For Quick Alerts
ALLOW NOTIFICATIONS  
For Daily Alerts

H-1ಬಿ ವೀಸಾದಡಿ ಅಮೆರಿಕಾದಲ್ಲಿರುವ 2 ಲಕ್ಷ ಜನರು ಅತಂತ್ರ? ಕಾನೂನು ಮಾನ್ಯತೆ ಕಳೆದುಕೊಳ್ಳುವ ಭೀತಿ!

|

ಕೊರೊನಾವೈರಸ್ ಜಾಗತಿಕವಾಗಿ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿರುವುದರ ಜತೆ ವಿದೇಶದಲ್ಲಿರುವ ವಲಸಿಗರ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆ ಅಮೆರಿಕಾದಲ್ಲಿರುವ ವಲಸಿಗರು.

 

ಕೊರೊನಾದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಮೆರಿಕಾ ತನ್ನ ವಲಸೆ ನೀತಿಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಂಡಿದ್ದು, 60 ದಿನಗಳವರೆಗೆ ವಲಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಆದೇಶ ಹೊರಡಿಸಿದೆ. ವಲಸಿಗರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿರುವ ಕಡತಕ್ಕೆ ಡೊನಾಲ್ಡ್ ಟ್ರಂಪ್ ಈಗಾಗಲೇ ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೀನ್ ಕಾರ್ಡ್ ಪಡೆದು ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಯೂರುವ ಕನಸು ಹೊತ್ತ ಲಕ್ಷಾಂತರ ವಿದೇಶಿಯರು ಇದೀಗ ಅತಂತ್ರರಾಗಿದ್ದಾರೆ.

ಅಮೆರಿಕಾದಲ್ಲಿ ನೆಲಸಬೇಕೆಂದುಕೊಂಡಿದ್ದ ಭಾರತೀಯರು ಅತಂತ್ರ

ಅಮೆರಿಕಾದಲ್ಲಿ ನೆಲಸಬೇಕೆಂದುಕೊಂಡಿದ್ದ ಭಾರತೀಯರು ಅತಂತ್ರ

ಅಮೆರಿಕಾದಲ್ಲಿ H-1ಬಿ ವೀಸಾದಡಿ ಹೋಗಿರುವ ಭಾರತೀಯರು ಸಾಕಷ್ಟಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ಅಮೆರಿಕಾದಲ್ಲಿ ನೆಲಸಿದ್ದಾರೆ. ಆದರೆ ಇವರಲ್ಲಿ ಹಲವಾರು ಜನರು H-1B ವೀಸಾದಡಿ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದರೆ. ಮತ್ತೆ ಕೆಲವರು ಗ್ರೀನ್ ಕಾರ್ಡ್ ಪಡೆದು ಅಮೆರಿಕದಲ್ಲೇ ಶಾಶ್ವತವಾಗಿ ನೆಲಸಲು ಬಯಸಿದ್ದಾರೆ.

ಆದರೆ ಟ್ರಂಪ್ ಅವರ ವಲಸೆ ನೀತಿಯಲ್ಲಿನ ತಾತ್ಕಾಲಿಕ ಬದಲಾವಣೆ ಈ ಎಲ್ಲಾ ಭಾರತೀಯರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಹೊಸ ಗ್ರೀನ್ ಕಾರ್ಡ್ ಸಿಗುತ್ತಿಲ್ಲವಾದ್ದರಿಂದ ಇವರೆಲ್ಲ ಅಮೆರಿಕ ಬಿಟ್ಟು ಸ್ವದೇಶಕ್ಕೆ ಮರಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

 

2 ಲಕ್ಷಕ್ಕೂ ಅಧಿಕ ಜನರು ಕಾನೂನು ಮಾನ್ಯತೆ ಕಳೆದುಕೊಳ್ಳಲಿದ್ದಾರೆ?

2 ಲಕ್ಷಕ್ಕೂ ಅಧಿಕ ಜನರು ಕಾನೂನು ಮಾನ್ಯತೆ ಕಳೆದುಕೊಳ್ಳಲಿದ್ದಾರೆ?

ಹೌದು, ಅಮೆರಿಕಾದ ಈ ತಾತ್ಕಾಲಿಕ ಬದಲಾವಣೆಯು ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಸಬೇಕೆಂದು ಕನಸು ಕಾಣುತ್ತಿದ್ದವರಿಗೆ ಆಘಾತ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್, ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ 2,50,000ಕ್ಕೂ ಅಧಿಕ ವಿದೇಶಿ ನಾಗರಿಕರ ಪೈಕಿ 2 ಲಕ್ಷಕ್ಕೂ ಅಧಿಕ ಜನರು ಜೂನ್ ಅಂತ್ಯದ ವೇಳೆಗೆ ಅಮೆರಿಕದಲ್ಲಿ ನೆಲೆಸುವ ಕಾನೂನು ಮಾನ್ಯತೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕರು ಭಾರತೀಯರು ಎಂಬುದನ್ನು ಜೆರೆಮಿ ನ್ಯೂಫೆಲ್ಡ್ ಒತ್ತಿ ಹೇಳಿದ್ದಾರೆ.

ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ, ಮುಚ್ಚುತ್ತಿವೆ ಅನೇಕ ಕಂಪನಿಗಳು
 

ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ, ಮುಚ್ಚುತ್ತಿವೆ ಅನೇಕ ಕಂಪನಿಗಳು

ಕೊರೊನಾವೈರಸ್ ವಿಶ್ವದಲ್ಲಿ ಯಾವ ದೇಶವನ್ನೂ ಬಿಡದೆ ಹಾವಳಿ ಎಬ್ಬಿಸಿದೆ. ಇದರಿಂದ ವಿಶ್ವದ ದೊಡ್ಡಣ್ಣ ಅಮೆರಿಕಾ ದೊಡ್ಡ ಮಟ್ಟಿನ ಆಘಾತ ಅನುಭವಿಸಿದೆ. ಕೊರೊನಾ ಕಾರಣದಿಂದ ಅಮೆರಿಕಾ ಭಾರೀ ಪ್ರಮಾಣದ ಆರ್ಥಿಕ ಹಿಂಜರಿಕೆಯನ್ನು ಎದುರಿಸಲಿದ್ದು, ಈಗಾಗಲೇ ಸಾಕಷ್ಟು ಸಾಫ್ಟವೇರ್ ಕಂಪನಿಗಳು ಮುಚ್ಚಿವೆ. ಇದೇ ಕಾರಣಕ್ಕೆ ಲಕ್ಷಾಂತರ ವಿದೇಶಿ ನಾಗರಿಕರು ಮರಳಿ ತಮ್ಮ ತಮ್ಮ ದೇಶಗಳಿಗೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಜೆರೆಮಿ ನ್ಯೂಫೆಲ್ಡ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾವನ್ನು ಬಿಡಬೇಕಾದ ಪರಿಸ್ಥಿತಿಯಲ್ಲಿ ಕಾರ್ಮಿಕರು!

ಅಮೆರಿಕಾವನ್ನು ಬಿಡಬೇಕಾದ ಪರಿಸ್ಥಿತಿಯಲ್ಲಿ ಕಾರ್ಮಿಕರು!

H-1ಬಿ ವೀಸಾದಡಿ ಭಾರತೀಯರೂ ಸೇರಿದಂತೆ ಲಕ್ಷಾಂತರ ವಿದೇಶಿಗರು ಅಮೆರಿಕದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಹಲವರು ಕೆಲಸ ಮುಗಿದ ಬಳಿಕ ತಮ್ಮ ತಾಯ್ನಾಡಿಗೆ ವಾಪಸ್ ಆಗುತ್ತಾರೆ. ಮತ್ರೆ ಕೆಲವರು ಗ್ರೀನ್ ಕಾರ್ಡ್ ಪಡೆದು ಅಮೆರಿಕಾದಲ್ಲೇ ಶಾಶ್ವತವಾಗಿ ನೆಲೆಯೂರುತ್ತಾರೆ.

60 ದಿನದೊಳಗೆ ಬೇರೆ ಕೆಲಸ ಹುಡುಕಿಕೊಳ್ಳಬೇಕು, ಇಲ್ಲವೇ ಅಮೆರಿಕಾ ದೇಶ ಬಿಡಬೇಕು:H1-B ವೀಸಾ ಗೋಳು60 ದಿನದೊಳಗೆ ಬೇರೆ ಕೆಲಸ ಹುಡುಕಿಕೊಳ್ಳಬೇಕು, ಇಲ್ಲವೇ ಅಮೆರಿಕಾ ದೇಶ ಬಿಡಬೇಕು:H1-B ವೀಸಾ ಗೋಳು

ಆದರೆ ಅಮೆರಿಕ ಸದ್ಯ ಮಾಡಿಕೊಂಡಿರುವ ವಲಸೆ ನೀತಿ ಪರಿಣಾಮವಾಗಿ H-1ಬಿ ವೀಸಾದಡಿ ಕೆಲಸ ಮಾಡುತ್ತಿರುವ ವಿದೇಶಿಗರು ಇದೀಗ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಕಾನೂನು ಪ್ರಕಾರ ಜೂನ್ ತಿಂಗಳ ಒಳಗೆ ಅಮೆರಿಕ ಬಿಡಬೇಕಾಗಿದೆ. ಹೀಗಾಗಿ ವಲಸೆ ಕಾರ್ಮಿಕರು ಏನು ಮಾಡಬೇಕೆಂದು ತೋಚದೆ ಅತಂತ್ರರಾಗಿದ್ದಾರೆ.

 

English summary

Above 2 Lakh H1-B Workers Could Lose Legal Status By June

Layoffs in the US due to the coronavirus pandemic that is having an adverse effect on H1-B visa holders, who could run the risk of losing their status
Story first published: Wednesday, April 29, 2020, 18:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X