For Quick Alerts
ALLOW NOTIFICATIONS  
For Daily Alerts

ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿ ಆಪಲ್; ಪಕ್ಕಕ್ಕೆ ಸರಿದ ಸೌದಿ ಅರಾಮ್ಕೋ

|

ಪ್ರಮುಖವಾಗಿ ಫೋನ್ ತಯಾರಿಕೆ ಕಂಪೆನಿ ಎಂದು ಗುರುತಿಸಿಕೊಂಡಿರುವ ಆಪಲ್ ಈಗ ವಿಶ್ವ ಮಟ್ಟದ ದಾಖಲೆಯೊಂದನ್ನು ಮಾಡಿದೆ. ಈಗ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಕಂಪೆನಿ ಆಪಲ್ ಎನಿಸಿಕೊಂಡಿದೆ. ಇಲ್ಲಿಯವರೆಗೆ ಆ ಸ್ಥಾನವನ್ನು ಅಲಂಕರಿಸಿದ್ದ ಕಂಪೆನಿ ಸೌದಿ ಅರಾಮ್ಕೋ. ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಆಪಲ್ ಕಂಪೆನಿಯ ಷೇರು ಶುಕ್ರವಾರ 10% ಏರಿಕೆ ಕಂಡಿದೆ.

ಆ ಮೂಲಕ ದಿನದ ಕೊನೆಗೆ ವಹಿವಾಟು ಮುಗಿಸುವ ಹೊತ್ತಿಗೆ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ $ 1.817 ಟ್ರಿಲಿಯನ್ ತಲುಪಿತ್ತು. ಭಾರತದ ಇವತ್ತಿನ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 135 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪೆನಿ ಸೌದಿ ಅರಾಮ್ಕೋ ಬಂಡವಾಳ ಮೌಲ್ಯವನ್ನೂ ದಾಟಿದೆ.

ಚೀನಾ ಅಲ್ಲ, ಚೆನ್ನೈನಲ್ಲೇ ಆಪಲ್ ಐಫೋನ್ ಉತ್ಪಾದನೆಚೀನಾ ಅಲ್ಲ, ಚೆನ್ನೈನಲ್ಲೇ ಆಪಲ್ ಐಫೋನ್ ಉತ್ಪಾದನೆ

ಇದಕ್ಕೂ ಮುನ್ನ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅನ್ನು ಸಹ ಮೀರಿ, ಯು.ಎಸ್.ನ ಅತಿ ದೊಡ್ಡ ಸಾರ್ವಜನಿಕ ಕಂಪೆನಿ ಎನಿಸಿಕೊಂಡಿತು. ಕೊರೊನಾ ಬಿಕ್ಕಟ್ಟು ಇರುವ ಸಂದರ್ಭದಲ್ಲಿ ಸೌದಿಯ ಕಂಪೆನಿ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆರಂಭದಲ್ಲಿ ಕಂಪೆನಿಯ ಮೌಲ್ಯಮಾಪನ 2 ಲಕ್ಷ ಅಮೆರಿಕನ್ ಡಾಲರ್ ಎಂದು ಮಾಡಿಕೊಂಡಿದ್ದರು. ಮತ್ತು ಸಾರ್ವಜನಿಕ ಷೇರು ವಿತರಣೆ ಮೂಲಕ 100 ಬಿಲಿಯನ್ USD ಸಂಗ್ರಹಿಸಲು ಮುಂದಾಗಿದ್ದರು.

ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿ ಆಪಲ್; ಪಕ್ಕಕ್ಕೆ ಸರಿದ ಅರಾಮ್ಕೋ

ಆದರೆ, ವಿದೇಶಿ ಹೂಡಿಕೆದಾರರು ದರದ ವಿಚಾರದಲ್ಲಿ ಹಿಂಜರಿದ ಹಿನ್ನೆಲೆಯಲ್ಲಿ ಸರ್ಕಾರವು ಸಣ್ಣ ಪ್ರಮಾಣದಲ್ಲಿ ದೇಶೀಯ ವಿತರಣೆ ಮಾಡಿತು ಹಾಗೂ 30 ಬಿಲಿಯನ್ ಡಾಲರ್ ಅಮೆರಿಕನ್ ಡಾಲರ್ ಸಂಗ್ರಹಿಸುವ ಮೂಲಕ ಅತಿ ದೊಡ್ಡ ಐಪಿಒ ಎಂಬ ದಾಖಲೆಯನ್ನು ಬರೆಯಿತು. ಈ ವರ್ಷ ಕಚ್ಚಾ ತೈಲ ಬೆಲೆ ಕುಸಿತ ಕಂಡು, ಅರಾಮ್ಕೋದ ಎರಡನೇ ತ್ರೈಮಾಸಿಕದ ಆದಾಯ 76 ಬಿಲಿಯನ್ ಡಾಲರ್ ನಿಂದ 37 ಬಿಲಿಯಬ್ ಡಾಲರ್ ಗೆ ಇಳಿಕೆಯಾಯಿತು.

ಅರಾಮ್ಕೋ ಷೇರಿನ ಬೆಲೆ ಡಿಸೆಂಬರ್ ಕೊನೆಗೆ 6.4% ಕಡಿಮೆ ಆಗಿತ್ತು. ಆದರೆ ಇತರ ಪ್ರಮುಖ ತೈಲ ಕಂಪೆನಿಗಳಾದ ಎಕ್ಸಾನ್ ಮೊಬಿಲ್ (40%) ಮತ್ತು ರಾಯಲ್ ಡಚ್ ಶೆಲ್ (50%) ಷೇರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾದವು. ಆದರೆ ಈ ವರ್ಷ ಇಲ್ಲಿಯವರೆಗೆ ಆಪಲ್ ಕಂಪೆನಿ ಷೇರುಗಳು 45% ಏರಿಕೆ ಆಗಿದೆ.

English summary

Apple Inc Now World's Most Valued Company, Overtaking Saudi Aramco

Apple inc now world's most valued company by surge of 10% share value. Overtaking Saudi Aramco company value.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X