For Quick Alerts
ALLOW NOTIFICATIONS  
For Daily Alerts

24 ಗಂಟೆಗಳಲ್ಲಿ 2 ಲಕ್ಷ 74,819 ಕೋಟಿ ವಹಿವಾಟು ನಡೆಸಿದ ಅಲಿಬಾಬಾ

|

ಜಾಗತಿಕ ಶಾಪಿಂಗ್ ಫೆಸ್ಟಿವಲ್‌ ನಲ್ಲಿ ಅಲಿಬಾಬಾ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿದೆ. ಸೋಮವಾರ (ನವೆಂಬರ್ 11) ಡಬಲ್ 11 ಶಾಪಿಂಗ್ ಫೆಸ್ಟಿವಲ್ ನಲ್ಲಿ ಅಲಿಬಾಬಾ ಸಂಸ್ಥೆಯು 24 ಗಂಟೆಗಳಲ್ಲಿ 2 ಲಕ್ಷ 74,819 ಕೋಟಿ ರುಪಾಯಿ ವಹಿವಾಟು ನಡೆಸಿದ್ದು, ಹೊಸ ದಾಖಲೆ ಮಾಡಿದೆ.

 

ಚೀನಾದ ಬಹುದೊಡ್ಡ ಇ-ಕಾಮರ್ಸ್ ಸಂಸ್ಥೆ ಅಲಿಬಾಬಾ, ಪ್ರತಿವರ್ಷ ನವೆಂಬರ್ 11ರಂದು 11.11 ಗ್ಲೋಬಲ್ ಶಾಪಿಂಗ್ ಫೆಸ್ಟಿವಲ್ ನಡೆಸುತ್ತದೆ. ಈ ವರ್ಷ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ 1 ಗಂಟೆಯಲ್ಲಿ ದಾಖಲೆಯ ವಹಿವಾಟು ನಡೆಸುವುದರ ಮೂಲಕ ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

 
24 ಗಂಟೆಗಳಲ್ಲಿ 2 ಲಕ್ಷ 74,819  ಕೋಟಿ ವಹಿವಾಟು ನಡೆಸಿದ ಅಲಿಬಾಬಾ

ಮೊದಲ 1 ನಿಮಿಷ 8 ಸೆಕೆಂಡ್‌ಗಳಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ 7,147 ಕೋಟಿ 75 ಲಕ್ಷ) ವಹಿವಾಟು ನಡೆಸಿತು. ಹಾಗೆಯೇ ಮೊದಲ ಒಂದು ಗಂಟೆಯಲ್ಲಿ 12 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 85,773 ಕೋಟಿ) ಮೊತ್ತದ ಸರಕುಗಳು ಮಾರಾಟಗೊಂಡವು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಹೀಗೊಂದು ಆಸೆವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಹೀಗೊಂದು ಆಸೆ

ಡಬಲ್ 11 ಅಥವಾ ಸಿಂಗಲ್ಸ್ ಡೇ ಎಂದು ಕರೆಯಲಾಗುವ ಈ ಶಾಪಿಂಗ್ ಫೆಸ್ಟಿವಲ್‌ಗೆ , 2016ರ 11.11 ಶಾಪಿಂಗ್ ಫೆಸ್ಟಿವಲ್‌ ಒಟ್ಟು ಮಾರಾಟ ಮೌಲ್ಯವನ್ನ ಮೀರಿದೆ. ಈ ಶಾಪಿಂಗ್ ಫೆಸ್ಟಿವಲ್ 2009ರಲ್ಲಿ ಮೊದಲು ಆರಂಭವಾಯಿತು. ಆ ವೇಳೆ 27 ಬ್ರ್ಯಾಂಡ್ ಗಳಷ್ಟೇ ಭಾಗವಹಿಸಿದ್ದವು. ಇದೀಗ ಈ ಶಾಪಿಂಗ್ ಫೆಸ್ಟಿವಲ್‌ ನಲ್ಲಿ 2 ಲಕ್ಷ ಬ್ರ್ಯಾಂಡ್ ಗಳು ಸೇರಿಕೊಂಡಿವೆ. ಅಲ್ಲದೆ 2009ರಲ್ಲಿ ನಡೆದಿದ್ದ ಖರೀದಿಗಿಂತಲೂ ಸಾವಿರ ಪಟ್ಟು ಹೆಚ್ಚು ವಹಿವಾಟು ನಡೆದಿದೆ.

English summary

Alibaba Singles Day Generated 38.4 Billion Us Dollar In 24 Hours

Alibaba group generated 38.4 billion Us Dollar in the global shopping festival in just 24 hours
Story first published: Tuesday, November 12, 2019, 11:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X