For Quick Alerts
ALLOW NOTIFICATIONS  
For Daily Alerts

ವಿಶ್ವದ ನಂಬರ್ ಒನ್ ಶ್ರೀಮಂತನ ಮೇಲೆ ತೆರಿಗೆ ವಿಧಿಸಲು ಹೆಚ್ಚಿದ ಪ್ರತಿಭಟನೆ

|

ವಿಶ್ವದ ನಂಬರ್ ಒನ್ ಶ್ರೀಮಂತ ಹಾಗೂ ಇ ಕಾಮರ್ಸ್ ಕಂಪೆನಿ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ವಿರುದ್ಧ ಆ ಕಂಪೆನಿಯ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲ, ಸಿಬ್ಬಂದಿಗೆ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಫ್ ಬೆಜೋಸ್ ನನ್ನು ಸರ್ವಾಧಿಕಾರಿಗೆ ಹೋಲಿಸುತ್ತಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ದಾಖಲೆ; ಆಸ್ತಿ 13 ಲಕ್ಷ ಕೋಟಿವಿಶ್ವದ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ದಾಖಲೆ; ಆಸ್ತಿ 13 ಲಕ್ಷ ಕೋಟಿ

ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ಜೆಫ್ ಬೆಜೋಸ್ ನೂರಾರು ಕೋಟಿ ಡಾಲರ್ ಗಳಿಸುತ್ತಿದ್ದಾರೆ. ಆದರೆ ಅಮೆಜಾನ್ ಒಳಗಿನ ಕೆಲಸ ಮಾಡುವ ವಾತಾವರಣ ಬಹಳ ಕೆಟ್ಟದಾಗಿದೆ ಎಂದು ಸಿಬ್ಬಂದಿ ದೂರುತ್ತಿದ್ದಾರೆ. ಗೋದಾಮಿನಲ್ಲಿ ಸುರಕ್ಷಿತ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನ್ಯಾಯಯುತವಾದ ವೇತನ ಪಾವತಿಸಲ್ಲ ಎಂದು ದೂರಲಾಗಿದೆ.

ಧ್ವನಿ ಎತ್ತುವ ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿ ಆಕ್ರೋಶ

ಧ್ವನಿ ಎತ್ತುವ ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿ ಆಕ್ರೋಶ

ಅಮೆಜಾನ್ ಕಂಪೆನಿಯ ನಿರ್ಲಕ್ಷ್ಯವನ್ನು ಪ್ರಶ್ನಿಸುವ ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿ ಮುರಕೊಂಡು ಬಿದ್ದಿದೆ. ನ್ಯೂಯಾರ್ಕ್ ನಲ್ಲಿ ಇರುವ ಜೆಫ್ ಬೆಜೋಸ್ ನಿವಾಸದ ಬಳಿ ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಾ ಈಗ ಎರಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಇನ್ನು ಇತ್ತೀಚಿನ ಪ್ರತಿಭಟನೆಯ ನೇತೃತ್ವವನ್ನು ಅಮೆಜಾನ್ ನಿಂದ ಹೊರ ಹಾಕಿದ ನೌಕರ ಕ್ರಿಶ್ಚಿಯನ್ ಸ್ಮಾಲ್ ವಹಿಸಿದ್ದಾರೆ.

ಜೆಫ್ ಬೆಜೋಸ್ ನಿವಾಸದ ಬಳಿ ಪ್ರತಿಭಟನೆ

ಜೆಫ್ ಬೆಜೋಸ್ ನಿವಾಸದ ಬಳಿ ಪ್ರತಿಭಟನೆ

ಕಾರ್ಮಿಕರ ಒಕ್ಕೂಟ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವ ಟಾಪ್ 3% ಶ್ರೀಮಂತರಿಗೆ ಸಂಪತ್ತು ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ. ಇಡೀ ವಿಶ್ವದಲ್ಲಿ ಕೊರೊನಾ ಬಿಕ್ಕಟ್ಟು ಇದ್ದರೂ ನ್ಯೂಯಾರ್ಕ್ ನಲ್ಲಿ ಇರುವ ಜೆಫ್ ಬೆಜೋಸ್ ನಿವಾಸದ ಬಳಿ ಪ್ರತಿಭಟನೆ ನಡೆಯುತ್ತಲೇ ಇದೆ.

ಸರಿಯಾದ ಸಂಬಳ ನೀಡುತ್ತಿಲ್ಲ ಎಂಬ ಆರೋಪ

ಸರಿಯಾದ ಸಂಬಳ ನೀಡುತ್ತಿಲ್ಲ ಎಂಬ ಆರೋಪ

ಕೊರೊನಾ ವೈರಸ್ ನಿಂದ ಸುರಕ್ಷಿತವಾಗಿ ಕೆಲಸ ಮಾಡುವುದಕ್ಕೆ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್ ನೀಡಿಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಅಮೆಜಾನ್ ವಿರುದ್ಧ ಸಿಬ್ಬಂದಿ ಮಾಡಿದ್ದಾರೆ. ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ, ತಲುಪಲು ಸಾಧ್ಯವೇ ಆಗದಂಥ ಗುರಿಗಳನ್ನು ನೀಡಲಾಗಿದೆ ಹಾಗೂ ಸರಿಯಾದ ಸಂಬಳ ನೀಡುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜನರಿಗೆ ಆರೋಗ್ಯ ಸೇವೆ ಒದಗಿಸಲು ಶ್ರೀಮಂತರಿಗೆ ತೆರಿಗೆ

ಅಂದ ಹಾಗೆ, ಜೆಫ್ ಬೆಜೋಸ್ ಮೇಲೆ ತೆರಿಗೆ ಹಾಕಬೇಕು ಎಂದು ಕೇಳುತ್ತಿರುವುದು ಅಮೆಜಾನ್ ಸಿಬ್ಬಂದಿ ಮಾತ್ರವಲ್ಲ. ಯು.ಎಸ್. ಸೆನೆಟರ್ ಬರ್ನಿ ಸ್ಯಾಂಡರ್ಸ್ ಟ್ವೀಟ್ ಮಾಡಿ, ಜೆಫ್ ಬೆಜೋಸ್, ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಸೇರಿದಂತೆ ಇತರ ಶತಕೋಟ್ಯಧಿಪತಿಗಳಿಗೆ ತೆರಿಗೆ ಹಾಕುತ್ತೇವೆ. ಕೊರೊನಾದಿಂದ ಎದುರಾಗಿರುವ ಸಂಕಷ್ಟದ ಕಾರಣಕ್ಕೆ ತೆರಿಗೆ ಹಾಕಿ, ಆ ಹಣದಿಂದ ನಮ್ಮ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತೇವೆ ಎಂದಿದ್ದಾರೆ.

English summary

Tax Jeff Bezos: Amazon employees mad at Jeff Bezos for minting money

Amazon employees urged American government to tax on Jeff Bezos and increased their protest.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X