For Quick Alerts
ALLOW NOTIFICATIONS  
For Daily Alerts

1,25,000 ತಾತ್ಕಾಲಿಕ ಉದ್ಯೋಗಿಗಳಿಗೆ 'ಖಾಯಂ' ಉದ್ಯೋಗದ ಅವಕಾಶ ನೀಡಿದ ಅಮೆಜಾನ್

|

ಕೊರೊನಾವೈರಸ್ ಲಾಕ್‌ಡೌನ್ ನಡುವೆ ಲಕ್ಷಾಂತರ ಉದ್ಯೋಗ ನಷ್ಟವಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ತನ್ನ 125,000 ತಾತ್ಕಾಲಿಕ ಉದ್ಯೋಗಿಗಳಿಗೆ 'ಖಾಯಂ' ಉದ್ಯೋಗದ ಅವಕಾಶ ನೀಡಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಅಮೆಜಾನ್ ಗೆ ಗಣನೀಯ ಪ್ರಮಾಣದಲ್ಲಿ ಆನ್ ಲೈನ್ ಶಾಪಿಂಗ್ ಆರ್ಡರ್ ಗಳು ಬಂದಿದ್ದು, ಈ ಆರ್ಡರ್ ಗಳ ರವಾನೆ ಮತ್ತು ಇತರೆ ಪ್ರಕ್ರಿಯೆಗಳಿಗಾಗಿ ಸುಮಾರು 125,000 ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದುಕೊಂಡಿತ್ತು. ಆದರೆ ಈಗ ಇದೇ ಉದ್ಯೋಗಿಗಳ ಕೆಲಸವನ್ನು ಖಾಯಂ ಮಾಡುವುದಾಗಿ ಸಂಸ್ಥೆ ಘೋಷಣೆ ಮಾಡಿದೆ.

1,25,000 ತಾತ್ಕಾಲಿಕ  ಉದ್ಯೋಗಿಗಳಿಗೆ 'ಖಾಯಂ' ಅವಕಾಶ ನೀಡಿದ ಅಮೆಜಾನ್

ಮಾರ್ಚ್ ಬಳಿಕ ಅಮೆಜಾನ್ ವಹಿವಾಟು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದೇ ಕಾರಣಕ್ಕಾಗಿ ಸಂಸ್ಥೆ 75,000 ಹೊಸ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಈ ಬಗ್ಗೆ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮೆಜಾನ್ ಸಂಸ್ಥೆ, ಇತರೆ ಸಂಸ್ಥೆಗಳಂತೆಯೇ ತಮ್ಮ ಸಂಸ್ಥೆ ಕೂಡ ಅಗತ್ಯಕ್ಕೆ ಅನುಗುಣವಾಗಿ ಹೊಸ ಸಿಬ್ಬಂದಿಗಳನ್ನು ತೆಗೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ನಾವು ನಮ್ಮ 125,000 ತಾತ್ಕಾಲಿಕ ಉದ್ಯೋಗಿಗಳಿಗೆ ಪರ್ಮನೆಂಟ್ ಅವಕಾಶ ನೀಡುತ್ತಿದ್ದೇವೆ. ಇವರ ಫುಲ್ ಟೈಮ್ ಕೆಲಸ ಜೂನ್ ತಿಂಗಳಿನಿಂದ ಆರಂಭವಾಗುತ್ತದೆ ಎಂದು ಹೇಳಲಾಗಿದೆ.

ಲಾಕ್‌ಡೌನ್ ಆರಂಭವಾದ ಸಮಯದಿಂದ ಆನ್‌ಲೈನ್ ಸರ್ವೀಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಇದೀಗ ಎಲ್ಲರೂ ಆನ್‌ಲೈನ್ ಆರ್ಡರ್ ಮೊರೆ ಹೋಗುತ್ತಿದ್ದಾರೆ. ಇ ಕಾಮರ್ಸ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಅಮೆಜಾನ್, ಅಗತ್ಯ ವಸ್ತು, ದಿನಸಿ ವಸ್ತುಗಳ ಸೇವೆ ವಿಭಾಗ ನಿರಂತರವಾಗಿ ಕಾರ್ಯನಿರ್ವಹಿಸಿತ್ತು. ಜನರ ಬೇಡಿಕೆ ಹೆಚ್ಚಾದಂತೆ ಅಮೆಜಾನ್ ಕೂಡ ಹೆಚ್ಚುವರಿ ಕೆಲಸ ಮಾಡಿ ಅಗತ್ಯ ವಸ್ತುಗಳ ಪೂರೈಕೆ ಮಾಡಿತ್ತು. ಲಾಕ್‌ಡೌನ್ ಸಡಿಲಿಕೆಯಾದರೂ ಜನರು ಹೆಚ್ಚಾಗಿ ಆನ್‌ಲೈನ್ ಸರ್ವೀಸ್ ನೆಚ್ಚಿಕೊಂಡಿದ್ದಾರೆ.

ಅಮೆಜಾನ್ ತನ್ನ ಕಾರ್ಮಿಕರಿಗೆ ಗಂಟೆಗೆ ಕನಿಷ್ಟ ವೇತನ 15 ಡಾಲರ್ ನೀಡುತ್ತಿದ್ದು, ತನ್ನ ಕಾರ್ಮಿಕರನ್ನು ಸುರಕ್ಷಿತವಾಗಿರಿಸಲು ಸುಮಾರು 4 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತು.

English summary

Amazon Offers 125000 Full Time Jobs To Temporary Employees

Amazon is offering full-time jobs to 125,000 of 175,000 temporary workers it hired since March to deal with the COVID-19 rush, if employees would like to stay at Amazon long term.
Story first published: Friday, May 29, 2020, 19:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X