For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್

|

ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ನಿಂದ "ಏರ್ ಟೆಲ್ ಸೇಫ್ ಪೇ" ಪರಿಚಯಿಸಿದೆ. ಗ್ರಾಹಕರು ಸುರಕ್ಷಿತ ಡಿಜಿಟಲ್ ವಹಿವಾಟು ನಡೆಸುವುದಕ್ಕೆ ಮತ್ತು ಆನ್ ಲೈನ್ ವಂಚನೆಯಿಂದ ರಕ್ಷಿಸಲು ಈ ವಿಧಾನ ಬಳಸಬಹುದು. ಗ್ರಾಹಕರು ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್) ವಹಿವಾಟು ಮಾಡುವಾಗ ಅಥವಾ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ನೆಟ್ ಬ್ಯಾಂಕಿಂಗ್ ಬಳಸುವಾಗ ಏರ್ ಟೆಲ್ ಸೇಫ್ ಪೇ ಎಂಬುದು ಹೆಚ್ಚುವರಿ ಸುರಕ್ಷಿತ ಗೋಡೆಯಂತೆ ಕೆಲಸ ಮಾಡುತ್ತದೆ.

ಆನ್ ಲೈನ್ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಇದರಿಂದ ಸಹಾಯ ಆಗುತ್ತದೆ. ಈ ಹೊಸ ಪೇಮೆಂಟ್ ಗೇಟ್ ವೇ ಉಚಿತವಾಗಿರುತ್ತದೆ. ಪಾಸ್ ವರ್ಡ್ ಕಳುವು, ಅನುಮಾನಾಸ್ಪದ ವಹಿವಾಟು ಮತ್ತು ಫೋನ್ ಕ್ಲೋನಿಂಗ್ ಇಂಥವುಗಳಿಂದ ರಕ್ಷಣೆ ದೊರಕಿಸಿಕೊಡುತ್ತದೆ.

ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...

ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ವಿವಿಧ ವರ್ತಕರು, ಆನ್ ಲೈನ್ ರೀಟೇಲರ್ ಗಳ ಜತೆ ಡಿಜಿಟಲ್ ವಹಿವಾಟು ನಡೆಸಬಹುದು. ಹಣ ವರ್ಗಾವಣೆ ಮಾಡಬಹುದು. ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ಬಳಸಿ ಗ್ರಾಹಕರು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದು.

ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಡಿಜಿಟಲ್ ಪೇಮೆಂಟ್ ಬಳಕೆ ವ್ಯಾಪಕವಾಗಿದೆ. ಆ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆನ್ ಲೈನ್ ವಂಚನೆ ಸವಾಲುಗಳನ್ನು ಬಗೆಹರಿಸಬೇಕಿದೆ ಎಂದು ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಿಇಒ ಮತ್ತು ಎಂ.ಡಿ. ಅನುಬ್ರತ ಬಿಶ್ವಾಸ್ ಹೇಳಿದ್ದಾರೆ.

English summary

Airtel Payments Bank Introduces Safe Pay Mode To Curb Online Frauds Cases

Airtel Payments Bank introduces Safe Pay mode to digital transaction to curb online frauds.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X