For Quick Alerts
ALLOW NOTIFICATIONS  
For Daily Alerts

ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್ ಗೆ ಬಡ್ಡಿ ಬಾಕಿ ಉಳಿಸಿದ ರಿಲಯನ್ಸ್ ಕ್ಯಾಪಿಟಲ್

|

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್ ನಿಂದ ಎಚ್ ಡಿಎಫ್ ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಗೆ 624 ಕೋಟಿ ರುಪಾಯಿ ಸಾಲದ ಮೇಲಿನ ಬಡ್ಡಿಯನ್ನು ಪಾವತಿ ಮಾಡಿಲ್ಲ ಎಂದು ಕಂಪೆನಿಯಿಂದ ಸ್ಟಾಕ್ ಎಕ್ಸ್ ಚೇಂಜ್ ಗೆ ನವೆಂಬರ್ 27, 2020ರಂದು ಮಾಹಿತಿಯನ್ನು ನೀಡಲಾಗಿದೆ.

ಎಚ್ ಡಿಎಫ್ ಸಿಗೆ 4.77 ಕೋಟಿ ರುಪಾಯಿ ಹಾಗೂ ಆಕ್ಸಿಸ್ ಬ್ಯಾಂಕ್ ಗೆ 0.71 ಕೋಟಿ ರುಪಾಯಿ ಬಡ್ಡಿಯನ್ನು ಅಕ್ಟೋಬರ್ 31ನೇ ತಾರೀಕಿಗೆ ಅನ್ವಯ ಆಗುವಂತೆ ಬಾಕಿ ಉಳಿಸಿಕೊಳ್ಳಲಾಗಿದೆ. ರಿಲಯನ್ಸ್ ಕ್ಯಾಪಿಟಲ್ ಕಂಪೆನಿಯು ಎಚ್ ಡಿಎಫ್ ಸಿಯಿಂದ ಆರು ತಿಂಗಳಿಂದ ಏಳು ವರ್ಷಗಳ ಅವಧಿಗೆ 10.6 ಪರ್ಸೆಂಟ್ ನಿಂದ 13 ಪರ್ಸೆಂಟ್ ದರದಲ್ಲಿ ಹಾಗೂ ಆಕ್ಸಿಸ್ ಬ್ಯಾಂಕ್ 3ರಿಂದ 7 ವರ್ಷಗಳ ಅವಧಿಗೆ 8.25 ಪರ್ಸೆಂಟ್ ದರದಲ್ಲಿ ಸಾಲ ಪಡೆದಿತ್ತು.

ಸಾಲ ವಸೂಲಿಗಾಗಿ ಅನಿಲ್ ಅಂಬಾನಿ ವಿರುದ್ಧ NCLT ಮೆಟ್ಟಿಲೇರಿದ SBIಸಾಲ ವಸೂಲಿಗಾಗಿ ಅನಿಲ್ ಅಂಬಾನಿ ವಿರುದ್ಧ NCLT ಮೆಟ್ಟಿಲೇರಿದ SBI

ನ್ಯಾಯಾಲಯದ ಆದೇಶ ಇರುವುದರಿಂದ ಕಂಪೆನಿಯ ಯಾವುದೇ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ. ಆ ಕಾರಣಕ್ಕೆ ಸಾಲದ ಮೇಲಿನ ಬಡ್ಡಿ ಪಾವತಿ ತಡವಾಗಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಲಾಗಿದೆ.

HDFC, ಆಕ್ಸಿಸ್ ಬ್ಯಾಂಕ್ ಗೆ ರಿಲಯನ್ಸ್ ಕ್ಯಾಪಿಟಲ್ ಬಡ್ಡಿ ಬಾಕಿ

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಕ್ಯಾಪಿಟಲ್ ನಿವ್ವಳ ನಷ್ಟ 2577 ಕೋಟಿ ರುಪಾಯಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ನಷ್ಟ 96 ಕೋಟಿ ರುಪಾಯಿ ಇತ್ತು. 2020- 2021ನೇ ಸಾಲಿನ ಜುಲೈನಿಂದ ಸೆಪ್ಟೆಂಬರ್ ತನಕದ ಒಟ್ಟಾರೆ ಆದಾಯ 4929 ಕೋಟಿ ರುಪಾಯಿಗೆ ಕುಸಿತವಾಗಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಆದಾಯ 5064 ಕೋಟಿ ಇತ್ತು ಎಂದು ತಿಳಿಸಲಾಗಿದೆ.

ಒಟ್ಟಾರೆ ವೆಚ್ಚ 7183 ಕೋಟಿ ಆಗಿದ್ದು, ಈ ಅವಧಿಯಲ್ಲಿ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವೆಚ್ಚವು 9042 ಕೋಟಿ ರುಪಾಯಿ ಇತ್ತು. ರಿಲಯನ್ಸ್ ಕ್ಯಾಪಿಟಲ್ ಕಂಪೆನಿಯು ಫೈನಾನ್ಸ್ ಮತ್ತು ಹೂಡಿಕೆ ಚಟುವಟಿಕೆಗಳು, ಲೈಫ್ ಹಾಗೂ ಜನರಲ್ ಇನ್ಷೂರೆನ್ಸ್, ಕಮರ್ಷಿಯಲ್ ಫೈನಾನ್ಸ್, ಗೃಹ ಸಾಲ ಹಾಗೂ ಇತರ ಹಣಕಾಸು ಸಾಲ ವಿತರಣೆ ವ್ಯವಹಾರದಲ್ಲಿ ತೊಡಗಿಕೊಂಡಿದೆ.

English summary

Anil Ambani Led Reliance Capital Default Interest On Loan To HDFC, Axis Bank

Anil Ambani led Reliance Capital company default interest on loan payment to HDFC and Axis Bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X