For Quick Alerts
ALLOW NOTIFICATIONS  
For Daily Alerts

5ಜಿ ಸ್ಪೆಕ್ಟ್ರಮ್ ಹರಾಜು: ನಾಲ್ಕು ಸುತ್ತು ಅಂತ್ಯ, ಜುಲೈ 27ರಂದು ಬಿಡ್ಡಿಂಗ್ ಮುಂದುವರಿಕೆ

|

5ಜಿ ಸ್ಪೆಕ್ಟ್ರಮ್ ಹರಾಜಿನ ನಾಲ್ಕು ಸುತ್ತುಗಳು ಮಂಗಳವಾರ (ಜುಲೈ 26) ನಡೆದಿದ್ದು, ಐದನೇ ಸುತ್ತು ನಾಳೆ (ಜುಲೈ 27) ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಅದಾನಿ ಡೇಟಾ ನೆಟ್‌ವರ್ಕ್‌ ಭಾಗಿಯಾಗಿದೆ.

 

ಮಂಗಳವಾರ ಆನ್‌ಲೈನ್ ಮೂಲಕ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈ ಹರಾಜು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿದ್ದು ಆಗಿದೆ.

ಇನ್ನು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ಈಗಾಗಲೇ ಹಲವಾರು ಪ್ರದೇಶದಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗ ಆರಂಭ ಮಾಡಿದೆ. ದೆಹಲಿ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಭೋಪಾಲ್‌, ಕಾಂಡ್ಲಾ ಬಂದರಿನಲ್ಲಿ ಈ ಪ್ರಯೋಗವನ್ನು ನಡೆಸಲು ನಿರ್ಧಾರ ಮಾಡಲಾಗಿದೆ. 2023 ಅಥವಾ ಈ ವರ್ಷದಲ್ಲೇ 5ಜಿ ಸ್ಪೆಕ್ಟ್ರಮ್ ಆರಂಭವಾಗುವ ನಿರೀಕ್ಷೆ ಇದೆ.

 5ಜಿ ಸ್ಪೆಕ್ಟ್ರಮ್ ಹರಾಜು: ಜುಲೈ 27ರಂದು ಬಿಡ್ಡಿಂಗ್ ಮುಂದುವರಿಕೆ

ಇನ್ನು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭಾರತ ಶೀಘ್ರದಲ್ಲೇ 5ಜಿ ನೆಟ್‌ವರ್ಕ್ ಪಡೆಯಲಿದೆ ಎಂದು ಹೇಳಿದ್ದಾರೆ. ಜುಲೈನಲ್ಲಿಯೇ ಬಿಡ್ಡಿಂಗ್ ಪೂರ್ಣ ಮಾಡಲಾಗುತ್ತದೆ ಎಂದು ಕೂಡಾ ತಿಳಿಸಿದ್ದರು. ಈ ಬಿಡ್‌ನಲ್ಲಿ ವಿಜೇತರಾದ ಸಂಸ್ಥೆಯು 20 ಕಂತಿನ ಮೂಲಕ ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ.

ಈ ಹಿಂದೆ ನಡೆದಿದ್ದ ಹರಾಜು ಪ್ರಕ್ರಿಯೆ

ಇದಕ್ಕೂ ಮುನ್ನ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯು 2021ರಲ್ಲಿ ನಡೆದಿದೆ. 10,000 ಕೋಟಿಯಷ್ಟು ರಿಲಯನ್ಸ್ ಜಿಯೋ ಠೇವಣಿ ಮಾಡಿದ್ದರೆ, ಭಾರ್ತಿ ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ ಕ್ರಮವಾಗಿ 3,000 ಕೋಟಿ ರೂಪಾಯಿ ಹಾಗೂ 475 ಕೋಟಿ ರೂಪಾಯಿ ಠೇವಣಿ ಮಾಡಿದೆ. ಎರಡು ದಿನಗಳ ಕಾಲ ಬಿಡ್ ನಡೆದಿದ್ದು, ರಿಲಯನ್ಸ್ ಜಿಯೋ 57,122.65 ಮೌಲ್ಯದಲ್ಲಿ ಬಿಡ್ ಪಡೆದಿದೆ. ಭಾರ್ತಿ ಏರ್‌ಟೆಲ್ 18,699 ಬಿಡ್ ಮಾಡಿದೆ, ವೋಡಾಫೋನ್ ಐಡಿಯಾ 1,993.40 ಕೋಟಿ ರೂಪಾಯಿ ಬಿಡ್ ಮಾಡಿದೆ.

English summary

5G Spectrum Auction Concludes for the Day

5G Spectrum Auction: A total of four rounds of the auction were conducted today. The fifth round of the auction will start tomorrow.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X