For Quick Alerts
ALLOW NOTIFICATIONS  
For Daily Alerts

ಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ ಆರು ವರ್ಷದಲ್ಲಿ ಕೋಟಿ ರುಪಾಯಿ

|

ಷೇರು ಮಾರುಕಟ್ಟೆ ನಮಗೆ ಅರ್ಥವೇ ಆಗಲ್ಲ ಅನ್ನೋರಿಂದ ಶುರುವಾಗಿ, ಅಲ್ಲಿ ಹೇಗೆ ದುಡ್ಡು ಮಾಡುತ್ತಾರೋ ಎಂದು ಅಚ್ಚರಿ ಪಡುವ ತನಕ ನಾನಾ ಬಗೆಯ ಜನರಿದ್ದಾರೆ. ಈ ಲೇಖನದಲ್ಲಿ ಒಂದು ಷೇರಿನ ಯಶೋಗಾಥೆ ಬಗ್ಗೆ ತಿಳಿಸಲಾಗುತ್ತಿದೆ. ಈ ಷೇರು ಕಳೆದ ಆರು ವರ್ಷಗಳಲ್ಲಿ ಹದಿನಾರು ಪಟ್ಟು ಏರಿಕೆ ಕಂಡಿದೆ.

ಯಾರಾದರೂ ಈ ಷೇರಿನ ಮೇಲೆ ಆರು ವರ್ಷಗಳ ಹಿಂದೆ 5.93 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರೆ, ಇಂದಿಗೂ ಆ ಷೇರುಗಳನ್ನು ಇಟ್ಟುಕೊಂಡಿದ್ದರೆ ಅವರೀಗ ಕೋಟ್ಯಧಿಪತಿ. ಬುಧವಾರದಂದು ಮೋತಿಲಾಲ್ ಓಸ್ವಾಲ್ ವೆಲ್ತ್ ಕ್ರಿಯೇಷನ್ ಸ್ಟಡಿಯಲ್ಲಿ ಹೆಸರಿಸಲಾದ ಅತ್ಯಂತ ವೇಗವಾಗಿ ಸಂಪತ್ತು ಸೃಷ್ಟಿಸಿದ ಷೇರುಪೇಟೆಯ ಟಾಪ್ ಐದು ಷೇರುಗಳಲ್ಲಿ ಇದೂ ಒಂದು.

ಅಂದ ಹಾಗೆ ಕಂಪೆನಿಯ ಹೆಸರು ಆರ್ತಿ ಇಂಡಸ್ಟ್ರೀಸ್. 2013ರ ಡಿಸೆಂಬರ್ ನಲ್ಲಿ 46 ರುಪಾಯಿ ಇದ್ದ ಈ ಷೇರು, ಈಗ 775 ರುಪಾಯಿ ಆಗಿದೆ. ಈ ಆರು ವರ್ಷಗಳಲ್ಲಿ 1,600 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿದೆ. ಈಗಿನ ಬೆಲೆಯೇನೂ ಸಾರ್ವಕಾಲಿಕ ಏರಿಕೆ ಏನಲ್ಲ. ಮೇ ತಿಂಗಳು, 2019ನೇ ಇಸವಿಯಲ್ಲಿ ಷೇರಿನ ಬೆಲೆ 930.51 ರುಪಾಯಿ ಮುಟ್ಟಿತ್ತು.

ಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ 6 ವರ್ಷದಲ್ಲಿ ಕೋಟಿ ರುಪಾಯಿ

ಆ ನಂತರ ಆದಾಯ ಬೆಳವಣಿಗೆಯಲ್ಲಿ ಕಳಪೆ ಪ್ರದರ್ಶನ, ಇನ್ ಪುಟ್ ದರದಲ್ಲಿ ಇಳಿಕೆ, ಕಚ್ಚಾ ವಸ್ತುಗಳ ಅಲಭ್ಯತೆ ಇತ್ಯಾದಿ ಕಾರಣಗಳಿಗೆ ಷೇರಿನ ಬೆಲೆಯಲ್ಲಿ ಇಳಿಕೆಯಾಗಿದೆ. ತಜ್ಞರು ಹೇಳುವ ಪ್ರಕಾರ, ಈ ಷೇರು ಮತ್ತೆ ಪುಟಿದೇಳುವ ಎಲ್ಲ ಸಾಧ್ಯತೆಗಳು ಇವೆ. ಶೀಘ್ರದಲ್ಲೇ ಏರಿಕೆ ಕಾಣಬಹುದು.

ಮುಂಬೈ ಮೂಲದ ಆರ್ತಿ ಇಂಡಸ್ಟ್ರೀಸ್ ಸ್ಪೆಷಾಲಿಟಿ ಕೆಮಿಕಲ್ಸ್ ಮತ್ತು ಫಾರ್ಮಾ ವ್ಯವಹಾರದಲ್ಲಿ ತೊಡಗಿಕೊಂಡಿದೆ. ರಫ್ತು ವ್ಯವಹಾರದ ಮೂಲಕವೇ ನಲವತ್ತು ಪರ್ಸೆಂಟ್ ಆದಾಯ ಬರುತ್ತದೆ.

English summary

6 Lakh Investment On This Share Become 1 Crore In 6 Years

Aarti Industries, Mumbai based chemical company share investment of 6 lakhs become 1 crore in 6 years.
Story first published: Thursday, December 19, 2019, 18:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X