For Quick Alerts
ALLOW NOTIFICATIONS  
For Daily Alerts

Anant Ambani Engagement : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ, ಇಬ್ಬರ ಬಗ್ಗೆ ಮಾಹಿತಿ ಇಲ್ಲಿದೆ

|

ದೇಶದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ತನ್ನ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್‌ ಜೊತೆ ಜನವರಿ 19ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

 

ಹಲವಾರು ಸೆಲೆಬ್ರಿಟಿಗಳು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮುಕೇಶ್ ಅಂಬಾನಿಯ ಮನೆಯಾದ ಅಂಟಿಲಿಯಾದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಈ ಹಿಂದೆ ಈ ಜೋಡಿಯು ಮೆಹೆಂದಿ ಸಮಾರಂಭವನ್ನು ಮಾಡಿದ್ದರು. ಇದರಲ್ಲಿ ರಾಧಿಕಾ ಮರ್ಚೆಂಟ್ ಅಬು ಜನಿ ಸಂದೀಪ್ ಕೋಸ್ಲಾ ಡಿಸೈನ್ ಮಾಡಿದ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.

ಭರತನಾಟ್ಯ ತರಭೇತಿ ಪಡೆದಿರುವ ರಾಧಿಕಾ ಮರ್ಚೆಂಟ್ ಈ ಹಿಂದೆ ಮೆಹೆಂದಿ ವೇಳೆ ನೃತ್ಯವನ್ನು ಕೂಡಾ ಮಾಡಿದ್ದರು. ಅದಕ್ಕೂ ಮುನ್ನ ರಾಧಿಕಾ ಮರ್ಚೆಂಟ್‌ಗಾಗಿ ಅರಂಗೇತ್ರಂ ಕಾರ್ಯಕ್ರಮವನ್ನು ಮುಕೇಶ್ ಅಂಬಾನಿ ದಂಪತಿಗಳು ಆಯೋಜನೆ ಮಾಡಿದ್ದರು. ರಾಧಿಕ ಮರ್ಚೆಂಟ್ ಸುಮಾರು ಎಂಟು ವರ್ಷಗಳ ಕಾಲ ತನ್ನ ಗುರು ಭಾವನ ಠಾಕರ್ ಬಳಿ ಮುಂಬೈನ ಶ್ರೀ ನಿಭಾ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಭರತನಾಟ್ಯ ಕಲಿತಿದ್ದಾರೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ, ಇಬ್ಬರ ಬಗ್ಗೆ ಮಾಹಿತಿ

ರೋಕಾ ಕಾರ್ಯಕ್ರಮ ಮಾಡಿಕೊಂಡಿದ್ದ ಜೋಡಿ

ಕಳೆದ ತಿಂಗಳು ರೋಕಾ ಕಾರ್ಯಕ್ರಮವನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರಾಜಸ್ಥಾನದ ನತದ್ವಾರದಲ್ಲಿರುವ ಶ್ರೀನಾಥಜಿ ದೇವಾಲಯದಲ್ಲಿ ಮಾಡಿಕೊಂಡಿದ್ದರು. ಬರೀ ತಮ್ಮ ಕುಟುಂಬದವರು ಮಾತ್ರ ಸೇರಿಕೊಂಡು ಈ ಸಮಾರಂಭವನ್ನು ನಡೆಸಿದ್ದರು. ಅದಾದ ಬಳಿಕ ಅಂಟಿಲಿಯಾದಲ್ಲಿ ಮನೆಯಲ್ಲಿ ಕಾರ್ಯಕ್ರಮವನ್ನು ಮುಕೇಶ್ ಅಂಬಾನಿ ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ಶಾರುಖ್‌ ಖಾನ್, ಅಲಿಯಾ ಭಟ್, ರಣ್‌ಬೀರ್ ಕಪೂರ್, ಜಾನ್ವಿ ಕಪೂರ್ ಮೊದಲಾದವರುಗಳು ಭಾಗಿಯಾಗಿದ್ದರು.

ರಾಧಿಕ ಮೆರ್ಚೆಂಟ್ ವ್ಯಾಪಾರ ಹಾಗೂ ಕ್ಲಾಸಿಕಲ್ ಡ್ಯಾನ್ಸ್ ಎರಡರಲ್ಲೂ ಹಿಡಿತವನ್ನು ಹೊಂದಿರುವ ಬಹು ಪ್ರತಿಭೆ ಹೊಂದಿರುವ ಯುವತಿ. ಡಿಸೆಂಬರ್ 18, 1994ರಲ್ಲಿ ಮುಂಬೈನಲ್ಲಿ ಜನಿಸಿದ ರಾಧಿಕ ಮರ್ಚೆಂಟ್, ವಿರೇನ್ ಹಾಗೂ ಶೈಲಾ ಮರ್ಚೆಂಟ್‌ರ ಪುತ್ರಿಯಾಗಿದ್ದಾರೆ. ಆಕೆಯ ತಂದೆ ಭಾರತದ ಪ್ರಮುಖ ಫಾರ್ಮಾ ಕಂಪನಿಗಳಲ್ಲಿ ಒಂದಾದ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ಆಗಿದ್ದಾರೆ. ಹಾಗೆಯೇ ಭಾರತದ ಶ್ರೀಮಂತ ಬಿಲಿಯನೇರ್ ಕೂಡಾ ಆಗಿದ್ದಾರೆ.

English summary

Anant Ambani and Radhika Merchant's engagement today, Details here

Anant Ambani, Mukesh Ambani and Nita Ambani's younger son, is getting engaged to Radhika Merchant today, January 19. Details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X