For Quick Alerts
ALLOW NOTIFICATIONS  
For Daily Alerts

ಹಸಿದವರಿಗೆ ಊಟ ಒದಗಿಸಲು 764 ಕೋಟಿ ರುಪಾಯಿ ದೇಣಿಗೆ ನೀಡಿದ ಜೆಫ್ ಬೇಜೋಸ್

|

ವಿಶ್ವದಲ್ಲಿ ಸದ್ಯ ಅತಿ ಹೆಚ್ಚು ಕೊರೊನಾವೈರಸ್ ಸೋಂಕಿಗೆ ತುತ್ತಾಗಿರುವ ರಾಷ್ಟ್ರ ಅಮೆರಿಕಾ. ವಿಶ್ವದ ದೊಡ್ಡಣ್ಣನ ಸ್ಥಿತಿ ಚಿಂತಾಜನಕವಾಗಿದ್ದು, ಲಕ್ಷಾಂತರ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹಣವೂ ಇಲ್ಲದೆ ಊಟಕ್ಕೆ ಪರಡಾಡುವ ಪರಿಸ್ಥಿತಿಯು ಎದುರಾಗಿದೆ.

ಅಮೆರಿಕಾ ನಿರುದ್ಯೋಗಿಗಳಿಗೆ ನೆರವಾಗಿರುವ ಇ ಕಾಮರ್ಸ್ ದಿಗ್ಗಜ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅಮೆರಿಕಾ ಆಹಾರ ಬ್ಯಾಂಕ್‌ಗಳಿಗೆ 100 ಮಿಲಿಯನ್ ಡಾಲರ್( ಭಾರತದ ರುಪಾಯಿಗಳಲ್ಲಿ ಸುಮಾರು 764 ಕೋಟಿ) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿರುವ ಬೇಜೋಸ್ ' ದೇಶದ ಆಹಾರ ಬ್ಯಾಂಕುಗಳ ಮೇಲೆ ಆಹಾರಕ್ಕಾಗಿ ಅವಲಂಭಿಸಿರುವವರಿಗೆ ಊಟ ಒದಗಿಸಲು 100 ಮಿಲಿಯನ್ ಡಾಲರ್ ಫೀಡಿಂಗ್ ಅಮೆರಿಕಾಗೆ(ಆಹಾರ ಬ್ಯಾಂಕ್) ನೀಡುವುದಾಗಿ' ತಿಳಿಸಿದ್ದಾರೆ.

ಹಸಿದವರಿಗೆ ಊಟ ಒದಗಿಸಲು 764 ಕೋಟಿ ದೇಣಿಗೆ ನೀಡಿದ ಜೆಫ್ ಬೇಜೋಸ್

"ಫೀಡಿಂಗ್ ಅಮೆರಿಕಾ ಹಣವನ್ನು ತಮ್ಮ ರಾಷ್ಟ್ರೀಯ ಆಹಾರ ಬ್ಯಾಂಕುಗಳು ಮತ್ತು ಆಹಾರ ಪ್ಯಾಂಟ್ರಿಗಳಿಗೆ ತ್ವರಿತವಾಗಿ ವಿತರಿಸುತ್ತದೆ. ಇದರಿಂದ ಅಗತ್ಯವಿರುವ ಅಸಂಖ್ಯಾತ ಕುಟುಂಬಗಳು ಆಹಾರವನ್ನು ಪಡೆಯುತ್ತದೆ" ಎಂದು ಬೇಜೋಸ್ ಶುಕ್ರವಾರ ತಡರಾತ್ರಿ ಹೇಳಿದ್ದಾರೆ.

''ಅನೇಕ ರೆಸ್ಟೋರೆಂಟ್‌ಗಳು ಹೆಚ್ಚುವರಿ ಆಹಾರವನ್ನು ದಾನ ಮಾಡುತ್ತವೆ. ಆದರೆ ಸದ್ಯ ಲಾಕ್‌ಡೌನ್‌ನ ಈ ಸಮಯದಲ್ಲಿ, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ ಮತ್ತು ಹೆಚ್ಚುವರಿ ಆಹಾರದ ಪೂರೈಸುವ ವ್ಯವಸ್ಥೆಯು ಸ್ಥಗಿತಗೊಂಡಿವೆ. ಹೀಗಾಗಿ ಪೂರೈಕೆ ಕ್ಷೀಣಿಸುತ್ತಿರುವುದರಿಂದ, ಆಹಾರ ಬ್ಯಾಂಕ್ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ" ಎಂದು ಬೆಜೋಸ್ ಹೇಳಿದರು.

 1200 ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಜೆಫ್ ಬೇಜೋಸ್ 1200 ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಜೆಫ್ ಬೇಜೋಸ್

ಅಮೆರಿಕಾದಲ್ಲಿ ಕೊರೊನಾವೈರಸ್‌ನಿಂದಾಗಿ ಸುಮಾರು 6 ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎನ್ನಲಾಗಿದೆ. ಈ ಕಷ್ಟದ ಸಮಯದಲ್ಲಿ ಲಕ್ಷಾಂತರ ಅಮೆರಿಕನ್ನರು ಆಹಾರ ಬ್ಯಾಂಕುಗಳತ್ತ ಮುಖ ಮಾಡುತ್ತಿದ್ದಾರೆ.

ಜೆಫ್ ಬೇಜೋಸ್ ನೀಡಿರುವ 764 ಕೋಟಿ ದೇಣಿಗೆ ಕುರಿತು ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಬೆಜೋಸ್‌ನ ಸುಮಾರು 120 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಮತ್ತು ಆಸ್ತಿಗಳಲ್ಲಿನ .08 ಪರ್ಸೆಂಟ್‌ರಷ್ಟು ಮಾತ್ರ ಇದೆ.

English summary

Amazon Founder Jeff Bezos Donates 100 Million Dollar To Feed People

Amazon Founder and CEO Jeff Bezoshas announced to donate $100 million to US food banks to help them feed a growing number of out-of-job Americans
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X