For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನ 12ರೊಳಗೆ ಅರ್ಜಿ ಹಾಕಿದರೆ ಸಂಜೆಯೊಳಗೆ ತತ್ಕಾಲ್ ಪಾಸ್ ಪೋರ್ಟ್

|

ದುಬೈನಲ್ಲಿ ಮತ್ತು ಉತ್ತರ ಎಮಿರೇಟ್ ನಲ್ಲಿ ಭಾರತೀಯ ವಲಸಿಗರಿಗೆ ಈಗ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಸಿಗಲಿದೆ. ಆದರೆ ದುಬಾರಿ ಶುಲ್ಕದ ಜತೆಗೆ ಕೆಲವು ಷರತ್ತುಗಳಿವೆ ಎಂದು ಭಾರತೀಯ ದೂತಾವಾಸ ಕಚೇರಿ ಘೋಷಣೆ ಮಾಡಿದೆ. ದುಬೈನಲ್ಲಿ ಇರುವ ಭಾರತದ ದೂತಾವಾಸ ಜನರಲ್ ವಿಪುಲ್ ಗುರುವಾರ ಈ ಬಗ್ಗೆ ತಿಳಿಸಿದ್ದಾರೆ.

 

ತತ್ಕಾಲ್ ಪಾಸ್ ಪೋರ್ಟ್ ಗಳನ್ನು (ತುರ್ತು ಪ್ರಕರಣದಲ್ಲಿ) ಅದೇ ದಿನ ವಿತರಿಸಲು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ. ದೂತಾವಾಸ ಕಚೇರಿಯಲ್ಲಿ ಪ್ರವಾಸಿ ಭಾರತೀಯದ ದಿವಸ್ (ಅನಿವಾಸಿ ಭಾರತೀಯ- ಎನ್ ಆರ್ ಐ ಡೇ) ಆಚರಣೆ ವೇಳೆ ಈ ಮಾಹಿತಿ ನೀಡಿದ್ದಾರೆ.

 

ಬಿಎಲ್ ಎಸ್ ಇಂಟರ್ ನ್ಯಾಷನಲ್ ಕಚೇರಿಯಲ್ಲಿ ಮಧ್ಯಾಹ್ನಕ್ಕೂ ಮುಂಚಿತವಾಗಿ ಅರ್ಜಿ ಸಲ್ಲಿಸಿದ್ದರೆ ಮಾತ್ರ ತತ್ಕಾಲ್ ಪಾಸ್ ಪೋರ್ಟ್ ದೊರೆಯಲಿದೆ. ಈಗಾಗಲೇ ಇಪ್ಪತ್ನಾಲ್ಕು ಗಂಟೆಯೊಳಗೆ ತತ್ಕಾಲ್ ಪಾಸ್ ಪೋರ್ಟ್ ವಿತರಿಸುತ್ತಿದ್ದೇವೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿದ್ದೇವೆ. ಮಧ್ಯಾಹ್ನ ಹನ್ನೆರಡು ಗಂಟೆಗೂ ಮೊದಲೇ ಅರ್ಜಿ ಹಾಕಿದರೆ ಅದೇ ದಿನ ತತ್ಕಾಲ್ ಪಾಸ್ ಪೋರ್ಟ್ ವಿತರಿಸುತ್ತೇವೆ ಎಂದಿದ್ದಾರೆ.

ಮಧ್ಯಾಹ್ನ 12ರೊಳಗೆ ಅರ್ಜಿ ಹಾಕಿದರೆ ಸಂಜೆಯೊಳಗೆ ತತ್ಕಾಲ್ ಪಾಸ್ ಪೋರ್ಟ್

ಕಳೆದ ವರ್ಷ ದೂತಾವಾಸ ಕಚೇರಿಯಿಂದ ಎರಡು ಲಕ್ಷ ಪಾಸ್ ಪೋರ್ಟ್ ವಿತರಿಸಲಾಗಿದೆ. ಅದರಲ್ಲಿ ಎರಡೂವರೆ ಸಾವಿರ ತುರ್ತು ಪ್ರಮಾಣಪತ್ರಗಳು (ಒನ್ ವೇ ಟ್ರಾವೆಲ್ ಡಾಕ್ಯುಮೆಂಟ್). ಎರಡುಸಾವಿರದ ಎಂಟುನೂರಕ್ಕೂ ಹೆಚ್ಚು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಳು, ಎಪ್ಪತ್ತೆರಡು ಸಾವಿರದಷ್ಟು ಜನನ- ಮರಣ ನೋಂದಣಿ ಎಂದು ವಿಪುಲ್ ಮಾಹಿತಿ ಒದಗಿಸಿದ್ದಾರೆ.

English summary

Apply Passport In The Morning Get It By Evening, Said Indian Consulate In Dubai

Indian consulate said in Dubai that, if Indian expat apply for passport in the morning, get it by evening. Here is the details.
Story first published: Friday, January 10, 2020, 14:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X