For Quick Alerts
ALLOW NOTIFICATIONS  
For Daily Alerts

ಭಾರ್ತಿ ಏರ್ ಟೆಲ್ ವೈಫೈ ಕಾಲಿಂಗ್ ಸೇವೆ ದೇಶಾದ್ಯಂತ ವಿಸ್ತರಣೆ

|

ದೇಶದ ಪ್ರಮುಖ ನಗರಗಳಲ್ಲಿ ತನ್ನ ಗ್ರಾಹಕರಿಗೆ ವೈ-ಫೈ ಕಾಲಿಂಗ್ ಸೇವೆ ಆರಂಭಿಸಿದ್ದ ಭಾರ್ತಿ ಏರ್ ಟೆಲ್, ಇದೀಗ ದೇಶಾದ್ಯಂತ ವೈ-ಫೈ ಕಾಲಿಂಗ್ ಸೇವೆ ದೊರೆಯುವುದಾಗಿ ಶುಕ್ರವಾರ ಘೋಷಣೆ ಮಾಡಿದೆ. ಎರಡು ದಿನಗಳ ಹಿಂದಷ್ಟೇ ರಿಲಯನ್ಸ್ ಜಿಯೋದಿಂದ ಭಾರತದಾದ್ಯಂತ ವೈಫೈ ಉಚಿತ ವಾಯ್ಸ್ ಮತ್ತು ವಿಡಿಯೋ ಕಾಲ್ ಗಳನ್ನು ಘೋಷಣೆ ಮಾಡಲಾಗಿದೆ.

ಏರ್ ಟೆಲ್ ಮೊಬೈಲ್ ಗ್ರಾಹಕರು ಮನೆ ಅಥವಾ ಸಾರ್ವಜನಿಕ ವೈಫೈ ನೆಟ್ ವರ್ಕ್ ಬಳಸಿ, ಈ ಅನುಕೂಲ ಪಡೆಯಬಹುದು. ಈ ಸೇವೆ ಮೂಲಕ ಕರೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ಇಲ್ಲ. ಸ್ಮಾರ್ಟ್ ಫೋನ್ ನಲ್ಲಿ ಯಾವುದೇ ಹೆಚ್ಚುವರಿ ಕಾಲಿಂಗ್ ಅಪ್ಲಿಕೇಷನ್ ಅಥವಾ ಸಿಮ್ ಅಗತ್ಯ ಇಲ್ಲದೆ ಈ ಸೇವೆ ಬಳಸಿಕೊಳ್ಳಬಹುದು.

ಜಿಯೋ ಬಳಸಿ, ವೈ-ಫೈ ಮೂಲಕ ಆಡಿಯೋ/ವಿಡಿಯೋ ಕಾಲ್ ಮಾಡಿಜಿಯೋ ಬಳಸಿ, ವೈ-ಫೈ ಮೂಲಕ ಆಡಿಯೋ/ವಿಡಿಯೋ ಕಾಲ್ ಮಾಡಿ

ಈ ಸೇವೆಯನ್ನು ಬಳಸುವುದಕ್ಕೆ ಸೂಕ್ತ ಮೊಬೈಲ್ ಫೋನ್ ಇರಬೇಕು. ಅದರ ಜತೆಗೆ ಏರ್ ಟೆಲ್ 4G ಸಿಮ್ ಕಾರ್ಡ್, ಟಾರಿಫ್ ಪ್ಲಾನ್ ಹೊಂದಿರಬೇಕು. ಯಾವ ಸ್ಮಾರ್ಟ್ ಫೋನ್ ಗಳಲ್ಲಿ ಈ ವ್ಯವಸ್ಥೆ ಬಳಸಬಹುದು ಎಂಬ ಬಗ್ಗೆ ಶುಕ್ರವಾರ ಏರ್ ಟೆಲ್ ಮಾಹಿತಿ ಕೂಡ ನೀಡಿದೆ.

ಭಾರ್ತಿ ಏರ್ ಟೆಲ್ ವೈಫೈ ಕಾಲಿಂಗ್ ಸೇವೆ ದೇಶಾದ್ಯಂತ ವಿಸ್ತರಣೆ

ಎಲ್ಲ ಆಪಲ್ ಫೋನ್ ಗಳು -6S ಮತ್ತು ಮೇಲ್ಪಟ್ಟು, ಸ್ಯಾಮ್ಸಂಗ್ S10, S10e, M20, ಒನ್ ಪ್ಲಸ್ 6 ಮತ್ತು 6T, ಶಿಯೋಮಿ ರೆಡ್ಮಿ K20, ರೆಡ್ಮಿ K20 ಪ್ರೋ ಮತ್ತು POCO F1, ಸ್ಯಾಮ್ಸಂಗ್ J6, ಸ್ಯಾಮ್ಸಂಗ್ A10s, ಸ್ಯಾಮ್ಸಂಗ್ On6, ಸ್ಯಾಮ್ಸಂಗ್ M30s, ಒನ್ ಪ್ಲಸ್ 7, ಒನ್ ಪ್ಲಸ್ 7 ಪ್ರೋ, ಒನ್ ಪ್ಲಸ್ 7T ಮತ್ತು ಒನ್ ಪ್ಲಸ್ 7T ಪ್ರೋ ಸೇರಿದಂತೆ ನೂರು ಫೋನ್ ಗಳಲ್ಲಿ ಈ ಸೇವೆ ಲಭ್ಯ ಇದೆ.

ವೈಫೈ ಕಾಲಿಂಗ್ ಆರಂಭಿಸಿದ ಮೇಲೆ ಈಗಾಗಲೇ ಇದಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಭಾರತದಲ್ಲಿ ವಾಯ್ಸ್ ಓವರ್ ವೈಫೈ ಆರಂಭಿಸಿದ ಮೊದಲ ಮೊಬೈಲ್ ಆಪರೇಟರ್ ಭಾರ್ತಿ ಏರ್ ಟೆಲ್. ಈ ಸೇವೆ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೂ ಇದೆ ಎಂದು ಕಂಪೆನಿ ಹೇಳಿಕೊಂಡಿದೆ.

English summary

Airtel WiFi Calling Service Available Across India

Bharti Airtel Friday announced that, Airtel WiFi calling service available across India. Here is the complete details.
Story first published: Friday, January 10, 2020, 19:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X