For Quick Alerts
ALLOW NOTIFICATIONS  
For Daily Alerts

ಕಾರ್ಲೈಲ್ ಏಷ್ಯಾ ಹಿರಿಯ ಸಲಹೆಗಾರರಾಗಿ ಆದಿತ್ಯ ಪುರಿ ನೇಮಕ

|

ಎಚ್ ಡಿಎಫ್ ಸಿ ಬ್ಯಾಂಕ್ ಮಾಜಿ ಮುಖ್ಯಾಧಿಕಾರಿ ಆದಿತ್ಯ ಪುರಿ ಅವರನ್ನು ಕಂಪೆನಿಯ ಏಷ್ಯಾ ಹಿರಿಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ ಎಂದು ಜಾಗತಿಕ ಹೂಡಿಕೆ ಸಂಸ್ಥೆ ಕಾರ್ಲೈಲ್ ಸೋಮವಾರ ಘೋಷಣೆ ಮಾಡಲಾಗಿದೆ. ಏಷ್ಯಾದ್ಯಂತ ಹೂಡಿಕೆ ಅವಕಾಶಗಳನ್ನು ಕಾರ್ಲೈಲ್ ತಂಡಕ್ಕೆ ಪುರಿ ಅವರು ಸಲಹೆ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

ಆದಿತ್ಯ ಪುರಿ ಅವರು 1994ನೇ ಇಸವಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಮೊದಲ ಸಿಇಒ ಆಗಿ ನೇಮಕ ಆಗಿದ್ದರು. ಅವರ 26 ವರ್ಷದ ಅಧಿಕಾರಾವಧಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಮತ್ತು ಮಾರುಕಟ್ಟೆ ಮೌಲ್ಯದ ವಿಚಾರದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಕ್ ಎನಿಸಿಕೊಂಡಿತು.

ನಿವೃತ್ತಿ ಬದುಕಿಗಾಗಿ 843 ಕೋಟಿ ರು. ಷೇರು ಮಾರಿದರಂತೆ ಆದಿತ್ಯ ಪುರಿನಿವೃತ್ತಿ ಬದುಕಿಗಾಗಿ 843 ಕೋಟಿ ರು. ಷೇರು ಮಾರಿದರಂತೆ ಆದಿತ್ಯ ಪುರಿ

ಅದಕ್ಕೂ ಮುನ್ನ ಆದಿತ್ಯ ಪುರಿ 20 ವರ್ಷಗಳ ಕಾಲ ಸಿಟಿ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಭಾರತ, ಗ್ರೀಸ್, ಸೌದಿ ಅರೇಬಿಯಾ, ಹಾಂಕಾಂಗ್, ಕೊರಿಯಾ, ತೈವಾನ್, ಚೀನಾ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಕೊನೆಯದಾಗಿ 1992- 1994ರ ಮಧ್ಯೆ ಮಲೇಷ್ಯಾ ಸಿಟಿ ಬ್ಯಾಂಕ್ ಕಾರ್ಯ ನಿರ್ವಹಣೆಯ ಸಿಇಒ ಆಗಿ ಜವಾಬ್ದಾರಿ ನಿರ್ವಹಿಸಿದ್ದರು.

ಕಾರ್ಲೈಲ್ ಏಷ್ಯಾ ಹಿರಿಯ ಸಲಹೆಗಾರರಾಗಿ ಆದಿತ್ಯ ಪುರಿ ನೇಮಕ

ಕಾರ್ಲೈಲ್ ನಿಂದ ಏಷ್ಯಾದ್ಯಂತ (ಜಪಾನ್ ಹೊರತುಪಡಿಸಿ) ಸೆಪ್ಟೆಂಬರ್ 30, 2020ಕ್ಕೆ 4.9 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿದೆ. ಎಸ್ ಬಿಐ ಕಾರ್ಡ್, ಎಸ್ ಬಿಐ ಲೈಫ್, ಎಚ್ ಡಿಎಫ್ ಸಿ ಲಿ., ಪಿಎನ್ ಬಿ ಹೌಸಿಂಗ್ ಫೈನಾನ್ಸ್, ರೆಪ್ಕೊ ಹೌಸಿಂಗ್ ಫೈನಾನ್ಸ್, ಐಐಎಫ್ ಎಲ್ ಸೇರಿದಂತೆ ಅನೇಕ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ.

ನಿರ್ವಹಣಾ ತಂಡಗಳ ಜತೆಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದರಲ್ಲಿ ಹಾಗೂ ವ್ಯವಹಾರದಲ್ಲಿ ಬದಲಾವಣೆ ತರುವ ಸಾಮರ್ಥ್ಯದಲ್ಲಿ ಕಾರ್ಲೈಲ್ ಹೆಸರುವಾಸಿ. ಕಾರ್ಲೈಲ್ ನ ಇಲ್ಲಿಯವರೆಗಿನ ದಾಖಲೆಗಳಿಂದ ನನಗೆ ಬಹಳ ಸತೋಷ ಇದೆ. ಭಾರತ ಮಾತ್ರವಲ್ಲ, ಏಷ್ಯಾದಾದ್ಯಂತ ಮುಂಚೂಣಿ ಸ್ಥಾನದಲ್ಲಿದೆ ಎಂದು ಪುರಿ ಹೇಳಿದ್ದಾರೆ.

English summary

Aditya Puri Appointed As Carlyle Group Asia Senior Advisor

HDFC Bank former CEO Aditya Puri appoints as Carlyle group Asia senior advisor, announced on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X