For Quick Alerts
ALLOW NOTIFICATIONS  
For Daily Alerts

BSNLನ 70 ಸಾವಿರ ಉದ್ಯೋಗಿಗಳಿಂದ VRS ಆಯ್ಕೆ

|

BSNLನ ಸ್ವಯಂ ನಿವೃತ್ತಿ ಯೋಜನೆ (VRS) ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಒಂದು ವಾರದೊಳಗೆ 70 ಸಾವಿರ BSNL ಉದ್ಯೋಗಿಗಳು VRS ಆಯ್ಕೆ ಮಾಡಿಕೊಂಡಿದ್ದಾರೆ.

ಒಂದೂವರೆ ಲಕ್ಷ ಉದ್ಯೋಗಿಗಳನ್ನ ಹೊಂದಿರುವ BSNLನಲ್ಲಿ, ಸುಮಾರು 1 ಲಕ್ಷ ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆ ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ. ಈಗಾಗಲೇ 70 ಸಾವಿರ ಜನರು ಸ್ವಯಂ ಪ್ರೇರಿತರಾಗಿ VRS ಆಯ್ಕೆ ಮಾಡಿಕೊಂಡಿದ್ದಾರೆ ಎಂದು BSNL ಅಧ್ಯಕ್ಷ ಮತ್ತು ಎಂಡಿ ಪಿ.ಕೆ ಪುರ್ವಾರ್ ಪಿಟಿಐಗೆ ತಿಳಿಸಿದ್ದಾರೆ.

BSNLನ  70 ಸಾವಿರ ಉದ್ಯೋಗಿಗಳಿಂದ VRS ಆಯ್ಕೆ

BSNL ಒಟ್ಟಾರೆಯಾಗಿ 77 ಸಾವಿರ ಉದ್ಯೋಗಿಗಳಿಂದ VRS ಪಡೆಯಬೇಕೆಂದು ಗುರಿ ಹಾಕಿಕೊಂಡಿತ್ತು. ಇದರಿಂದ ವರ್ಷಕ್ಕೆ ೭ ಸಾವಿರ ಕೋಟಿ ಉಳಿತಾಯಕ್ಕೆ ಯೋಜನೆ ಮಾಡಿಕೊಂಡಿದೆ. ಇದಕ್ಕೂ ಮೊದಲು ಮುಂಬೈ ಮತ್ತು ದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ಎಂಟಿಎನ್ಎಲ್ ಅನ್ನು BSNL ನೊಂದಿಗೆ ಸಂಯೋಜಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಎಂಟಿಎನ್ಎಲ್ ಕೂಡ ತನ್ನ ಉದ್ಯೋಗಿಗಳಲ್ಲಿ VRS ಆಯ್ಕೆಗೆ ಅವಕಾಶ ನೀಡಿದ್ದು, ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ.

ಲ್ಯಾಂಡ್ ಲೈನ್ ಫೋನ್ ನಲ್ಲಿ ಮಾತಾಡುವವರಿಗೇ ಕಾಸು ಕೊಡಲಿದೆ BSNLಲ್ಯಾಂಡ್ ಲೈನ್ ಫೋನ್ ನಲ್ಲಿ ಮಾತಾಡುವವರಿಗೇ ಕಾಸು ಕೊಡಲಿದೆ BSNL

BSNL ವಿಆರ್ ಎಸ್ ಯೋಜನೆಗೆ ಯಾರು ಅರ್ಹರು?
ಎಲ್ಲ ರೆಗ್ಯುಲರ್ ಮತ್ತು ಕಾಯಂ ಬಿಎಸ್ಎನ್ಎಲ್ ಉದ್ಯೋಗಿಗಳು ಅರ್ಹರು. ಬೇರೆ ಸಂಸ್ಥೆಗಳಿಗೆ ನಿಯೋಜನೆ ಮೇಲೆ ತೆರಳಿದವರು ಅಥವಾ ನಿಯೋಜನೆ ಮೇಲೆ ಬಿಎಸ್ಎನ್ಎಲ್ ನ ಆಚೆಗೆ ಪೋಸ್ಟ್ ಆಗಿರುವವರು, 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಯೋಜನೆಗೆ ಅರ್ಹರು.

ವಿಆರ್ ಎಸ್ ಪರಿಹಾರ ಮೊತ್ತ ಲೆಕ್ಕಾಚಾರ ಹೇಗೆ?
ಇನ್ನು VRS ನಲ್ಲಿ ಎಕ್ಸ್ ಗ್ರೇಷಿಯಾ ಹೇಗೆ ಲೆಕ್ಕ ಹಾಕುತ್ತಾರೆ ಅಂದರೆ, ಈಗಾಗಲೇ ಪೂರ್ಣಗೊಳಿಸಿರುವ ಸೇವೆಯ ವರ್ಷಗಳಿಗೆ ಒಂದು ವರ್ಷಕ್ಕೆ 35 ದಿನದಂತೆ ಹಾಗೂ ಬಾಕಿ ಇರುವ ಸೇವೆಗೆ ವರ್ಷಕ್ಕೆ 25 ದಿನದಂತೆ ವೇತನ ಲೆಕ್ಕ ಹಾಕಿ ನೀಡಲಾಗುತ್ತದೆ. ಉದಾಹರಣೆಗೆ ಇಪ್ಪತ್ತೈದು ವರ್ಷ ಸೇವೆ ಪೂರ್ಣಗೊಳಿಸಿ, ಇನ್ನು ಹತ್ತು ವರ್ಷ ಸೇವೆ ಬಾಕಿ ಇದ್ದಲ್ಲಿ ಲೆಕ್ಕಾಚಾರ ಹೀಗಿರುತ್ತದೆ. ಪೂರ್ಣಗೊಂಡ ವರ್ಷಗಳಿಗೆ 25X35= 875 ಹಾಗೂ ಬಾಕಿ ಇರುವ ವರ್ಷಗಳಿಗೆ 10X25= 250 ಮತ್ತು ಎರಡೂ ಒಟ್ಟು ಮಾಡಿದರೆ 1125 ದಿನಗಳ ವೇತನ ದೊರೆಯುತ್ತದೆ.

English summary

70,000 Bsnl Employees Opt For Vrs Scheme In A Week

As many as 70,000 bsnl employees have already opted for the VRS scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X