For Quick Alerts
ALLOW NOTIFICATIONS  
For Daily Alerts

FY20ರಲ್ಲಿ ಅಮೆಜಾನ್ ಆದಾಯ 42% ಏರಿಕೆ, ನಷ್ಟದಲ್ಲಿ 3 ಪರ್ಸೆಂಟ್ ಹೆಚ್ಚಳ

By ಅನಿಲ್ ಆಚಾರ್
|

ಜೆಫ್ ಬೆಜೋಸ್ ರ ಭಾರತದಲ್ಲಿನ ಮಾರ್ಕೆಟ್ ಪ್ಲೇಸ್ ಅಂಗವಾದ ಅಮೆಜಾನ್ ಸೆಲ್ಲರ್ ಸರ್ವೀಸಸ್ ವ್ಯವಹಾರವು 2019- 20ನೇ ಸಾಲಿನ ಹಣಕಾಸು ವರ್ಷದಲ್ಲಿ 42 ಪರ್ಸೆಂಟ್ ಏರಿಕೆ ಆಗಿದೆ. ಮತ್ತು ನಷ್ಟದಲ್ಲಿ 3 ಪರ್ಸೆಂಟ್ ಹೆಚ್ಚಳವಾಗಿದೆ. ಅದರ ಹಿಂದಿನ ಆರ್ಥಿಕ ವರ್ಷ 2018- 19ಕ್ಕೆ ಹೋಲಿಸಿದರೆ ಆದಾಯದಲ್ಲಿ ಹೆಚ್ಚಳವಾಗಿದ್ದರೂ ನಷ್ಟದ ಪ್ರಮಾಣ ಕೂಡ ಜಾಸ್ತಿ ಆಗಿದೆ.

ಅಮೆಜಾನ್ ಆದಾಯವು ಪ್ರಾಥಮಿಕವಾಗಿ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ಜತೆಗೆ ಸ್ಪರ್ಧೆ ನಡೆಸುವಂಥದ್ದು. ಇದರ ಹೊರತಾಗಿಯೂ ಅಮೆಜಾನ್ ಗೆ ಪ್ರತಿಸ್ಪರ್ಧಿಗಳಾಗಿ ಪೇಟಿಎಂ ಮಾಲ್, ಸ್ನ್ಯಾಪ್ ಡೀಲ್, ಬಿಗ್ ಬ್ಯಾಸ್ಕೆಟ್, ಗ್ರೋಫರ್ಸ್, ಜಿಯೋಮಾರ್ಟ್ ಮತ್ತು Myntra ಇದೆ.

ಅಮೆಜಾನ್ ಇಂಡಿಯಾ ಮೂಲಕ 1 ಕೋಟಿ ರು.ಗೂ ಹೆಚ್ಚು ಬಿಜಿನೆಸ್ ಮಾಡಿದವರು 4152 ಮಂದಿಅಮೆಜಾನ್ ಇಂಡಿಯಾ ಮೂಲಕ 1 ಕೋಟಿ ರು.ಗೂ ಹೆಚ್ಚು ಬಿಜಿನೆಸ್ ಮಾಡಿದವರು 4152 ಮಂದಿ

ಅಮೆಜಾನ್ ಗೆ 11,028 ಕೋಟಿ ರುಪಾಯಿ ಆದಾಯ ಬಂದಿದೆ. FY19ರಲ್ಲಿ 7,777 ಕೋಟಿ ರು. ಬಂದಿತ್ತು. FY19ರಲ್ಲಿ ನಿವ್ವಳ ನಷ್ಟ 5685 ಕೋಟಿ ರುಪಾಯಿ ಆಗಿತ್ತು. FY20ರಲ್ಲಿ ಇದು 5849 ಕೋಟಿ ರುಪಾಯಿಗೆ ಹೆಚ್ಚಾಗಿದೆ. ಇನ್ನು ಕಂಪೆನಿಯ ವೆಚ್ಚ 25% ಜಾಸ್ತಿಯಾಗಿ, 13,463 ಕೋಟಿ ರುಪಾಯಿ ಇದ್ದ ವೆಚ್ಚ 16877 ಕೋಟಿಗೆ ಏರಿದೆ. ಈ ಅವಧಿಯಲ್ಲಿ ಬಹುಪಾಲು ಭಾಗ "ಇತರ ವೆಚ್ಚಗಳು" ಎಂಬುದರ ಅಡಿಯಲ್ಲಿ 78%ನಷ್ಟು, ಅಂದರೆ 13,296 ಕೋಟಿ ರು. ಇದೆ.

FY20ರಲ್ಲಿ ಅಮೆಜಾನ್ ಆದಾಯ 42% ಏರಿಕೆ, ನಷ್ಟದಲ್ಲಿ 3% ಹೆಚ್ಚಳ

ಇತರ ವೆಚ್ಚಗಳಲ್ಲಿ ಕಂಪೆನಿಯಿಂದ FY20ರಲ್ಲಿ 2640 ಕೋಟಿ ರುಪಾಯಿ ಜಾಹೀರಾತು ಮತ್ತು ಮಾರಾಟ ಪ್ರಚಾರಕ್ಕೆ ಖರ್ಚು ಮಾಡಲಾಗಿದೆ. FY19ರಲ್ಲಿ 2330 ಕೋಟಿ ರು. ಖರ್ಚಾಗಿತ್ತು. ಡೆಲಿವರಿ ಶುಲ್ಕ ಎಂದು ಆಗಿರುವ ವೆಚ್ಚ FY19ರಲ್ಲಿ 3662 ಕೋಟಿ ರುಪಾಯಿ ಇದ್ದದ್ದು FY20ರಲ್ಲಿ 4603 ಕೋಟಿ ರು. ಆಗಿದೆ.

ಇತರ ಮುಖ್ಯ ವೆಚ್ಚವಾಗಿ 1219 ಕೋಟಿ ರುಪಾಯಿ ಪ್ರೊಸೆಸರ್ ಶುಲ್ಕ ಮತ್ತು 1117 ಕೋಟಿ ರುಪಾಯಿ ಸರಕು ಹಾನಿಗೆ ಕಟ್ಟಿಕೊಟ್ಟಿರುವ ಮೊತ್ತವಾಗಿದೆ.

English summary

Amazon India's Market Place Revenue Increased By 42 Percent, Loss Surge Marginally

Amazon India's market place revenue increased by 42%, loss surge 3% in FY20.
Story first published: Thursday, December 24, 2020, 20:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X