ಭಾರತದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ಹಾಗೂ ಜನರ ಬೇಡಿಕೆ ಪೂರೈಸುವ ದೃಷ್ಟಿಯಿಂದ ಸುಮಾರು 50,000 ತಾತ್ಕಾಲಿಕ ಉದ್ಯೋಗ ಸೃಷ್ಟಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ.
ಈ 50 ಸಾವಿರ ಕಾಲೋಚಿತ ಉದ್ಯೋಗಗಳು ಉಗ್ರಾಣ ಮತ್ತು ಡಿಲಿವರಿ ಜಾಲದಾದ್ಯಂತ ಇರುತ್ತದೆ. ಆರ್ಥಿಕ ಚಟುವಟಿಕೆಗಳು ಮತ್ತು ಇ-ಕಾಮರ್ಸ್ ಕಾರ್ಯಾಚರಣೆಗಳು ನಿಧಾನವಾಗಿ ಕಂಟೈನ್‌ಮೆಂಟ್ ವಲಯಗಳ ಹೊರಗೆ ಮತ್ತೆ ಸುಧಾರಿಸುತ್ತ ಹೋದಂತೆ ತನ್ನ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಅಮೆಜಾನ್ ನಡಿ ಸ್ವತಂತ್ರ ಗುತ್ತಿಗೆದಾರರಾಗಿ ಪಾರ್ಟ್ ಟೈಮ್ ಕೆಲಸ ಸೇರಿದಂತೆ ಡೆಲಿವರಿ ನೆಟ್ ವರ್ಕ್ ಹಾಗೂ ಅವರ ಅವಲಂಬಿತ ಕೇಂದ್ರಗಳಲ್ಲಿ ಇದು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ಅಮೆಜಾನ್ ಇಂಡಿಯಾ ತಿಳಿಸಿದೆ.
ಈ ಉದ್ಯೋಗಿಗಳು ಇತರ ಸಾವಿರಾರು ಸಹವರ್ತಿಗಳನ್ನು ಸೇರಲಿದ್ದು, ಸರಕುಗಳನ್ನು ಪ್ಯಾಕ್ ಮಾಡುವ, ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ದಕ್ಷತೆಯಿಂದ ಮಾಡಲಿದ್ದಾರೆ ಎಂದು ಹೇಳಿದೆ.
ಸಣ್ಣ ವ್ಯವಹಾರ ಹಾಗೂ ಆರ್ಥಿಕತೆಯಲ್ಲಿ ಅಮೆಜಾನ್ ಮತ್ತು ಇ- ಕಾಮರ್ಸ್ ಹೇಗೆ ನಮ್ಮ ಗ್ರಾಹಕರಿಗಾಗಿ ಹೇಗೆ ವ್ಯವಹಾರ ಮಾಡಬಹುದು ಎಂಬುದನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಲಿತುಕೊಂಡಿರುವುದಾಗಿ ಅಮೆಜಾನ್ ಉಪಾಧ್ಯಕ್ಷ ಅಕಿಲ್ ಸಾಕ್ಸೆನಾ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಫುಡ್ ಡಿಲಿವರಿ ಸೇವೆಯನ್ನು ಶುರುಮಾಡಿರುವ ವಿಶ್ವದ ಬೃಹತ್ ಇ-ಕಾಮರ್ಸ್ ಸಂಸ್ಥೆ, ಅಮೆಜಾನ್ ಫುಡ್ ಎಂದು ಬ್ರ್ಯಾಂಡ್ ಕ್ರಿಯೆಟ್ ಮಾಡಿದೆ. ಬೆಂಗಳೂರಿನ ಸ್ಥಳೀಯ ರೆಸ್ಟೋರೆಂಟ್ ಗಳು, ಹೋಟೆಲ್ ಗಳಿಂದ ಆಹಾರ ಖಾದ್ಯಗಳನ್ನು ಮನೆಗಳಿಗೆ ತಲುಪಿಸಲಾಗುವುದು. ಈಗಾಗಲೇ ಫುಡ್ ಡೆಲಿವರಿ ಸೇವೆಯಲ್ಲಿ ಸ್ವಿಗ್ಗಿ ಮತ್ತು ಝೊಮ್ಯಾಟೋ ಖ್ಯಾತಿ ಪಡೆದಿವೆ. ಇದರ ಜೊತೆಗೆ ಅಮೆಜಾನ್ ಪೈಪೋಟಿಗಿಳಿಯಲಿದೆ.


Click it and Unblock the Notifications