ಮಾಜಿ ಏರ್ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಅವರು ನೋಟು ನಿಷೇಧ ಘೋಷಣೆ ನಂತರದ ಆಸಕ್ತಿಕರ ಸಂಗತಿಯನ್ನು ತೆರೆದಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆ ನೋಟು ನಿಷೇಧ ಮಾಡಿದ ನಂತರ ಭಾರತೀಯ ವಾಯುಸೇನೆಯು 625 ಟನ್ ನಷ್ಟು ಹೊಸ ನೋಟುಗಳನ್ನು ದೇಶದ ನಾನಾ ಭಾಗಗಳಿಗೆ ಸಾಗಣೆ ಮಾಡಿದೆ ಎಂದು ಹೇಳಿದ್ದಾರೆ.
ಅಂದ ಹಾಗೆ, 1 ಟನ್ ಅಂದರೆ 1000 ಕೇಜಿ. ವಾಯುಸೇನೆಯು 6,25,000 ಕೇಜಿ ತೂಕದ ನೋಟುಗಳನ್ನು ಸಾಗಾಟ ಮಾಡಿದೆ ಅಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರುಪಾಯಿ ನೋಟುಗಳನ್ನು ನವೆಂಬರ್ 8, 2016ರಂದು ನಿಷೇಧ ಮಾಡಿದ್ದರು.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ನೋಟು ನಿಷೇಧ ಆದಾಗ ನಾವು (ಭಾರತೀಯ ವಾಯು ಸೇನೆ) ನೋಟುಗಳನ್ನು ನಿಮಗಾಗಿ ತೆಗೆದುಕೊಂಡು ಬಂದಿದ್ದೆವು. ಒಂದು ವೇಳೆ ಕೋಟಿ ರುಪಾಯಿ ಹಣವು 20 kgಯ ಬ್ಯಾಗ್ ತೂಗುತ್ತದೆ ಅಂತಾದರೆ ನಾವು ಅದೆಷ್ಟು ಕೋಟಿ ಸಾಗಣೆ ಮಾಡಿದೆವು ಎಂಬ ಲೆಕ್ಕ ನನಗೆ ಗೊತ್ತಿಲ್ಲ" ಎಂದಿದ್ದಾರೆ.

ಧನೋವಾ ಅವರು ಪ್ರಸ್ತುತ ಪಡಿಸಿದ ಪ್ರಸೆಂಟೇಷನ್ ನ ಒಂದು ಸ್ಲೈಡ್ ನಲ್ಲಿ, ಆಂತರಿಕ ಸೇವೆಯ ಭಾಗವಾಗಿ ವಾಯು ಸೇನೆಯು ಆರುನೂರಾ ಇಪ್ಪತ್ತೈದು ಟನ್ ಟಂಕಸಾಲೆಯ ಸರಕನ್ನು ಸಾಗಾಟ ಮಾಡಿದೆ ಎಂಬ ಮಾಹಿತಿ ಒಳಗೊಂಡಿತ್ತು. ಅಂದ ಹಾಗೆ ಧನೋವಾ ಅವರು ಡಿಸೆಂಬರ್ 31, 2016ರಿಂದ ಸೆಪ್ಟೆಂಬರ್ 30, 2019ರ ಮಧ್ಯೆ ಭಾರತದ ವಾಯು ಸೇನೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.


Click it and Unblock the Notifications