For Quick Alerts
ALLOW NOTIFICATIONS  
For Daily Alerts

ಭಾರ್ತಿ ಏರ್‌ಟೆಲ್‌ಗೆ 1,035 ಕೋಟಿ ರುಪಾಯಿ ನಷ್ಟ

|

ಭಾರ್ತಿ ಏರ್‌ಟೆಲ್ ಲಿಮಿಟೆಡ್ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿದಲ್ಲಿ 1,035 ಕೋಟಿ ನಷ್ಟವನ್ನು ದಾಖಲಿಸಿದೆ. ಇದು ಕಳೆದ 14 ವರ್ಷಗಳಲ್ಲಿ ಮೂರನೇ ತ್ರೈಮಾಸಿಕ ನಷ್ಟವಾಗಿದೆ.

 

ದೆಹಲಿ ಮೂಲದ ಟೆಲಿಕಾಂ ಆಪರೇಟರ್ ಕಂಪನಿ ಏರ್‌ಟೆಲ್ ಹಿಂದಿನ ವರ್ಷದ 86 ಕೋಟಿ ಲಾಭಕ್ಕೆ ಹೋಲಿಸಿದರೆ, ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1,035 ಕೋಟಿ ನಷ್ಟವನ್ನು ಕಂಡಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಯಾಚರಣೆಗಳಿಂದ ಏಕೀಕೃತ ಆದಾಯವು 8.5 ಪರ್ಸೆಂಟ್ರಷ್ಟು ಏರಿಕೆಯಾಗಿ, 21,947 ಕೋಟಿಗೆ ತಲುಪಿದೆ.

 
ಭಾರ್ತಿ ಏರ್‌ಟೆಲ್‌ಗೆ 1,035 ಕೋಟಿ ರುಪಾಯಿ ನಷ್ಟ

ಏರ್‌ಟೆಲ್ ಸೇರಿದಂತೆ ನಾನಾ ಟೆಲಿಕಾಂ ಸಂಸ್ಥೆಗಳಿಗೆ ಜನವರಿ 24ರ ಒಳಗೆ 1.47 ಲಕ್ಷ ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಜನವರಿ 24 ರೊಳಗೆ 35,586 ಕೋಟಿ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಗಳನ್ನು ಸರ್ಕಾರಕ್ಕೆ ಪಾವತಿಸುವಂತೆ ನ್ಯಾಯಾಲಯವು ಅಕ್ಟೋಬರ್ 24 ರಂದು ಕಂಪನಿಗೆ ಆದೇಶಿಸಿತ್ತು. ಇದರಿಂದ ಕಂಪನಿಯು ಸರ್ಕಾರಕ್ಕೆ ಬಾಕಿ ಪಾವತಿಸಲು ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಅನುಸರಿಸಲು ಹಣವನ್ನು ಮೀಸಲಿಟ್ಟಿದೆ.

ಡಿಸೆಂಬರ್‌ನಲ್ಲಿ ಕಂಪನಿಯು 40 ಪರ್ಸೆಂಟ್‌ನಷ್ಟು ಸುಂಕವನ್ನು ಹೆಚ್ಚಿಸಿತು. ಮತ್ತು ಪ್ರಿಪೇಯ್ಡ್‌ ಬಳಕೆದಾರರಿಗೆ ಕನಿಷ್ಟ ಮಾಸಿಕ ರೀಚಾರ್ಜ್ ಅನ್ನು 45 ರುಪಾಯಿಗೆ ಏರಿಕೆ ಮಾಡಿತು.

English summary

Airtel Q3 Loss 1035 Crore

Airtel posts 1035 Crore In december quarter loss On High AGR Bill
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X