ವಿಶ್ವದ ಅತೀ ದೊಡ್ಡ ಆನ್‌ಲೈನ್ ರಿಟೇಲರ್ ಸಂಸ್ಥೆಯಾದ ಅಮೆಜಾನ್ ತನ್ನ ಫುಡ್ ಡೆಲವರಿ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಶುಕ್ರವಾರ ಹೇಳಿರುವುದಾಗಿ ವರದಿಯಾಗಿದೆ. ಭಾರತದಲ್ಲಿ ಫುಡ್ ಡೆಲವರಿ ಸೇವೆಯ ಪ್ರಯೋಗ ನಡೆಸಲಾಗುತ್ತಿತ್ತು. ಇದನ್ನು ಸಂಸ್ಥೆ ಸ್ಥಗಿತಗೊಳಿಸಲು ಸಿದ್ಧವಾಗಿದೆ.
ಅಮೆಜಾನ್ ಇದಕ್ಕೂ ಒಂದು ದಿನ ಮುನ್ನವಷ್ಟೆ ತನ್ನ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗಾಗಿ ಇರುವ ಆನ್‌ಲೈನ್ ಕಲಿಕಾ ಪ್ಲಾಟ್‌ಫಾರ್ಮ್ ಅನ್ನು ಸ್ಥಗಿತ ಮಾಡಲಾಗುವುದು ಎಂದು ಹೇಳಿತ್ತು. ಹಾಗಿರುವಾಗ ಈಗ ಫುಡ್ ಡೆಲವರಿ ಸೇವೆಯನ್ನು ಕೂಡಾ ಸ್ಥಗಿತಗೊಳಿಸುವ ಘೋಷಣೆ ಆಶ್ಚರ್ಯವೂ ಹೌದು.
ಬೆಂಗಳೂರಿನಲ್ಲಿ ಅಮೆಜಾನ್ ಫುಡ್ ಡೆಲವರಿ ಸೇವೆಯ ಪ್ರಯೋಗ ಮಾಡುತ್ತಿತ್ತು. ಆದರೆ ಈಗ ಸ್ಥಗಿತ ಮಾಡಲಾಗುತ್ತಿದೆ. ಆದರೆ ಹೆಚ್ಚು ಲಾಭ ಲಭ್ಯವಾಗದ ಕಾರಣದಿಂದಾಗಿ ಈ ಸೇವೆಯನ್ನು ಕೊನೆ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಕೂಡಾ ಇದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ವಕ್ತಾರರು, "ವಾರ್ಷಿಕ ಯೋಜನೆಯ ಪರಿಷ್ಕರಣೆಯ ಭಾಗವಾಗ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಾವು ಅಮೆಜಾನ್ ಫುಡ್ ಡೆಲವರಿಯನ್ನು ಇನ್ನು ಮುಂದೆ ಮಾಡುವುದಿಲ್ಲ," ಎಂದು ತಿಳಿಸಿದ್ದಾರೆ.
"ನಾವು ಈ ನಿರ್ಧಾರವನ್ನು ಸರಳವಾಗಿ ಪರಿಗಣಿಸುವುದಿಲ್ಲ. ನಾವು ಹಂತ ಹಂತವಾಗಿ ಈ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಪ್ರಸ್ತುತ ಗ್ರಾಹಕರು ಹಾಗೂ ಪಾಲುದಾರರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹಂತ ಹಂತವಾಗಿ ಈ ಸೇವೆಯನ್ನು ಕೊನೆ ಮಾಡುತ್ತೇವೆ," ಎಂದು ಹೇಳಿದ್ದಾರೆ.
ಈ ಹಿಂದೆ ಇಕಾನಮಿಕ್ ಟೈಮ್ಸ್ ಅಮೆಜಾನ್ ತನ್ನ ಫುಡ್ ಡೆಲವರಿ ಸೇವೆಯನ್ನು ಡಿಸೆಂಬರ್ 29ರಿಂದ ಕೊನೆಗೊಳಿಸುತ್ತದೆ ಎಂದು ವರದಿ ಮಾಡಿತ್ತು. ಸಂಸ್ಥೆಯು ರೆಸ್ಟೊರೆಂಟ್ ಪಾಲುದಾರರಿಗೆ ಈ ಬಗ್ಗೆ ಕಳುಹಿಸಿದ್ದ ಪತ್ರವನ್ನು ಆಧಾರಿಸಿ ವರದಿ ಮಾಡಲಾಗಿತ್ತು.
ಅಮೆಜಾನ್ ಅಕಾಡೆಮಿ ಪ್ಲಾಟ್‌ಫಾರ್ಮ್ ಅಂತ್ಯ
ಕೊರೊನಾ ಸಾಂಕ್ರಾಮಿಕ ಆರಂಭವಾಗಲಿದ್ದ ಸಂದರ್ಭದಲ್ಲಿ 2018ರ ವೇಳೆಗೆ ಆನ್‌ಲೈನ್ ಶಿಕ್ಷಣದ ಬೇಡಿಕೆ ಅಧಿಕವಾಗಿತ್ತು. ಆ ಸಂದರ್ಭದಲ್ಲಿ ಅಮೆಜಾನ್ ತನ್ನ ಆಪ್ ಅನ್ನು ಆರಂಭಿಸಿತ್ತು. ಆದರೆ ಈ ಅಮೆಜಾನ್ ಅಕಾಡೆಮಿ ಪ್ಲಾಟ್‌ಫಾರ್ಮ್ ಅನ್ನು ಸಂಸ್ಥೆಯು ಸ್ಥಗಿತಗೊಳಿಸುತ್ತಿದೆ. ಇದರಿಂದಾಗಿ ಸುಮಾರು 10,000 ಮಂದ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications