For Quick Alerts
ALLOW NOTIFICATIONS  
For Daily Alerts

7th Pay Commission: ತುಟ್ಟಿ ಭತ್ಯೆ, ತುಟ್ಟಿ ಭತ್ಯೆ ಪರಿಹಾರ, ಮಾರ್ಚ್‌ನಲ್ಲಿ ಕೇಂದ್ರ ನಿರ್ಧಾರ ಪ್ರಕಟ

ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿಸಲಾಗಿರುವ ತುಟ್ಟಿ ಭತ್ಯೆ (DA) ಹಾಗೂ ತುಟ್ಟಿ ಭತ್ಯೆ ಪರಿಹಾರ (DR) ಕುರಿತು ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರಗಳನ್ನು ಮಾರ್ಚ್‌ ಮೊದಲ ವಾರ ಕೈಗೊಳ್ಳುವುದಾಗಿ ತಿಳಿಸಿದೆ. ವಿವರ ಇಲ್ಲಿದೆ.

|

ಬೆಂಗಳೂರು, ಫೆಬ್ರುವರಿ 05: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಹೆಚ್ಚಿಸಲಾಗಿರುವ ತುಟ್ಟಿ ಭತ್ಯೆ (DA) ಹಾಗೂ ತುಟ್ಟಿ ಭತ್ಯೆ ಪರಿಹಾರ (DR) ಹಣವನ್ನುಈಗಾಗಲೇ ಹೆಚ್ಚಿಸಿದೆ. ಈ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಮಾರ್ಚ್‌ ಮೊದಲ ವಾರ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.

ಮಾರ್ಚ್ ಮೊದಲ ವಾರ ಒಟ್ಟು 65 ಲಕ್ಷ ಕೇಂದ್ರ ಸರ್ಕಾರಿ ನೌಕರರು ತಟ್ಟಿ ಭತ್ಯೆ ಹಾಗೂ ಸುಮಾರು 48 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಪರಿಹಾರ ಕುರಿತು ಸಪ್ಟತೆ ದೊರೆಯಲಿದೆ. ಡಿಎ ಹೆಚ್ಚಳವನ್ನು ಈಗಾಗಲೇ ಸರ್ಕಾರ ಘೋಷಿಸಿದೆ.

Union Budget 2023 Highlights : ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆUnion Budget 2023 Highlights : ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆ

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಪ್ರಕಾರ, ನವೆಂಬರ್ ನಂತರ ಡಿಸೆಂಬರ್‌ನಲ್ಲಿ ದತ್ತಾಂಶವೊಂದನ್ನು ಬಿಡುಗಡೆ ಆಗಿತ್ತು. ತುಟ್ಟಿಭತ್ಯೆಯಲ್ಲಿ ಲಾಭವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ವಾಸ್ತವದಲ್ಲಿ ತುಟ್ಟಿ ಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ ಪಡೆಯಲು ಕೇಂದ್ರ ಸಿಬ್ಬಂದಿ ಮತ್ತು ಪಿಂಚಣಿದಾರರು ಕಾಯುತ್ತಿದ್ದಾರೆ.

7th Pay Commission:ಡಿಎ, ಡಿಆರ್ ಬಗ್ಗೆ ಮಾರ್ಚ್ ಆರಂಭದಲ್ಲಿ ನಿರ್ಧಾರ

ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಾಗಬಹುದು

ಕಾರ್ಮಿಕ ಸಚಿವಾಲಯವು ಇತ್ತೀಚೆಗೆ ಡಿಸೆಂಬರ್ 2022 ಕ್ಕೆ ಬಿಡುಗಡೆ ಮಾಡಿದ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ನೋಡಿದರೆ ಡಿಎ ನಲ್ಲಿ ನವೆಂಬರ್‌ ಇಳಿಕೆ ಕಂಡು ಬಂದರೆ, ಜುಲೈನಿಂದ ನವೆಂಬರ್ ವರೆಗೆ ಏರಿಕೆ ಆಗಿದೆ. ಈ ಸೂಚ್ಯಂಕದಡಿ ಡಿಎಯಲ್ಲಿ ಶೇ. 4 ರಷ್ಟು ಹೆಚ್ಚಳ ಅಂದಾಜಿಸಲಾಗಿತ್ತು. ಆದರೆ ಅಷ್ಟು ಆಗದೇ ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.

ಕಳೆದ ಜುಲೈ ತಿಂಗಳ ಡಿಎ ಶೇಕಡಾ 4 ಹೆಚ್ಚಳದ ನಂತರ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಶೇಕಡಾ 38ರಷ್ಟು ಹೆಚ್ಚಾಗಿದೆ. ಶೇ, 3 ರಷ್ಟು ಹೆಚ್ಚಳವಾದರೆ, ಈಗ ಅದು ಶೇ.41ಕ್ಕೆ ಏರಲಿದೆ ಎಂದು ಸಚಿವಾಲಯ ತಿಳಿಸಿದೆ.

7th Pay Commission:ಡಿಎ, ಡಿಆರ್ ಬಗ್ಗೆ ಮಾರ್ಚ್ ಆರಂಭದಲ್ಲಿ ನಿರ್ಧಾರ

ತುಟ್ಟಿಭತ್ಯೆ ಎರಡು ಬಾರಿ ಪರಿಷ್ಕರಣೆ

7ನೇ ಏಳನೇ ವೇತನ ಆಯೋಗದ ಪ್ರಕಾರ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಹೆಚ್ಚಾಗುತ್ತದೆ. 2023ರ ಜನರಿಯ ತುಟ್ಟಿ ಭತ್ಯೆ ಹೆಚ್ಚಳ ಬಹಿರಂಗಗೊಳ್ಳಲಿದೆ. ಅದು ಕೇಂದ್ರದ ನಿರ್ಧಾರದಿಂದ ಹೊರ ಬೀಳಲಿದೆ.

English summary

7th Pay Commission: Central Take Decision About DA And DR Increase In 1st Week Of March

7th Pay Commission: Central take decision about dearness allowance (DA) and Dearness Relief (DR) increase in first week of March.
Story first published: Sunday, February 5, 2023, 17:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X