For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ಗರಿಷ್ಠ GST 1.15 ಲಕ್ಷ ಕೋಟಿ ರು. ಡಿಸೆಂಬರ್ ನಲ್ಲಿ ಸಂಗ್ರಹ

|

2020ರ ಡಿಸೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹ ದಾಖಲೆಯ 1.15 ಲಕ್ಷ ಕೋಟಿ ರುಪಾಯಿ ಆಗಿದೆ. 2017ನೇ ಇಸವಿಯಲ್ಲಿ ಜಿಎಸ್ ಟಿ ಜಾರಿಯಾದ ದಿನದಿಂದ ಇಲ್ಲಿತ ತನಕ ಸಂಗ್ರಹವಾದ ಅತಿ ದೊಡ್ಡ ಮೊತ್ತ ಇದು. ಆರ್ಥಿಕತೆ ಚೇತರಿಕೆ ಮತ್ತು ತೆರಿಗೆ ತಪ್ಪಿಸುವುದರ ವಿರುದ್ಧದ ನಿರಂತರ ಕ್ರಮದ ಫಲವಾಗಿ ಇಂಥ ಫಲಿತಾಂಶ ಬಂದಿದೆ ಎನ್ನಲಾಗಿದೆ.

ನವೆಂಬರ್ ನಲ್ಲಿ ನಡೆದ ವಹಿವಾಟಿಗೆ ಡಿಸೆಂಬರ್ ನಲ್ಲಿ ಸ್ವೀಕೃತವಾದದ್ದು ಕೇಂದ್ರ ಜಿಎಸ್ ಟಿ 21,365 ಕೋಟಿ ರುಪಾಯಿ, ರಾಜ್ಯ ಜಿಎಸ್ ಟಿ 27,804 ಕೋಟಿ ರುಪಾಯಿ, ಅಂತರರಾಜ್ಯ ಪೂರೈಕೆಗೆ ಇಂಟಿಗ್ರೇಟೆಡ್ ಜಿಎಸ್ ಟಿ 57426 ಕೋಟಿ ರು. ಮತ್ತು 8579 ಕೋಟಿ ರುಪಾಯಿ ಸೆಸ್ ಸಂಗ್ರಹ ಆಗಿದೆ ಎಂದು ಹಣಕಾಸು ಸಚಿವಾಲಯದಿಂದ ತಿಳಿಸಲಾಗಿದೆ

ಡಿಸೆಂಬರ್ ತಿಂಗಳ ಸಂಗ್ರಹವು ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದಕ್ಕಿಂತ 12% ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಜಿಎಸ್ ಟಿ ಸಂಗ್ರಹ 1.15 ಲಕ್ಷ ಕೋಟಿ ಆಗಿ, ದಾಖಲೆ ಬರೆದಿದೆ. ಈ ಹಿಂದಿನ ಅತಿ ಹೆಚ್ಚಿನ ಮೊತ್ತ 1.14 ಲಕ್ಷ ಕೋಟಿ ರುಪಾಯಿ 2019ರ ಏಪ್ರಿಲ್ ನಲ್ಲಿ ಆಗಿತ್ತು.

ಡಿಸೆಂಬರ್ ನಲ್ಲಿ ದಾಖಲೆಯ GST 1.15 ಲಕ್ಷ ಕೋಟಿ ರು. ಸಂಗ್ರಹ

ಇನ್ನು ಆದಾಯ ಸಂಗ್ರಹದಲ್ಲಿ ರಾಜ್ಯಗಳ ಸ್ಥಿತಿಗತಿ ವಿಚಾರಕ್ಕೆ ಬಂದರೆ, ಕಳೆದ ವರ್ಷಕ್ಕಿಂತ ಈ ವರ್ಷ ಮಹಾರಾಷ್ಟ್ರದಲ್ಲಿ 7%, ತಮಿಳುನಾಡು, ಕರ್ನಾಟಕ ಮತ್ತು ಉತ್ತರಪ್ರದೇಶ 8%, ಗುಜರಾತ್ 13% ಏರಿಕೆ ದಾಖಲಾಗಿದೆ.

English summary

All Time High GST Rs 1.15 Trillion Collected In December 2020

GST collection of Rs 1.15 trillion in December 2020, which is all time high after GST roll out in 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X