For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಆಪಲ್ ಹೊಸ ದಾಖಲೆ; ಒಂದೇ ದಿನ 15 ಲಕ್ಷ ಕೋಟಿ ರೂ ಗಳಿಕೆ

|

ವಾಷಿಂಗ್ಟನ್, ನ. 11: ವಿಶ್ವದ ಅತಿದೊಡ್ಡ ಕಂಪನಿ ಎನಿಸಿರುವ ಆಪಲ್ ಹೊಸ ದಾಖಲೆ ಬರೆದಿದೆ. ಆಪಲ್ ಕಂಪನಿಯ ಷೇರು ನಿನ್ನೆ ಗುರುವಾರ ಗಣನೀಯ ವೃದ್ಧಿ ಹೊಂದಿದ ಪರಿಣಾಮ ಸಂಸ್ಥೆಗೆ 190.9 ಬಿಲಿಯನ್ ಡಾಲರ್ ಲಾಭವಾಗಿದೆ. ಅಂದರೆ ಸುಮಾರು 15 ಲಕ್ಷ ಕೋಟಿ ರೂಪಾಯಿಯಷ್ಟು ಲಾಭವನ್ನು ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಆಪಲ್ ಕಂಡಿದೆ. ಅಮೆರಿಕದ ಷೇರುಪೇಟೆ ಇತಿಹಾಸದಲ್ಲೇ ಇದು ಹೊಸ ದಾಖಲೆ ಎನಿಸಿದೆ.

ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?

ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಅಮೇಜಾನ್ ಕಂಪನಿ ಅಮೆರಿಕದ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ 190.8 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು. ಆಪಲ್ ನಿನ್ನೆ ಇದಕ್ಕಿಂತ ಸ್ವಲ್ಪ ಹೆಚ್ಚಿನ ಲಾಭ ಗಳಿಸಿದೆ. ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಒಂದು ಕಂಪನಿ ಅತಿ ಹೆಚ್ಚು ಲಾಭ ಗಳಿಸಿರುವುದನ್ನು ಪಟ್ಟಿ ಮಾಡಿದರೆ ಅದರಲ್ಲಿ ಟಾಪ್-5 ಲಿಸ್ಟ್‌ನಲ್ಲಿ ಆಪಲ್ ಕಂಪನಿಯೇ ನಾಲ್ಕು ಬಾರಿ ಬರುತ್ತದೆ. ಈ ಹಿಂದೆಯೂ ಆಪಲ್ ಕಂಪನಿ ಬಹಳಷ್ಟು ಬಾರಿ ಗಣನೀಯ ಎನಿಸುವಷ್ಟು ಏರಿಳಿತಗಳನ್ನು ಷೇರುಪೇಟೆಯಲ್ಲಿ ಕಂಡಿದ್ದಿದೆ. ಭಾರತದಕ್ಕಿಂತ ಅಮೆರಿಕದ ಷೇರುಪೇಟೆ ಹೆಚ್ಚು ಅಸ್ಥಿರ ಎಂದು ಹೇಳಲಾಗುತ್ತದೆ.

ಆಪಲ್ ಹೊಸ ದಾಖಲೆ; ಒಂದೇ ದಿನ 15 ಲಕ್ಷ ಕೋಟಿ ರೂ ಗಳಿಕೆ

ಆಪಲ್ ಕಂಪನಿ ನಿನ್ನೆ (ನ. 10) ಗಳಿಸಿದ ಲಾಭ ಶೇ. 8.8 ಆಗಿದೆ. ಇದರೊಂದಿಗೆ ಆ ಸಂಸ್ಥೆ ಷೇರುಪೇಟೆಯಲ್ಲಿ ಹೊಂದಿರುವ ಒಟ್ಟು ಮೌಲ್ಯ 2.34 ಟ್ರಿಲಿಯನ್ ಡಾಲರ್ (189 ಲಕ್ಷ ಕೋಟಿ ರೂಪಾಯಿ) ಆಗಿದೆ. ಸದ್ಯ ಆಪಲ್ ಕಂಪನಿಯ ಷೇರು ಬೆಲೆ 146.87 ಡಾಲರ್ (ಸುಮಾರು 11879.65 ರೂಪಾಯಿ) ಇದೆ. ಆದರೂ ಈ ವರ್ಷ ಷೇರು ಬೆಲೆ ಶೇ. 17ರಷ್ಟು ಕಡಿಮೆಯೇ ಇದೆ.

ಆಪಲ್ ಹೊಸ ದಾಖಲೆ; ಒಂದೇ ದಿನ 15 ಲಕ್ಷ ಕೋಟಿ ರೂ ಗಳಿಕೆ

ಐಫೋನ್ ತಯಾರಿಸುವ ಆಪಲ್ ಕಂಪನಿ ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರೀ ಲಾಭ ತೋರಿಸಿದೆ. ಆರ್ಥಿಕ ಹಿಂಜರಿತದ ಮಧ್ಯೆಯೂ ಆಪಲ್ ಉತ್ಪನ್ನಗಳು ಅದರಲ್ಲೂ ಐಫೋನ್‌ಗಳು ವಿಶ್ವಾದ್ಯಂತ ಭರ್ಜರಿ ಮಾರಾಟ ಕಂಡಿವೆ. ಭಾರತದ ಮಾರುಕಟ್ಟೆಯಲ್ಲಿ ಗಣನೀಯ ವ್ಯವಹಾರ ವೃದ್ಧಿ ಕಂಡಿದೆ.

English summary

Apple New Record; Adds 191 Billion USD To Its Market Cap in Single Day

Apple shares have risen 8.8% on November 10th, a great one day surge by any listed company in US stock market. 190.89 billion USD is added to Apple's net wo.
Story first published: Friday, November 11, 2022, 10:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X