ಅಕ್ಷಯ ತೃತೀಯ ಅನ್ನೋದು ಹಿಂದೂಗಳಿಗೆ ಹಾಗೂ ಜೈನ ಸಮುದಾಯದವರಿಗೆ ಅಕ್ಷರಶಃ ಅತ್ಯಂತ ಶುಭದಾಯಕ ಹಾಗೂ ಪವಿತ್ರವಾದ ದಿನವಾಗಿದೆ. ಅಲ್ಲದೇ ಈ ಶುಭ ದಿನವನ್ನು ಎಲ್ಲಾ ರೀತಿಯ ಚಟುವಟಿಗಳನ್ನು ಮಾಡಲು ಯೋಗ್ಯವಾದ ದಿನವೆಂದು ಭಾವಿಸುತ್ತಾರೆ
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸಿದರೆ ಉತ್ತಮ ಪ್ರತಿಫಲ ಸಿಗುತ್ತದೆ ಎಂದು ನಂಬುವವರು ಹೆಚ್ಚಿದ್ದಾರೆ. ಜೊತೆಗೆ ಯೋಗ,ಜಪ,ತಪ ಅಥವಾ ಧರ್ಮಗ್ರಂಥಗಳನ್ನು ಓದುವವರಿಗೆ ಮತ್ತು ಇತರ ಯಾವುದೇ ಆಧ್ಯಾತ್ಮಿಕ ವಿಚಾರಗಳನ್ನು ನಡೆಸುವವರಿಗೆ ಈ ದಿನವು ಅತ್ಯಂತ ಒಳ್ಳೆಯ ದಿನ ಎಂದು ನಂಬಲಾಗಿದೆ.
2021ರ ಅಕ್ಷಯ ತೃತೀಯ ಯಾವಾಗ?
ಅಕ್ಷಯ ತೃತೀಯ ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬರುತ್ತದೆ. ಅದರಂತೆ ಈ ಬಾರಿಯ ಅಕ್ಷಯ ತೃತೀಯವು 2021ರ ಮೇ 14ರ ಶುಕ್ರವಾರದಂದು ಬರಲಿದೆ.
ಅಕ್ಷಯ ತೃತೀಯ ಮುಹೂರ್ತ
ಮೇ 14ರಂದು ಬೆಳಗ್ಗೆ 5.38ರಿಂದ ಪ್ರಾರಂಭವಾಗಿ 2021ರ ಮೇ 15ರಂದು 7:59ಕ್ಕೆ ಅಕ್ಷಯ ತೃತೀಯ ಕೊನೆಗೊಳ್ಳಲಿದೆ. ಅಕ್ಷಯ ತೃತೀಯ ಪೂಜಾ ಮುಹೂರ್ತ ಬೆಳಗ್ಗೆ 05:38ರಿಂದ 12:18ರವರೆಗೆ ಇರಲಿದೆ.
ಅಕ್ಷಯ ತೃತೀಯ ದಿನದಂದು ಚಿನ್ನ ಏಕೆ ಖರೀದಿಸುತ್ತಾರೆ?
ಈ ದಿನವನ್ನು ತ್ರೇತಾಯುಗ ಮಾತ್ರವಲ್ಲದೇ ಸತ್ಯ ಯುಗ, ದ್ವಾಪರ ಯುಗ ಹಾಗೂ ಕಲಿಯುಗದಲ್ಲೂ ಈ ದಿನವನ್ನು ವಿಶೇಷವಾಗಿ ಗುರುತಿಸಲಾಗಿದೆ. ಹಾಗಾಗಿ ಯಾವುದೇ ಒಂದು ಕೆಲಸವನ್ನು ಈ ದಿನದಲ್ಲಿ ಆರಂಭಿಸಿದರೆ ಖಂಡಿತವಾಗಿಯೂ ದೈವ ಕೃಪೆಯಿಂದ ಅದು ಯಶಸ್ಸಾಗಬಹುದು ಎಂಬ ನಂಬಿಕೆಯಿದೆ. ಅದರಲ್ಲೂ ಈ ದಿನದಂದು ಚಿನ್ನ ಖರೀದಿಸಿದರೆ ವರ್ಷ ಪೂರ ನಿಮ್ಮ ಆದೃಷ್ಟ ಖುಲಾಯಿಸಿ ಚಿನ್ನವನ್ನು ಮತ್ತೆ ಮತ್ತೆ ಖರೀದಿ ಮಾಡಬಹುದು ಎಂದು ನಂಬಲಾಗಿದೆ. ಅಂದರೆ ಲಕ್ಷ್ಮಿ ಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ ಎಂದರ್ಥ.
ಅಕ್ಷಯ ತೃತೀಯ
ಅಕ್ಷಯ ತೃತೀಯಕ್ಕೂ, ಚಿನ್ನ ಖರೀದಿಗೂ ಏನು ಸಂಬಂಧ ಎನ್ನುವ ಕುರಿತು ಸಾಕಷ್ಟು ಜನರಿಗೆ ಕುತೂಹಲ ಮೂಡಿಸುತ್ತದೆ. ಹಿಂದೂ ಪುರಾಣದ ಪ್ರಕಾರ ಅಕ್ಷಯ ತೃತೀಯದಂದು ಮನುಜ ಕುಲವನ್ನು ಮೋಹಕ್ಕೊಳಪಡಿಸುವ ಬಂಗಾರ ಎಂಬ ಅಮೂಲ್ಯ ಲೋಹ ಭೂಮಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತಂತೆ. ಅಕ್ಷಯ ತೃತೀಯ ಭೂಮಿಗೆ ಬಂಗಾರ ತಂದ ದಿನ ಮಾತ್ರವಲ್ಲ, ಬಂಗಾರಕ್ಕಿಂತ ಮಿಗಿಲಾದ ಮಹಾಪುರುಷರನ್ನು ಭೂಮಿಗಿತ್ತ ದಿನವೂ ಆಗಿದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications