For Quick Alerts
ALLOW NOTIFICATIONS  
For Daily Alerts

ದೆಹಲಿ ವಿದ್ಯುತ್ ವಿತರಣೆ ವ್ಯವಹಾರದಲ್ಲಿ ಪಾಲು ಮಾರಾಟಕ್ಕೆ ಇಟ್ಟರೆ ಅನಿಲ್ ಅಂಬಾನಿ?

|

ಅನಿಲ್ ಅಂಬಾನಿ ನೇತೃತ್ವದ ರಿಲಯನ್ದ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ದೆಹಲಿ ವಿದ್ಯುತ್ ವಿತರಣೆ ವ್ಯವಹಾರವನ್ನು ಖರೀದಿ ಮಾಡಲು ಆರಂಭಿಕವಾಗಿ ಬ್ರೂಕ್ ಫೀಲ್ಡ್ ಅಸೆಟ್ ಮ್ಯಾನೇಜ್ ಮೆಂಟ್ ಸೇರಿ ಎಂಟು ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ ಎಂದು ಈ ವಿದ್ಯಮಾನದ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

 

BSES ರಾಜಧಾನಿ ಪವರ್ ಲಿಮಿಟೆಡ್ (BRPL) ಹಾಗೂ BSES ಯಮುನಾ ಪವರ್ ಲಿಮಿಟೆಡ್ (BYPL) ಎರಡರಲ್ಲೂ ತಲಾ 51 ಪರ್ಸೆಂಟ್ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಅದಕ್ಕೆ ಸೂಕ್ತ ಖರೀದಿದಾರರನ್ನು ಹುಡುಕಲು KPMGಯನ್ನು ನೇಮಿಸಿಕೊಳ್ಳಲಾಗಿದೆ.

 

ಯೆಸ್‌ ಬ್ಯಾಂಕ್‌ಗೆ ಸಾಲ ಮರುಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್ಯೆಸ್‌ ಬ್ಯಾಂಕ್‌ಗೆ ಸಾಲ ಮರುಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್

ಈ ಎರಡೂ ವಿದ್ಯುತ್ ವಿತರಣೆ ವ್ಯವಹಾರದ ಮೂಲಕ ದೆಹಲಿಯಲ್ಲಿ 44 ಲಕ್ಷ ಮಂದಿಗೆ ಸೇವೆ ಒದಗಿಸಲಾಗುತ್ತಿದೆ. ಆಗಸ್ಟ್ 2018ರಲ್ಲಿ ಮುಂಬೈ ನಗರ ವಿದ್ಯುತ್ ವಿತರಣೆ ವ್ಯವಹಾರವನ್ನು ಅದಾನಿ ಟ್ರಾನ್ಸ್ ಮಿಷನ್ ಲಿಮಿಟೆಡ್ ಗೆ 18,800 ಕೋಟಿ ರುಪಾಯಿಗೆ ಆಗಸ್ಟ್ 2018ರಲ್ಲಿ ಮಾರಲಾಗಿತ್ತು. ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಗೆ ಸೇರಿದ್ದು, ಆಸ್ತಿ ಮಾರಾಟ ಮಾಡಿ ಸಾಲ ತೀರಿಸಬೇಕು ಎಂಬ ಉದ್ದೇಶ ಹೊಂದಿದೆ.

ದೆಹಲಿ ವಿದ್ಯುತ್ ವಿತರಣೆ ವ್ಯವಹಾರ ಮಾರಾಟಕ್ಕೆ ಇಟ್ಟರೆ ಅನಿಲ್ ಅಂಬಾನಿ?

ಆದರೆ, ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ರಿಲಯನ್ಸ್ ಇನ್ ಫ್ರಾಸ್ಟಕ್ಚರ್ ನ ವಕ್ತಾರರು ನಿರಾಕರಿಸಿದ್ದಾರೆ. ಇನ್ನು KPMG ವಕ್ತಾರರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಮೇ 8ರಂದು ಘೋಷಣೆ ಮಾಡುವ ವೇಳೆ, ಮುಂದಿನ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಶೂನ್ಯ ಸಾಲದ ಕಂಪೆನಿ ಆಗಿರುತ್ತದೆ ಎಂದು ಘೋಷಣೆ ಮಾಡಲಾಗಿತ್ತು.

English summary

Anil Ambani's Delhi Power Distribution Business For Sale: Report

Here is the detail of Anil Ambani's Delhi power distribution business sale report.
Story first published: Tuesday, May 12, 2020, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X