ಸುಮಾರು ಆರು ತಿಂಗಳುಗಳ ಬಳಿಕ ಈ ವಾರದಲ್ಲಿ ಚಂಡೀಗಢದಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಹಲವಾರು ವಸ್ತುಗಳ ಜಿಎಸ್‌ಟಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹಾಗೆಯೇ ಸುಮಾರು 215 ವಸ್ತುಗಳ ಮೇಲಿನ ಜಿಎಸ್‌ಟಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸಮಿತಿ ಶಿಫಾರಸ್ಸು ಮಾಡಿದೆ.
ಈ 47ನೇ ಜಿಎಸ್‌ಟಿ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿದೆ. ಎಲ್ಲಾ ರಾಜ್ಯಗಳ ಕೇಂದ್ರಾಡಳಿತ ಪ್ರದೇಶಗಳು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಎಸ್‌ಟಿ ಸಭೆಯು ಜೂನ್ 28-29ರಂದು ನಡೆಯಲಿದೆ.
ಜಿಎಸ್‌ಟಿಗಳ ಬಗ್ಗೆ ಚರ್ಚೆ ಮಾತ್ರವಲ್ಲದೇ ಈ ಸಭೆಯಲ್ಲಿ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯದಿಂದ ಜಿಎಸ್‌ಟಿ ಪರಿಹಾರದ ಆಗ್ರಹ ಕೇಳಿಬರಬಹುದು. ಇನ್ನು ಕೃತಕ ಕಾಲಿನ ಮೇಲೆ ಶೇಕಡ ಐದರಷ್ಟು ಜಿಎಸ್‌ಟಿ ಹೇರುವ ಬಗ್ಗೆ ಚರ್ಚೆ ನಡೆಯಬಹುದು. ಬೆನ್ನು ಮೂಳೆ, ಇತರೆ ಮೂಳೆಗಳ ಜೋಡಿಸುವಿಕೆ ಮೇಲೆಯೂ ಶೇಕಡ ಐದು ಜಿಎಸ್‌ಟಿ ಹೇರಿಕೆಯ ಬಗ್ಗೆ ಚರ್ಚೆ ನಡೆಯಲಿದೆ.
ರೋಪ್‌ವೇ ಟ್ರಾವೆಲ್ ಜಿಎಸ್‌ಟಿ ಇಳಿಕೆ
ಪ್ರಸ್ತುತ ಈ ವಸ್ತುಗಳ ಮೇಲೆ ಶೇಕಡ 12ರಿಂದ ಶೇಕಡ 5ರಷ್ಟು ಜಿಎಸ್‌ಟಿ ಹೊಂದಿದೆ. ರೋಪ್‌ವೇ ಟ್ರಾವೆಲ್ ಮೇಲಿನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ ಐದಕ್ಕೆ ಇಳಿಕೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆಯ ಸಂದರ್ಭದಲ್ಲಿಯೂ ಹಿಮಾಚಲ ಪ್ರದೇಶ ಈ ಬೇಡಿಕೆಯನ್ನು ಮುಂದಿಟ್ಟಿದೆ.
ನೀರಿನ ಮೇಲಿನ ಜಿಎಸ್‌ಟಿ ಕಡಿತ ಸಾಧ್ಯತೆ
ನೀರಿನ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ನೀರಿನ ಮೇಲೆ ಸುಮಾರು ಶೇಕಡ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಟೆಟ್ರಾ ಪಾಕ್ ಮೇಲಿನ ಜಿಎಸ್‌ಟಿಯನ್ನು ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲು ಕೂಡಾ ಸಮಿತಿ ಶಿಫಾರಸು ಮಾಡಿದೆ. ಇನ್ನು ಎಲೆಕ್ಟ್ರಿಕಲ್ ವಾಹನಗಳು, ಇವಿಗ ಮೇಲೆ ಶೇಕಡ ಐದರಷ್ಟು ಜಿಎಸ್‌ಟಿ ಹೇರಿಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಲಭ್ಯವಾಗಲಿದೆ.
ಬೇರೇನು ಚರ್ಚೆ ನಡೆಯಲಿದೆ?
ಧೂಮಪಾನದಿಂದ ದೂರ ಉಳಿಯಲು ಬಳಸಲಾಗುವ ನಿಕೋಟಿನ್ ಪೊಲಾರೈಸ್ಡ್ ಗಮ್ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಹೇರಿಕೆ ಮಾಡುವ ಬಗ್ಗೆಯೂ ಸಮಿತಿಯು ಸ್ಪಷ್ಟ ನಿರ್ಧಾರಕ್ಕೆ ಬರಲಿದೆ. ರಾಜ್ಯ ಹಣಕಾಸು ಸಚಿವರುಗಳ ಗುಂಪಿನ ಎರಡು ವರದಿಯನ್ನು ಈ ಸಭೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ಆನ್‌ಲೈನ್ ಗೇಮಿಂಗ್, ರೇಸ್ ಮೇಲೆ ಜಿಎಸ್‌ಟಿ
ಆನ್‌ಲೈನ್ ಗೇಮಿಂಗ್, ರೇಸ್, ಕ್ಯಾಸಿನೋ ಮೇಲೆ ಪ್ರಸ್ತುತ ಶೇಕಡ 18ರಷ್ಟು ಜಿಎಸ್‌ಟಿಯನ್ನು ಹೇರಿಕೆ ಮಾಡಲಾಗುತ್ತಿದೆ. ಆದರೆ ಇದನ್ನು ಶೇಕಡ 28ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. ಇನ್ನು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಹತ್ತರಲ್ಲಿ ಎಂಟು ಜನರು ಆನ್‌ಲೈನ್ ಗೇಮಿಂಗ್, ರೇಸ್, ಕ್ಯಾಸಿನೋ ಮೇಲಿನ ಜಿಎಸ್‌ಟಿಯನ್ನು ಹೆಚ್ಚಳ ಮಾಡಬೇಕು ಎಂದು ಬಯಸಿದ್ದಾರೆ. ಶೇಕಡ 7ರಷ್ಟು ಪ್ರತಿಕ್ರಿಯೆ ನೀಡಿದವರು ಶೇಕಡ 40ರಷ್ಟು ಜಿಎಸ್‌ಟಿ ಏರಿಕೆ ಮಾಡಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲೇ ಶೇಕಡ 27ರಷ್ಟು ಮಂದಿ ಶೇಕಡ 50ರಷ್ಟು ಬೆಲೆ ಏರಿಕೆಯಾಗಬೇಕು ಎಂದಿದ್ದಾರೆ. ಶೇಕಡ 6ರಷ್ಟು ಮಂದಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. 12,097 ಮಂದಿ ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications