For Quick Alerts
ALLOW NOTIFICATIONS  
For Daily Alerts

ಶೀಘ್ರವೇ ದೇಶದಲ್ಲಿ 5ಜಿ ಸೇವೆ ಆರಂಭ: ಪ್ರಧಾನಿ ಮೋದಿ

|

ದೇಶದಲ್ಲಿ ಶೀಘ್ರದಲ್ಲೇ 5ಜಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಆಗಸ್ಟ್ 15ರಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ 5ಜಿ ಸ್ಪೆಕ್ಟ್ರಮ್‌ನ ಹರಾಜು ಬೆನ್ನಲ್ಲೇ ಸ್ವಾತಂತ್ರೋತ್ಸವದ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಶೀಘ್ರ 5ಜಿ ಆರಂಭದ ಘೋಷಣೆಯನ್ನು ಮಾಡಿದ್ದಾರೆ.

ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಪ್ರತಿ ವಲಯದಲ್ಲೂ ಸುಧಾರಣೆಯನ್ನು ತರಲು ಇದು ಸಕಾಲ. 5ಜಿ ಸೆಮಿಕಂಡಕ್ಟರ್ ಮಾನ್ಯುಫಾಕ್ಷರಿಂಗ್ & ಆಪ್ಟಿಕಲ್ ಫೈಬರ್ ಕೇಬರ್ (ಒಎಫ್‌ಸಿ)ಗಳೊಂದಿಗೆ ನಾವು ಭಾರತದ ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರುತ್ತೇವೆ ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ

ಭಾರತದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನವು ಸೆಮಿ ಕಂಡಕ್ಟರ್, 5ಜಿ ನೆಟ್‌ವರ್ಕ್, ಒಪ್ಟಿಕಲ್ ಫೈಬರ್ ನೆಟ್‌ವರ್ಕ್ ಎಂಬುವುದು ಪ್ರಮುಖವಾಗಿ ಮೂರು ವಿಭಾಗಗಳಾದ ಶಿಕ್ಷಣ, ಆರೋಗ್ಯ ಕ್ಷೇತ್ರ, ಸಾಮಾನ್ಯ ಜನರ ಜೀವನದಲ್ಲಿ ಬಲವನ್ನು ತುಂಬಿದೆ. ತಳಮಟ್ಟದಿಂದ ಭಾರತದ ಕಾರ್ಖಾನೆಗಳ ಬೆಳವಣಿಗೆ ಆಗಲಿದೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.

ಶೀಘ್ರವೇ ದೇಶದಲ್ಲಿ 5ಜಿ ಸೇವೆ ಆರಂಭ: ಪ್ರಧಾನಿ ಮೋದಿ

ಎಂಎಸ್‌ಎಂಇ, ಬೀದಿ ಬದಿ ವ್ಯಾಪಾರಿಗಳು, ಸಂಘಟಿತ ವಲಯದಲ್ಲಿ ಕೆಲಸ ಮಾಡುವವರನ್ನು ಸಬಲರನ್ನಾಗಿಸಬೇಕಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ ಈ ಸಂದರ್ಭದಲ್ಲೇ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿದರು.

ಓಪನ್‌ಸಿಗ್ನಲ್‌ನ ಪ್ರಕಾರ ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಯಾವುದು?ಓಪನ್‌ಸಿಗ್ನಲ್‌ನ ಪ್ರಕಾರ ಭಾರತದ ಅತ್ಯಂತ ವೇಗದ 4ಜಿ ಸಂಸ್ಥೆ ಯಾವುದು?

ದೇಶದಲ್ಲಿ 5ಜಿ ಸ್ಪೆಕ್ಟ್ರಮ್

ದೇಶದಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು, ಜಿಯೋ ಅತಿ ಹೆಚ್ಚು ಬಿಡ್‌ ಮಾಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. ನಾವು ಸಾಮಾನ್ಯವಾಗಿ ಬಹಳಷ್ಟು ಜನರು ಇರುವ ಪ್ರದೇಶದಲ್ಲಿ, ಜಾತ್ರೆಯಲ್ಲಿ, ಸ್ಟೇಡಿಎಂಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಕಾಣುತ್ತೇವೆ. ಆದರೆ 5ಜಿಯಲ್ಲಿ ಈ ನೆಟ್‌ವರ್ಕ್ ದಟ್ಟಣೆ ಕಾಡುವುದಿಲ್ಲ. ಅತೀ ಅಧಿಕ ಜನರು ಇರುವ ಪ್ರದೇಶದಲ್ಲಿಯೂ ಸರಿಯಾದ ನೆಟ್‌ವರ್ಕ್ ಲಭ್ಯವಾಗಲಿದೆ.

English summary

5G Mobile Services To Start Soon Says Prime Minister Modi

India will soon see the advent of 5G mobile services, Prime Minister Narendra Modi said on Monday Agust 15nth.
Story first published: Monday, August 15, 2022, 12:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X