For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ನ 32 ಕೋಟಿ ಗ್ರಾಹಕರ ಮಾಹಿತಿ ಸೋರಿಕೆ ಬಯಲಿಗಿಟ್ಟ ಬೆಂಗಳೂರಿಗ

|

ಇದೀಗ ಮತ್ತೊಂದು ಮಾಹಿತಿ ಸೋರಿಕೆ ಘಟನೆ ಬಯಲಿಗೆ ಬಿದ್ದಿದೆ. ಪ್ರಮುಖ ದೂರವಾಣಿ ಸಂಪರ್ಕ ಕಂಪೆನಿ ಏರ್ ಟೆಲ್ ನ ಮೂವತ್ತೆರಡು ಕೋಟಿ ಚಂದಾದಾರರ ದತ್ತಾಂಶ ಸೋರಿಕೆಯಾಗಿದೆ. ಮೊಬೈಲ್ ಅಪ್ಲಿಕೇಷನ್ ನಲ್ಲಿನ ಗಂಭೀರ ಸ್ವರೂಪದ ಭದ್ರತಾ ಲೋಪವಾಗಿದೆ. ಈ ಸಮಸ್ಯೆಯನ್ನು ಮೊದಲಿಗೆ ಗಮನಿಸಿದವರು ಬೆಂಗಳೂರು ಮೂಲದ ಸಂಶೋಧಕ ಎಹ್ರಾಜ್ ಅಹ್ಮದ್.

ಏರ್ ಟೆಲ್ ಎಪಿಐವೊಂದು (ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್ ಫೇಸ್) ಏರ್ ಟೆಲ್ ಚಂದಾದಾರರ ಸೂಕ್ಷ್ಮ ಮಾಹಿತಿಗಳನ್ನು ಬಸಿದುಕೊಳ್ಳಲು ಅವಕಾಶ ನೀಡುತ್ತಿದೆ ಎಂದು ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಏರ್ ಟೆಲ್ ಅಪ್ಲಿಕೇಷನ್ ನ ಈ ಮಾಹಿತಿ ಸೋರಿಕೆಯನ್ನು ಒಪ್ಪಿಕೊಂಡಿದೆ. ಭದ್ರತಾ ಲೋಪವನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದೆ.

ಯಾವ ಸ್ಕ್ರಿಪ್ಟ್ ಅನ್ನು ಏರ್ ಟೆಲ್ ಮೊಬೈಲ್ ಅಪ್ಲಿಕೇಷನ್ ನ ಎಪಿಐನಿಂದ ಮಾಹಿತಿಯನ್ನು ಬಸಿಯಲಾಗುತ್ತಿದೆ ಎಂಬುದರ ಬಗ್ಗೆ ಅಹ್ಮದ್ ವಿಡಿಯೋ ಸಹ ಪೋಸ್ಟ್ ಮಾಡಿದ್ದಾರೆ. "ವ್ಯಕ್ತಿ ಮೊದಲ ಹಾಗೂ ಕೊನೆಯ ಹೆಸರು, ಲಿಂಗ, ಇಮೇಲ್, ಜನ್ಮ ದಿನಾಂಕ, ವಿಳಾಸ, ಚಂದಾ ಮಾಹಿತಿ, ಸಲಕರಣೆಯ ಸಾಮರ್ಥ್ಯದ ಬಗ್ಗೆ ವಿವರ, ನೆಟ್ ವರ್ಕ್ ಮಾಹಿತಿ, ಆಕ್ಟಿವೇಷನ್ ದಿನಾಂಕ, ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಮತ್ತು ಸದ್ಯದ IMEI ಸಂಖ್ಯೆಯನ್ನು ಬಯಲು ಮಾಡಿದೆ" ಎಂದು ತಿಳಿಸಿದ್ದಾರೆ.

ಏರ್ ಟೆಲ್ ನ 32 ಕೋಟಿ ಗ್ರಾಹಕರ ಮಾಹಿತಿ ಸೋರಿಕೆ ಬಯಲಿಗಿಟ್ಟ ಬೆಂಗಳೂರಿಗ

IMEI ಸಂಖ್ಯೆ ಮೂಲಕ ಬಳಕೆದಾರರ ಉಪಕರಣ ಯಾವುದು ಎಂಬುದು ತಿಳಿಯುತ್ತದೆ. ಬ್ಲಾಗ್ ನಲ್ಲಿ ತಿಳಿಸಿರುವ ಮಾಹಿತಿಯಂತೆ, ಏರ್ ಟೆಲ್ ನೆಟ್ ವರ್ಕ್ ನ ಎಲ್ಲ ಬಳಕೆದಾರರ ಮಾಹಿತಿ ಸೋರಿಕೆ ಆಗುವ ಅಪಾಯದಲ್ಲಿದೆ. ಅಂದ ಹಾಗೆ ವೊಡಾಫೋನ್- ಐಡಿಯಾ ಮತ್ತು ಜಿಯೋ ನಂತರ ಟೆಲಿಕಾಂ ಸೇವೆ ಒದಗಿಸುವ ಭಾರತದಲ್ಲಿ ಮೂರನೇ ಅತಿ ದೊಡ್ಡ ಕಂಪೆನಿ ಏರ್ ಟೆಲ್.

English summary

Airtel's 32 Crore Subscribers Data Breach Revealed

India's 3rd largest telecom operator Airtel's 32 crore subscriber data breach revealed by Bengaluru based researcher.
Story first published: Sunday, December 8, 2019, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X