For Quick Alerts
ALLOW NOTIFICATIONS  
For Daily Alerts

ಆಂಧ್ರದಲ್ಲಿ ಎಲ್ಲರಿಗೂ ಸರ್ಕಾರದಿಂದಲೇ ಮಾಸ್ಕ್; 16 ಕೋಟಿ ಮಾಸ್ಕ್ ಖರೀದಿ

|

ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ಆಂಧ್ರಪ್ರದೇಶದ ಪ್ರತಿಯೊಬ್ಬ ಪ್ರಜೆಗೂ ಮಾಸ್ಕ್ ವಿತರಿಸಲು ಅಲ್ಲಿನ ರಾಜ್ಯ ಸರ್ಕಾರ ಭಾನುವಾರ ತೀರ್ಮಾನಿಸಿದೆ. ಈ ಉದ್ದೇಶಕ್ಕಾಗಿಯೇ 16 ಕೋಟಿ ಮಾಸ್ಕ್ ಗೆ ಆರ್ಡರ್ ಮಾಡಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಕೊರೊನಾ ವೈರಾಣು ಪರಿಶೀಲನೆ ಸಭೆ ನಡೆಯಿತು.

 

ರಾಜ್ಯದಲ್ಲಿ ಮೂರನೇ ಕುಟುಂಬ ಸಮೀಕ್ಷೆ ನಂತರ 32,349 ಮಂದಿಗೆ ಕೊರೊನಾ ಪರೀಕ್ಷೆಗಾಗಿ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರದ ಹೊತ್ತಿಗೆ ಆಂಧ್ರಪ್ರದೇಶದ ಒಟ್ಟು 1.47 ಕೋಟಿ ಕುಟುಂಬಗಳ ಪೈಕಿ 1.43 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ವೇಳೆ 9107 ಮಂದಿಗೆ ಪರೀಕ್ಷೆಗೆ ಸೂಚಿಸಿದ್ದರು.

 
ಆಂಧ್ರದಲ್ಲಿ ಎಲ್ಲರಿಗೂ ಸರ್ಕಾರದಿಂದ ಮಾಸ್ಕ್; 16 ಕೋಟಿ ಮಾಸ್ಕ್ ಖರೀದಿ

ಭಾನುವಾರದ ವೇಳೆಗೆ ಆಂಧ್ರದಲ್ಲಿ 417 Covid- 19 ಪ್ರಕರಣಗಳು ವರದಿ ಆಗಿವೆ. ಆ ಪೈಕಿ ಹದಿಮೂರು ಮಂದಿ ವಿದೇಶ ಪ್ರಯಾಣ ಮಾಡಿದ ವರದಿ ಇದೆ ಮತ್ತು ಇನ್ನು ಹನ್ನೆರಡು ಮಂದಿ ಅವರ ಸಂಪರ್ಕದಲ್ಲಿ ಇದ್ದವರು. 199 ಮಂದಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾದವರು ಹಾಗೂ 161 ಮಂದಿ ಅವರ ಸಂಪರ್ಕಕ್ಕೆ ಬಂದವರು ಎಂದು ಮಾಹೊಇತಿ ನೀಡಲಾಗಿದೆ.

English summary

Andhra Pradesh Government Ordered 16 Crore Masks To Distribute

Corona effect: Andhra Pradesh government said on Sunday that, 16 crore masks ordered to distribute to people.
Story first published: Sunday, April 12, 2020, 18:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X