For Quick Alerts
ALLOW NOTIFICATIONS  
For Daily Alerts

7th Pay Commission:ಡಿಎ ವಿತರಣೆ ಶೀಘ್ರ, ಸರ್ಕಾರ ಫಿಟ್‌ಮೆಂಟ್ ಅಂಶ ಏರಿಕೆ ಮಾಡುವ ಸಾಧ್ಯತೆ

ಹೊಸ ವರ್ಷಕ್ಕೆ ಏಳನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರು ತುಟ್ಟಿ ಭತ್ಯೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಆದಷ್ಟು ಶೀಘ್ರವೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಜೊತೆಗೆ ಪ್ರಸ್ತುತ ಫಿಟ್‌ಮೆಂಟ್ ಅಂಶದ ದರವನ್ನು ಹೆಚ್ಚಿಸಲು ಸರ್ಕಾರ ಒಲವು ತೋರುತ್ತ

|

ಬೆಂಗಳೂರು, ಜನವರಿ 24: ಹೊಸ ವರ್ಷಕ್ಕೆ ಏಳನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರು ತುಟ್ಟಿ ಭತ್ಯೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಆದಷ್ಟು ಶೀಘ್ರವೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಜೊತೆಗೆ ಪ್ರಸ್ತುತ ಫಿಟ್‌ಮೆಂಟ್ ಅಂಶದ ದರವನ್ನು ಹೆಚ್ಚಿಸಲು ಸರ್ಕಾರ ಒಲವು ತೋರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ದೊರೆತ ಅಂಕಿಅಂಶಗಳ ಪ್ರಕಾರ ಈಗಾಗಲೇ ಎರಡು ಭಾರಿ ತುಟ್ಟಿ ಭತ್ಯೆ (DA) ಹೆಚ್ಚಳ ಮಾಡಲಾಗುತ್ತದೆ. ಜನವರಿ ಹಾಗೂ ಜುಲೈ ತಿಂಗಳಲ್ಲಿ ಏರಿಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಫೆಬ್ರುವರಿಗೆ ತುಟ್ಟಿ ಭತ್ಯೆ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ

ಹಣದುಬ್ಬರ ಗ್ರಾಫ್ ಪ್ರಕಾರ ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ (ಡಿಎ ಹೆಚ್ಚಳ) ನಡೆಯುತ್ತಿರುವ ವರ್ಷದಲ್ಲಿ 3 ಪ್ರತಿಶತದಷ್ಟು ಬೆಳೆಯಬಹುದು ಎನ್ನಲಾಗಿದೆ. ಜನವರಿ 2020 ರಿಂದ ಜೂನ್ 2021 ರವರೆಗಿನ ನೌಕರರ ಡಿಎ ನೀಡುವುದು ಬಾಕಿ ಇದೆ. ಅದನ್ನು ಸರ್ಕಾರ ನೀಡಬೇಕಿದ್ದು, ಈ ಬಗ್ಗೆ ನೌಕರರ ಸಂಘಟನೆಗಳು ಒತ್ತಾಯಿಸಿವೆ. ಇತ್ತೀಚಿನ ನವೀಕರಣದಿಂದಾಗಿ ಸರ್ಕಾರ ನೌಕರರಿಗೆ 18 ತಿಂಗಳ ಬಾಕಿಯಿರುವ ಮೊತ್ತವನ್ನು ನೀಡಲು ನೀರ್ಧರಿಸುವ ಸಾಧ್ಯತೆ ಇದೆ.

7th Pay Commission:ಡಿಎ ವಿತರಣೆ ಶೀಘ್ರ,ಫಿಟ್‌ಮೆಂಟ್ ಏರಿಕೆ ಸಾಧ್ಯತೆ

2023ರ ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಆಯವ್ಯಯದ ಬಳಿಕ ಪ್ರಸಕ್ತ ಫಿಟ್‌ಮೆಂಟ್ ಅಂಶವನ್ನು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಫಿಟ್‌ಮೆಂಟ್ ಅಂಶದ ದರ ಶೇ.2.6ರಿಂದ ಶೇಕಡಾ 3.7ಕ್ಕೆ ಏರಿಕೆ ಮಾಡಲು ಸಂಘಟನೆಗಳ ಸದಸ್ಯರು, ನೌಕರರು ಆಗ್ರಹಿಸಿದ್ದಾರೆ.

ಸರ್ಕಾರ ಒಂದು ವೇಳೆ ಫಿಟ್‌ಮೆಂಟ್ ಹೆಚ್ಚಿಸಿದ್ದೇ ಆದರೆ ಸಿಬ್ಬಂದಿಯ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಹೆಚ್ಚಳದ ನಂತರ ಮೂಲ ವೇತನ 18,000 ರೂ.ನಿಂದ 26,000 ರೂಪಾಯಿವರೆಗೆ ಹೆಚ್ಚಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಕಳೆದ ಬಾರಿ 2016 ರಲ್ಲಿ ಫಿಟ್‌ಮೆಂಟ್ ಅಂಶ ಹೆಚ್ಚಿಸಿದೆ.

English summary

7th Pay Commission: Govt employees expecting dearness allowance, fitment increase likely

7th Pay Commission: Government employees expecting dearness allowance, fitment increase likely.
Story first published: Tuesday, January 24, 2023, 20:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X