For Quick Alerts
ALLOW NOTIFICATIONS  
For Daily Alerts

ಎಲ್ಲ ಬಗೆಯ ಈರುಳ್ಳಿ ರಫ್ತು ತಕ್ಷಣ ನಿಷೇಧ; ಆದರೆ ಹೀಗೆ ಮಾಡಿದ್ದಲ್ಲಿ ತಡೆಯಿಲ್ಲ

|

ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಸೋಮವಾರದಿಂದ ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದೆ. ಆದರೆ ಕತ್ತರಿಸಿದ, ಹೆಚ್ಚಿದ, ತುಂಡಾದ ಹಾಗೂ ಪುಡಿಯ ರೂಪದಲ್ಲಿ ಇರುವ ಈರುಳ್ಳಿ ರಫ್ತಿಗೆ ಸರ್ಕಾರದ ಈ ನಿಷೇಧ ಅನ್ವಯ ಆಗಲ್ಲ. ದೇಶೀಯವಾಗಿ ಈರುಳ್ಳಿ ಪೂರೈಕೆ ಹೆಚ್ಚಾಗಬೇಕು ಹಾಗೂ ಇತ್ತೀಚೆಗೆ ದೆಹಲಿಯಲ್ಲಿ ಕೇಜಿಗೆ 35- 40 ರುಪಾಯಿ ತಲುಪಿರುವ ಈರುಳ್ಳಿ ಬೆಲೆಯಲ್ಲಿ ಇಳಿಕೆ ಆಗಲಿ ಎಂದು ಹೀಗೆ ಮಾಡಲಾಗಿದೆ.

ಇರಾನ್‌ಗೆ ಭಾರತದ ಬಾಸ್ಮತಿ ಅಕ್ಕಿ ರಫ್ತಿಗೆ ತಡೆ, ಬೆಳೆಗಾರರಿಗೆ ನಷ್ಟ

ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. "ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಲಾಗಿದೆ" ಎಂದು ಡೆರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಮೂಲಕ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಎಲ್ಲ ಬಗೆಯ ಈರುಳ್ಳಿ ರಫ್ತು ತಕ್ಷಣ ನಿಷೇಧ; ಆದರೆ ಇವುಗಳಿಗೆ ತಡೆಯಿಲ್ಲ

 

ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಅಡಿಯಲ್ಲೇ ಕಾರ್ಯ ನಿರ್ವಹಿಸುವ ಒಂದು ಅಂಗ DGFT. ಆಮದು ಹಾಗೂ ರಫ್ತಿಗೆ ಸಂಬಂಧಿಸಿದ ವಿಚಾರಗಳನ್ನು ಇದು ನೋಡಿಕೊಳ್ಳುತ್ತದೆ. ಸರ್ಕಾರದ ಈ ನಿಷೇಧವು ಬೆಂಗಳೂರು ಈರುಳ್ಳಿ ಹಾಗೂ ಕೃಷ್ಣಪುರಂ ಈರುಳ್ಳಿಗೂ ಅನ್ವಯ ಆಗುತ್ತದೆ.

English summary

All Variety Onion Export Ban By Government With Immediate Effect

All variety of onions with few exception export ban by commerce ministry with immediate effect on Monday.
Company Search
COVID-19