For Quick Alerts
ALLOW NOTIFICATIONS  
For Daily Alerts

5ಜಿ ಸ್ಪೆಕ್ಟ್ರಮ್: 2ನೇ ದಿನ 1.49 ಟ್ರಿಲಿಯನ್ ಬಿಡ್ಡಿಂಗ್

|

5ಜಿ ಸ್ಪೆಕ್ಟ್ರಮ್ ಹರಾಜಿನ ಎರಡನೇ ದಿನದ ಬಿಡ್ಡಿಂಗ್ ನಡೆದಿದೆ. ಈವರೆಗೆ 1.49 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ. ಈ ಹರಾಜು ಪ್ರಕ್ರಿಯೆ ಗುರುವಾರದವರೆಗೂ ಮುಂದುವರಿಯಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಮಾತನಾಡಿದ್ದ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ 5ಜಿ ಸ್ಪೆಕ್ಟ್ರಮ್ ಹರಾಜು ಬುಧವಾರದವರೆಗೆ ನಡೆಯಲಿದೆ ಎಂದು ಹೇಳಿದ್ದರು. ಆದರೆ ಈಗ ಗುರುವಾರ ಈ ಹರಾಜು ಅಂತ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬಿಡ್ಡಿಂಗ್ ಹೆಚ್ಚಾದ ಕಾರಣದಿಂದಾಗಿ ದಿನವೂ ಅಧಿಕವಾಗುತ್ತಿದೆ ಎಂದು ಕೂಡಾ ಹೇಳಿದ್ದಾರೆ.

 5ಜಿ ಸ್ಪೆಕ್ಟ್ರಮ್: ಮೊದಲ ದಿನ 1.45 ಟ್ರಿಲಿಯನ್ ಬಿಡ್ಡಿಂಗ್, 5ನೇ ಸುತ್ತು ಆರಂಭ 5ಜಿ ಸ್ಪೆಕ್ಟ್ರಮ್: ಮೊದಲ ದಿನ 1.45 ಟ್ರಿಲಿಯನ್ ಬಿಡ್ಡಿಂಗ್, 5ನೇ ಸುತ್ತು ಆರಂಭ

5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದ ಬಿಡ್ಡಿಂಗ್‌ ನಾಲ್ಕು ಸುತ್ತಿನಲ್ಲಿ ನಡೆದಿದ್ದು, ಇಂದು (ಜುಲೈ 27) ಐದನೇ ಸುತ್ತಿನ ಬಿಡ್ಡಿಂಗ್ ಮೂಲಕ 5ಜಿ ಸ್ಪೆಕ್ಟ್ರಮ್ ಹರಾಜು ಆರಂಭವಾಗಿದೆ. ಮೊದಲ ದಿನದ ಹರಾಜಿನಲ್ಲಿ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ ಎಂದು ಸರ್ಕಾರ ಹೇಳಿದೆ. ಮೊದಲ ದಿನವೇ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ. ಆರೋಗ್ಯಕರವಾಗಿ ಬಿಡ್ಡರ್‌ಗಳು ಸ್ಪರ್ಧಿಸುತ್ತಿದ್ದಾರೆ. ಇದು ಉದಯೋನ್ಮುಖ ಇಂಡಸ್ಟ್ರೀಯಾಗಿ ಬದಲಾಗುತ್ತಿದೆ. ಈಗ ಹೊಸ ಹೂಡಿಕೆ ಲಭ್ಯವಾಗುತ್ತಿದೆ. ಸೇವಾ ಗುಣಮಟ್ಟವೂ ಉತ್ತಮವಾಗುತ್ತದೆ. ಹೊಸ ಟೆಕ್ನಾಲಜಿಯ ಪರಿಚಯವಾಗುತ್ತದೆ ಎಂದು ಕೂಡಾ ಸಚಿವರು ಹೇಳಿದ್ದಾರೆ.

 5ಜಿ ಸ್ಪೆಕ್ಟ್ರಮ್: 2ನೇ ದಿನ 1.49 ಟ್ರಿಲಿಯನ್ ಬಿಡ್ಡಿಂಗ್

ಮುಕೇಶ್ ಅಂಬಾನಿ, ಸುನೀಲ್ ಭಾರ್ತಿ ಮಿತ್ತಲ್ ಹಾಗೂ ಗೌತಮ್ ಅದಾನಿ 5ಜಿ ಸ್ಪೆಕ್ಟ್ರಮ್ ಹರಾಜನ್ನು ಗೆಲ್ಲುವ ಸಲುವಾಗಿ 1.45 ಟ್ರಿಲಿಯನ್ ಬಿಡ್ಡಿಂಗ್ ಮಾಡಿದ್ದಾರೆ. ಈ ಬಿಡ್ಡಿಂಗ್‌ಗಲ್ಲಿ ಈ ದಿಗ್ಗಜರ ನೇತೃತ್ವದ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ ಭಾಗಿಯಾಗಿದೆ. ಈ ಪೈಕಿ ಅದಾನಿ ಡೇಟಾ ನೆಟ್‌ವರ್ಕ್‌ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಂಸ್ಥೆಯಾಗಿದೆ.

4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ 4ಜಿಗಿಂತ 5ಜಿ ಹೇಗೆ ಭಿನ್ನ, ಉದ್ಯಮಕ್ಕೆ ಏನು ಪ್ರಭಾವ?, ಇಲ್ಲಿದೆ ಮಾಹಿತಿ

700 MHz ಬ್ಯಾಂಡ್‌ಗೆ ಬಿಡ್ಡ್‌

2016 ಮತ್ತು 2021ರಲ್ಲಿ ನಡೆದಿದ್ದ ಹರಾಜಿನಲ್ಲಿ ಯಾವುದೇ ಸಂಸ್ಥೆಯು 700 MHz ಬ್ಯಾಂಡ್‌ಗೆ ಬಿಡ್ಡ್ ಮಾಡಿರಲಿಲ್ಲ. ಆದರೆ ಈ ಹರಾಜಿನಲ್ಲಿ 700 MHz ಬ್ಯಾಂಡ್‌ಗೂ ಬಿಡ್ಡ್ ನಡೆದಿದೆ. 700 MHz ಬ್ಯಾಂಡ್‌ಗೆ 39,270 ಕೋಟಿ ರೂಪಾಯಿ ಬಿಡ್ಡಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಪ್ರಮುಖವಾಗಿ ಮಧ್ಯಮ ಹಾಗೂ ಅಧಿಕ ಸ್ಪೀಡ್ ಬ್ಯಾಂಡ್‌ಗೆ ಬಿಡ್ಡ್ ಮಾಡಿದೆ. ಈಗಿನ ತಮ್ಮ ನೆಟ್‌ವರ್ಕ್‌ಗಿಂತ ಹತ್ತು ಪಟ್ಟು ಅಧಿಕ ಸ್ಪೀಡ್ ನೆಟ್‌ವರ್ಕ್ ಸೇವೆ ನೀಡುವ ಗುರಿಯನ್ನು ಈ ಮೂರು ಸಂಸ್ಥೆಗಳು ಹೊಂದಿದೆ. ಈ ನಡುವೆ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಂಸ್ಥೆಯಾದ ಅದಾನಿ ಡೇಟಾ ನೆಟ್‌ವರ್ಕ್‌ ಕೇವಲ ಅಧಿಕ ಸ್ಪೀಡ್‌ಗೆ ಬಿಡ್ಡ್ ಮಾಡುವ ಸಾಧ್ಯತೆ ಇದೆ ಎಂದು ವರದಿಯು ಉಲ್ಲೇಖ ಮಾಡಿದೆ. ಜಿಯೋ 700 Mhz ಗೆ ಬಿಡ್ಡ್ ಮಾಡಿರುವುದಾಗಿ ಈಗಾಗಲೇ ಹೇಳಿಕೊಂಡಿದೆ. ಒಟ್ಟಾರೆಯಾಗಿ ಸ್ಥಿತಿಯನ್ನು ನೋಡಿದಾಗ ಜಿಯೋ ಬಿಡ್ಡ್‌ನಲ್ಲಿ ಮುಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

 5ಜಿ ಸ್ಪೆಕ್ಟ್ರಮ್: 2ನೇ ದಿನ 1.49 ಟ್ರಿಲಿಯನ್ ಬಿಡ್ಡಿಂಗ್

ಏನಿದು ಬಿಡ್ಡಿಂಗ್?

ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿದೆ. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ. 20 ಕಂತಿನ ಮೂಲಕ ಬಿಡ್ ಗೆದ್ದವರು ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ.

English summary

5G Spectrum Auction Second Day: Gvt Receives Bids Worth Rs 1.49 Trillion

5G Spectrum Auction Concludes for the Second Day: Government Receives Bids Worth Rs 1.49 Lakh Crore.
Story first published: Wednesday, July 27, 2022, 19:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X