಸುತ್ತವೆ. ಏಪ್ರಿಲ್ ತಿಂಗಳಲ್ಲಿ ಆರ್ಥಿಕ ದುರ್ಬಲ ವರ್ಗಕ್ಕೆ 12,381 ಕೋಟಿ ಸಾಲ ನೀಡಿದ್ದರೆ, ಕಾರ್ಪೊರೇಟ್ ಗಳಿಗೆ 8,846 ಕೋಟಿ ಸಾಲ ನೀಡಲಾಗಿದೆ.

ಕೊರೊನಾ ಕಷ್ಟ ಕಾಲಕ್ಕೆ ಎಲ್ಲಿ ಲೋನ್ ಸಿಗುತ್ತೆ? ಯಾವ ಬಡ್ಡಿ ಕಡಿಮೆ?ಕೊರೊನಾ ಕಷ್ಟ ಕಾಲಕ್ಕೆ ಎಲ್ಲಿ ಲೋನ್ ಸಿಗುತ್ತೆ? ಯಾವ ಬಡ್ಡಿ ಕಡಿಮೆ?

ಈ ಅಂಶವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಲಯವಾರು ಬ್ಯಾಂಕ್ ಸಾಲದ ಮಾಹಿತಿಯಲ್ಲಿ ನೀಡಲಾಗಿದೆ. ಮಾರ್ಚ್ ನಲ್ಲಿ ಸರ್ಕಾರ ಘೋಷಣೆ ಮಾಡಿದ ಪರಿಹಾರ ಪ್ಯಾಕೇಜ್ ಪರಿಣಾಮವಾಗಿ ಇಂಥ ಸಾಲಗಳಲ್ಲಿ ಏರಿಕೆ ಆಗಿದೆ.

ಕಾರ್ಪೊರೇಟ್ ಗಳಿಗಿಂತ ಆರ್ಥಿಕ ದುರ್ಬಲ ವರ್ಗಕ್ಕೆ ಬ್ಯಾಂಕ್  ಸಾಲ

ಪ್ಯಾಕೇಜ್ ನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 63 ಲಕ್ಷ ಸ್ವಸಹಾಯ ಸಂಘಗಳಿಗೆ ಸಾಲ ಪ್ರಮಾಣವನ್ನು 10 ಲಕ್ಷದಿಂದ 20 ಲಕ್ಷ ರುಪಾಯಿಗೆ ಏರಿಸಲಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವ್ಯಾಖ್ಯಾನದ ಪ್ರಕಾರ ಸ್ವಸಹಾಯ ಸಂಘಗಳನ್ನು 'ಆರ್ಥಿಕ ದುರ್ಬಲ ವರ್ಗ' ಎಂದು ಪರಿಗಣಿಸಲಾಗುತ್ತದೆ.

ಇನ್ನು ಮಹಿಳಾ ಫಲಾನುಭವಿಗಳಿಗೆ ತಲಾ 1 ಲಕ್ಷ ರುಪಾಯಿ ಸಾಲ, ಪ್ರಧಾನಮಂತ್ರಿ ಜನಧನ್ ಖಾತೆ ಇರುವವರು, ಸಣ್ಣ ಹಿಡುವಳಿಯ ರೈತರಿಗೆ 10 ಸಾವಿರ ರುಪಾಯಿ ತನಕ ಓವರ್ ಡ್ರಾಫ್ಟ್ ಗೆ ಅವಕಾಶ ನೀಡಿದ್ದು, ಅವರನ್ನು ಆರ್ಥಿಕ ದುರ್ಬಲ ವರ್ಗ ಎಂದು ಪರಿಗಣಿಸಲಾಗುತ್ತದೆ.

ಕೊರೊನಾ ಲಾಕ್ ಡೌನ್ ನಿಂದ ಈ ವರ್ಗದವರ ಜೀವನದ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಸಾಲದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇಡೀ ದೇಶದಲ್ಲಿ ಏಪ್ರಿಲ್ ನಲ್ಲಿ ಆರ್ಥಿಕ ಚಟುವಟಿಕೆ ಸ್ತಬ್ಧವಾದರೂ ವಿದ್ಯುತ್, ಪೆಟ್ರೋಲಿಯಂ ಕೇಂದ್ರಿತ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಬಂಡವಾಳಕ್ಕೆ (ವರ್ಕಿಂಗ್ ಕ್ಯಾಪಿಟಲ್) ಸಾಲ ಪಡೆದಿವೆ.

English summary

40 Percent More Loan From Banks To Poor Than Corporate In April

During lock down period- April, Banks provide 40 percent more loan to economic weaker section than corporate.
Story first published: Tuesday, June 2, 2020, 8:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X