For Quick Alerts
ALLOW NOTIFICATIONS  
For Daily Alerts

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ

|

ಸರಕಾರದ ಬೆಲೆ ನಿಯಂತ್ರಣದ ಹೊರಗಿನ ಎಲ್ಲಾ ಔಷಧಗಳ ಮಾರಾಟದಲ್ಲಿ ಗರಿಷ್ಟ ಶೇಕಡಾ 30ರಷ್ಟು ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವ ಸರ್ಕಾರದ ಪ್ರಸ್ತಾಪಕ್ಕೆ ದೇಶೀಯ ಔಷಧ ಉದ್ಯಮ ಮತ್ತು ವ್ಯಾಪಾರವು ಸಮ್ಮತಿಸಿವೆ. ಈ ಮೂಲಕ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಸದ್ಯದಲ್ಲೇ ಇಳಿಕೆ ಕಾಣಲಿದೆ.

ಬಡವರಿಗೆ ಹೆಚ್ಚು ಅನುಕೂಲವಾಗುವಂತೆ ಔಷಧ ಬೆಲೆಗಳ ಮೇಲಿನ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರವು, ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವಂತೆ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಈ ವಿಚಾರವಾಗಿ ನಡೆದ ಸಭೆಯಲ್ಲಿ ಔಷಧ ಬೆಲೆ ನಿಗದಿ ನಿಯಂತ್ರಕ, ಫಾರ್ಮಾ ಲಾಬಿ ಗುಂಪುಗಳು ಮತ್ತು ಉದ್ಯಮ ಸಂಘಗಳ ನಡುವೆ ಒಮ್ಮತ ಮೂಡಿಸಲಾಗಿದೆ.

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ

ಈ ಕ್ರಮದಿಂದಾಗಿ ಬೃಹತ್ ಔಷಧ ಕಂಪನಿಗಳಾದ ಸನ್ ಫಾರ್ಮಾ, ಸಿಪ್ಲಾ, ಲುಪಿನ್‌ ಔಷಧಗಳ ಮೇಲಿನ ಗರಿಷ್ಟ ಲಾಭಾಂಶದ ಬೆಲೆಯನ್ನು ಕಡಿಮೆ ಮಾಡಬೇಕಾಗುತ್ತದೆ.

'ಔಷಧಗಳ ಮಾರಾಟದಲ್ಲಿ ಗರಿಷ್ಟ ಶೇಕಡಾ 30ರಷ್ಟು ಲಾಭದ ಅಂಶಕ್ಕೆ ಮಿತಿ ವಿಧಿಸುವ ಕ್ರಮಕ್ಕೆ ನಮ್ಮ ಸಮ್ಮತಿ ಇದೆ. ಈಗಾಗಲೇ ಕ್ಯಾನ್ಸರ್ ಔಷಧಗಳ ಮೇಲಿನ ಗರಿಷ್ಠ ಲಾಭಾಂಶದ ದರವನ್ನು ಶೇಕಡಾ 30ರಷ್ಟು ನಿಗದಿಪಡಿಸಿರುವುದರಿಂದ ನಮಗೇನು ತೊಂದರೆಯಿಲ್ಲ. ಆದರೆ ಇತರೇ ಉತ್ಪನ್ನಗಳಿಗೂ ಅದನ್ನು ವಿಸ್ತರಿಸಬೇಕಾದರೆ ಅದನ್ನು ಹಂತ ಹಂತವಾಗಿ ಮಾಡಬೇಕು' ಎಂದು ಭಾರತೀಯ ಔಷಧ ತಯಾರಕರ ಸಂಘದ(ಐಡಿಎಂಎ) ಅಧ್ಯಕ್ಷ ದೀಪನಾಥ್ ರಾಯ್ ಚೌಧರಿ ಹೇಳಿದ್ದಾರೆ.

English summary

80 Percent Of Medicines Prices May Soon fall

The Domestic drug industry and trade have agreed to government's proposal to cap trade margins for all medicines outside price control at 30 percent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X